ವಿರೋಧ ಪಕ್ಷಗಳಲ್ಲ ಜನ ಹೇಳುವುದು ಮುಖ್ಯ ಎಂದರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ ಅಂತ ಮಾಧ್ಯಮದವರು ಕೇಳಿದಾಗ, ಹಾಗೇನೂ ಇಲ್ಲ, ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲೇ ತಪ್ಪಿತಸ್ಥರನ್ನು ಪೊಲೀಸರು ಬಂಧಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಚಿಕ್ಕಮಗಳೂರು: ವಿರೋಧ ಪಕ್ಷಗಳು, ಸರ್ಕಾರದ ಕಾರ್ಯವೈಖರಿಯನ್ನು ತಮಗೆ ತಿಳಿಯುವ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತವೆ ಅವರ ಬಾಯಿಗೆ ಲಗಾಮು ಹಾಕಲು ಸಾಧ್ಯವೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ (Basavaraj Bommai) ಅವರು ಮಂಗಳವಾರ ಶೃಂಗೇರಿಯಲ್ಲಿ (Sringeri) ಮಾಧ್ಯಮದವರಿಗೆ ಹೇಳಿದರು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಶಾರದಾಂಬೆಯ (Sharadambe) ದರ್ಶನ ಪಡೆದು ಶಾರದಾ ಪೀಠದ ಜಗದ್ಗುರು ವಿಧುಶೇಖರಭಾರತೀ ಸನ್ನಿಧಾನಂಗಳ್ ಅವರ ಆಶೀರ್ವಾದ ಪಡೆಯಲು ಬಂದಿದ್ದು ನಾಡಿನ ಸುಭಿಕ್ಷೆಗಾಗಿ ಬಹಳ ದೊಡ್ಡ ಶಕ್ತಿಯಾಗಿರುವ ಶಾರದಾಂಬೆಗೆ ಪ್ರಾರ್ಥನೆ ಸಲ್ಲಿಸಿದ್ದಾಗಿ ಮುಖ್ಯಮಂತ್ರಿಗಳು ಹೇಳಿದರು. ಚಿಕ್ಕಮಗಳೂರಿಗೆ ಇದಕ್ಕೂ ಮೊದಲು ಹಲವಾರು ಬಾರಿ ಬಂದಿರೋದು ನಿಜವಾದರೂ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕಾಫಿನಾಡಿಗೆ ಬಂದಿರುವುದಾಗಿ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ ಅಂತ ಮಾಧ್ಯಮದವರು ಕೇಳಿದಾಗ, ಹಾಗೇನೂ ಇಲ್ಲ, ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲೇ ತಪ್ಪಿತಸ್ಥರನ್ನು ಪೊಲೀಸರು ಬಂಧಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ರಾಮರಾಜ್ಯ ಮಾಡುತ್ತೇವೆ ಅಂತ ಅಧಿಕಾರಕ್ಕೆ ಬಂದವರು ರಾವಣ ರಾಜ್ಯ ಮಾಡಿದ್ದಾರೆ ಅಂತ ವಿರೋಧ ಪಕ್ಷಗಳು ಹೇಳುತ್ತಿರುವ ಬಗ್ಗೆ ಹೇಳಿದಾಗ ಮುಖ್ಯಮಂತ್ರಿಗಳು, ಅದು ಅವರು ಅನಿಸಿಕೆ, ನಮಗೆ ಅದು ಮುಖ್ಯವಲ್ಲ, ಜನ ಏನು ಹೇಳುತ್ತಾರೆ ಅನ್ನೋದು ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ: ಬೊಮ್ಮಾಯಿ ಭಾಷಣಕ್ಕೆ ಅಡ್ಡಿ: ಸಂಶೋಧನಾ ವಿದ್ಯಾರ್ಥಿಯ ನೋಂದಣಿ ರದ್ದುಗೊಳಿಸ್ತೇವೆ ಎಂದು ವಿಶ್ವವಿದ್ಯಾಲಯದಿಂದ ನೋಟಿಸ್