ಬಸವರಾಜ ಬೊಮ್ಮಾಯಿ ಕ್ಷೇತ್ರವೇ ಅಭಿವೃದ್ಧಿಯಾಗಿಲ್ಲ, ರಾಜ್ಯದ ಅಭಿವೃದ್ಧಿ ಎಲ್ಲಿಂದ ಆಗುತ್ತೆ; ಸರ್ಕಾರದ ವಿರುದ್ಧ ಕಿಡಿಕಾರಿದ ದಿಂಗಾಲೇಶ್ವರಶ್ರೀ

ಮೊದಲು ಅಧಿಕಾರಿಗಳ ಮೂಲಕ ಲಂಚ ವಸೂಲಿ ಆಗುತ್ತಿತ್ತು. ಈಗ ಜನಪ್ರತಿನಿಧಿಗಳೇ ವಸೂಲಿ ಮಾಡುತ್ತಾರೆಂದು ಆರೋಪ ಮಾಡಿರುವ ದಿಂಗಾಲೇಶ್ವರ ಸ್ವಾಮೀಜಿ, ನಾಡಿನ ಮಠಾಧೀಶರು, ವಿಚಾರವಾದಿಗಳು ಸತ್ಯ ಹೇಳಬೇಕು.

ಬಸವರಾಜ ಬೊಮ್ಮಾಯಿ ಕ್ಷೇತ್ರವೇ ಅಭಿವೃದ್ಧಿಯಾಗಿಲ್ಲ, ರಾಜ್ಯದ ಅಭಿವೃದ್ಧಿ ಎಲ್ಲಿಂದ ಆಗುತ್ತೆ; ಸರ್ಕಾರದ ವಿರುದ್ಧ ಕಿಡಿಕಾರಿದ ದಿಂಗಾಲೇಶ್ವರಶ್ರೀ
ದಿಂಗಾಲೇಶ್ವರ ಸ್ವಾಮೀಜಿ
Follow us
TV9 Web
| Updated By: sandhya thejappa

Updated on:Apr 19, 2022 | 9:20 AM

ಗದಗ: ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕ್ಷೇತ್ರವೇ ಅಭಿವೃದ್ಧಿಯಾಗಿಲ್ಲ, ಇನ್ನು ರಾಜ್ಯದ ಅಭಿವೃದ್ಧಿ ಎಲ್ಲಿಂದ ಆಗುತ್ತೆ ಅಂತ ಗದಗದಲ್ಲಿ ಮುಖ್ಯಮಂತ್ರಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ (Dingaleshwar Swamiji) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಬೊಮ್ಮಾಯಿ ಕ್ಷೇತ್ರದಲ್ಲಿಯೇ ರಸ್ತೆಗಳು ಸರಿಯಾಗಿಲ್ಲ. ಇನ್ನು ಉತ್ತರ ಕರ್ನಾಟಕದ ಪರಿಸ್ಥಿತಿ ಹೇಗೆ ಚೆನ್ನಾಗಿರುತ್ತದೆ. ಚುನಾವಣೆ ಸಮಯದಲ್ಲಿ ಯದ್ವಾತದ್ವಾ ಹಣವನ್ನು ಚೆಲ್ಲುತ್ತಾರೆ. ಭ್ರಷ್ಟಾಚಾರ ಮಾಡಿ ದಾರಿ ತಪ್ಪುವುದಲ್ಲದೆ, ಜನರ ದಾರಿ ತಪ್ಪಿಸ್ತಾರೆ. ನಾಡಿನ ಬಗ್ಗೆ ಕಾಳಜಿ ಇದ್ದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ. ಟೆಂಡರ್ಗಳು ಜನಪ್ರತಿನಿಧಿಗಳ ಬೆಂಬಲಿಗರಿಗೆ ಮಾತ್ರ ಸಿಗುತ್ತದೆ. ಅಧಿಕಾರಿಗಳ ವರ್ಗಾವಣೆಯಲ್ಲಿ ದುಡ್ಡು, ಅನುದಾನ ಬಳಕೆಯಲ್ಲಿ ದುಡ್ಡು. ಹೀಗೆ ಪ್ರತಿಯೊಂದರಲ್ಲಿ ಲಂಚವಿದೆ ಅಂತ ದಿಂಗಾಲೇಶ್ವರಶ್ರೀಗಳು ಹೇಳಿದ್ದಾರೆ.

ಮೊದಲು ಅಧಿಕಾರಿಗಳ ಮೂಲಕ ಲಂಚ ವಸೂಲಿ ಆಗುತ್ತಿತ್ತು. ಈಗ ಜನಪ್ರತಿನಿಧಿಗಳೇ ವಸೂಲಿ ಮಾಡುತ್ತಾರೆಂದು ಆರೋಪ ಮಾಡಿರುವ ದಿಂಗಾಲೇಶ್ವರ ಸ್ವಾಮೀಜಿ, ನಾಡಿನ ಮಠಾಧೀಶರು, ವಿಚಾರವಾದಿಗಳು ಸತ್ಯ ಹೇಳಬೇಕು. ವೀರಶೈವ ಮಠಗಳಿಗೆ ರಾಜ್ಯ ಸರ್ಕಾರ ಅನುದಾನ ಕೊಟ್ಟಿಲ್ಲ. ಮಠಾಧೀಶರು ಮನವಿ ಮಾಡಿದರೂ ಅನುದಾನ ಕೊಟ್ಟಿಲ್ಲ. ಹೊಗಳುಭಟ್ಟರಿಗೆ, ಧಮ್ಕಿ ಹಾಕುವವರಿಗೆ ಅನುದಾನ ನೀಡುತ್ತಾರೆ ಎಂದು ಸಿಎಂ ವಿರುದ್ಧ ಗುಡುಗಿದ್ದಾರೆ.

ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿರುವ ದಿಂಗಾಲೇಶ್ವರಶ್ರೀ, ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರದ ಕಮಿಷನ್ ದಂಧೆ ರಾಜ್ಯದ ಜನತೆಗೆ ಗೊತ್ತಿದೆ. ರಾಜ್ಯದಲ್ಲಿ ಇತ್ತೀಚೆಗೆ ಭ್ರಷ್ಟಾಚಾರ ಮಿತಿಮೀರಿ ಹೋಗುತ್ತಿದೆ. ಆದರೆ ಯಾರೂ ಕೂಡ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ. ಏಕೆ ಬಾಯಿಮುಚ್ಚಿಕೊಂಡಿದ್ದಾರೆಂಬುದು ನನಗೆ ಗೊತ್ತಾಗುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರ ಅಧಿಕಾರಿಗಳ ಮೂಲಕ ಕಮಿಷನ್ ಪಡೆಯುತ್ತಿದೆ. ಬಾಲೆಹೊಸೂರು ಮಠದ ಯಾತ್ರಿ ನಿವಾಸಕ್ಕೆ ರಾಜ್ಯ ಸರ್ಕಾರ 75 ಲಕ್ಷ ರೂ. ಮಂಜೂರು ಮಾಡಿತ್ತು. ಅನುದಾನ ಬಿಡುಗಡೆಗೆ 25 ಲಕ್ಷ ಕಮಿಷನ್ ಕೇಳುತ್ತಾರೆ. ರಾಜ್ಯ ಸರ್ಕಾರದ ವ್ಯವಸ್ಥೆ 30 ಪರ್ಸೆಂಟೇಜ್​ಗೆ ಬಂದು ನಿಂತಿದೆ. ಇದು ಕೇವಲ ನಮ್ಮ ಮಠದ ವಿಚಾರ ಮಾತ್ರವಲ್ಲ. ಇಡೀ ರಾಜ್ಯದ ಸ್ಥಿತಿ ಹೀಗೆಯೇ ಇದೆ. ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ ರಾಜ್ಯ ಉದ್ಧಾರವಾಗಲ್ಲ ಅಂತ ಅಭಿಪ್ರಾಯಪಟ್ಟರು.

ಅಧಿಕಾರ ಇಲ್ಲದಿದ್ದಾಗ ಭ್ರಷ್ಟಾಚಾರದ ವಿರುದ್ಧ ಮಾತಾಡ್ತಾರೆ. ಆದರೆ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದಲ್ಲಿ ತೊಗುತ್ತಾರೆ. ನಮ್ಮ ಮಠದ ಕಾಮಗಾರಿಯನ್ನು ಲ್ಯಾಂಡ್ ಆರ್ಮಿಗೆ ನೀಡಿತ್ತು. ಕಾಮಗಾರಿ ಆರಂಭಿಸಲು 25 ಲಕ್ಷ ಕಮಿಷನ್ ಕೇಳಿದ್ದಾರೆ. ಕಮಿಷನ್ ನೀಡದಿದ್ದರೆ ಕೆಲಸ ಆರಂಭಿಸಲ್ಲ ಎಂದಿದ್ದರು. ನಾನು 100 ಬಾರಿ ಭೇಟಿಯಾದರೂ ಅನುದಾನ ರಿಲೀಸ್ ಆಗಿಲ್ಲ. ನಮ್ಮನ್ನು ಸಾಲಗಾರರ ರೀತಿಯಲ್ಲಿ ಸುತ್ತಾಡಿಸುತ್ತಿದ್ದಾರೆ. ಹಳ್ಳಿಯಿಂದ ದಿಲ್ಲಿಯವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಆದರ್ಶ ವ್ಯಕ್ತಿ ಅಂತಾರೆ. ಆದರೆ ಅವರು ಏಕೆ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತಿಲ್ಲ ಅಂತ ಟಿವಿ9ಗೆ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ

Mukesh Ambani Birthday: ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಬಾಲ್ಯ, ಐಷಾರಾಮಿ ನಿವಾಸದ ಕುರಿತ ಕುತೂಹಲಕರ ಮಾಹಿತಿ

ಕಲಬುರಗಿಯಲ್ಲಿ 545 ಪಿಎಸ್‌ಐಗಳ ನೇಮಕಾತಿಯಲ್ಲಿ ಭಾರೀ ಅಕ್ರಮ; 8 ಜನ ಅರೆಸ್ಟ್, ಎಸ್ಕೇಪ್ ಆದವರಿಗಾಗಿ ತಲಾಶ್

Published On - 9:15 am, Tue, 19 April 22

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?