AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರ ತಡೆಯುವ ಪ್ರಯತ್ನ ಪ್ರಧಾನಿ ಮೋದಿ ಯಾಕೆ ಮಾಡುತ್ತಿಲ್ಲ? ದಿಂಗಾಲೇಶ್ವರ ಸ್ವಾಮೀಜಿ

ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರ ತಡೆಯುವ ಪ್ರಯತ್ನ ಪ್ರಧಾನಿ ಮೋದಿ ಯಾಕೆ ಮಾಡುತ್ತಿಲ್ಲ? ದಿಂಗಾಲೇಶ್ವರ ಸ್ವಾಮೀಜಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 19, 2022 | 7:14 PM

ಮನಸ್ಸು ಮಾಡಿದರೆ ಮೋದಿಯವರು ಏನು ಬೇಕಾದರೂ ಮಾಡಬಲ್ಲರು ಅಂತ ಜನ ಹೇಳುತ್ತಾರೆ. ಹಾಗಿದ್ದಲ್ಲಿ, ಯಾವುದೇ ಒಂದು ಕಾಮಗಾರಿಗೆ ಮಂಜೂರಾಗುವ ಅನುದಾನ ನೇರವಾಗಿ ಅದೇ ಕಾಮಗಾರಿಗೆ ಹೋಗುವಂಥ ಒಂದು ಕಾನೂನನ್ನು ಪ್ರಧಾನಿ ಮೋದಿಯವರು ಯಾಕೆ ರೂಪಿಸಬಾರದು ಎಂದು ಸ್ವಾಮೀಜಿ ಕೇಳಿದರು.

ಮಠ ಮಾನ್ಯಗಳಿಗೆ ಬಿಡುಗಡೆ ಆಗುವ ಅನುದಾನದಲ್ಲೂ ಶೇ. 30ರಷ್ಟು ಕಮೀಶನ್ ನೀಡಬೇಕಿದೆ ಅಂತ ಹೇಳಿ ರಾಜ್ಯ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿರುವ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ (Dingaleshwar Swamiji) ಅವರು ಮಂಗಳವಾರದಂದು ನೇರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ (PM Narendra Modi) ಸವಾಲು ಎಸೆದಿದ್ದಾರೆ. ಗದಗನಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಶ್ರೀಗಳು, ಇಡೀ ದೇಶ ಮೋದಿಯವರನ್ನು ಆದರ್ಶಮಯ ಪ್ರಧಾನಿ ಹಾಡಿ ಹೊಗಳುತ್ತದೆ. ಅದರೆ ಅವರು ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರವನ್ನು (corruption) ತಡೆಯಲು ಯಾಕೆ ಪ್ರಯತ್ನಿಸುತ್ತಿಲ್ಲ? ಅವರಿಗೆ ಇರುವ ಸಮಸ್ಯೆಯಾದರೂ ಏನು? ಮನಸ್ಸು ಮಾಡಿದರೆ ಮೋದಿಯವರು ಏನು ಬೇಕಾದರೂ ಮಾಡಬಲ್ಲರು ಅಂತ ಜನ ಹೇಳುತ್ತಾರೆ. ಹಾಗಿದ್ದಲ್ಲಿ, ಯಾವುದೇ ಒಂದು ಕಾಮಗಾರಿಗೆ ಮಂಜೂರಾಗುವ ಅನುದಾನ ನೇರವಾಗಿ ಅದೇ ಕಾಮಗಾರಿಗೆ ಹೋಗುವಂಥ ಒಂದು ಕಾನೂನನ್ನು ಪ್ರಧಾನಿ ಮೋದಿಯವರು ಯಾಕೆ ರೂಪಿಸಬಾರದು ಎಂದು ದಿಂಗಾಲೇಶ್ವರ ಸ್ವಾಮೀಜಿ ಕೇಳಿದರು.

ರಾಜ್ಯದ ರಾಜಕಾರಣದಲ್ಲಿ ಭ್ರಷ್ಟಾಚಾರ ಯಾವಮಟ್ಟಿಗೆ ಹಾಸುಹೊಕ್ಕಿದೆ ಎಂದರೆ ಯಾವುದೋ ಒಂದು ಹಳ್ಳಿಯಲ್ಲಿ ರೈತನೊಬ್ಬ ತನ್ನ ಜಮೀನು ಮಾರಾಟ ಮಾಡಬೇಕೆಂದುಕೊಂಡರೆ ಅಲ್ಲೂ ರಾಜಕಾರಣಿಗಳು ಪ್ರತ್ಯಕ್ಷರಾಗಿ ಬಿಡುತ್ತಾರೆ. ದೇಶದಲ್ಲಿ ಬಹಳ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶ್ರೀಗಳು ಹೇಳುತ್ತಾರೆ.
ಉತ್ತರ ಕರ್ನಾಟಕದ ಎಲ್ಲ ನದಿಗಳ ನೀರಿ ಸದ್ಬಳಕೆಯಾಗಿ ಈ ಭಾಗಕ್ಕೆ ಒಂದು ಸಮಗ್ರವಾದ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬರಬೇಕೆನ್ನುವುದು ನಮ್ಮ ಎಂದಿನ ಬೇಡಿಕೆಯಾಗಿದೆ, ಇದೇ ಹೋರಾಟವನ್ನು ಮುಂದುವರಿಸುವುದಾಗಿ ಸ್ವಾಮೀಜಿ ಹೇಳಿದರು.

ತಾವು ಯಾವತ್ತೂ ಒಬ್ಬರ ಪರ ವಹಿಸಿ ಮಾತಾಡುವುದಿಲ್ಲ, ಅನ್ಯಾಯವನ್ನು ಖಂಡಿಸುತ್ತಾ ನ್ಯಾಯವನ್ನು ಬೆಂಬಲಿಸುತ್ತೇವೆ ಅಂತ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸ್ಪಷ್ಟವಾಗಿ ಹೇಳಿದರು.

ಇದನ್ನೂ ಓದಿ:    ಬಸವರಾಜ ಬೊಮ್ಮಾಯಿ ಕ್ಷೇತ್ರವೇ ಅಭಿವೃದ್ಧಿಯಾಗಿಲ್ಲ, ರಾಜ್ಯದ ಅಭಿವೃದ್ಧಿ ಎಲ್ಲಿಂದ ಆಗುತ್ತೆ; ಸರ್ಕಾರದ ವಿರುದ್ಧ ಕಿಡಿಕಾರಿದ ದಿಂಗಾಲೇಶ್ವರಶ್ರೀ