ಸರ್ಕಾರವನ್ನು ಬ್ಲ್ಯಾಕ್ಮೇಲ್ ಮಾಡಲು ನಿರಾಣಿ ಪಂಚಮಸಾಲಿ ಪೀಠ ಬಳಸಿಕೊಂಡರು: ಬಸನಗೌಡ ಯತ್ನಾಳ್
ಅಸಲಿಗೆ ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡಲು ಮುರುಗೇಶ್ ನಿರಾಣಿ ಪಂಚಮಸಾಲಿ ಪೀಠವನ್ನು ಬಳಸಿಕೊಂಡರು ಎಂದು ಯತ್ನಾಳ್ ಹೇಳಿದರು. ನಿರಾಣಿ ಕುಟುಂಬಕ್ಕೆ ಪ್ರಯೋಜನ ಅಗುವಂತೆ ಮಾಡುವುದನ್ನು ಬಿಟ್ಟು ಈ ಪೀಠಕ್ಕೆ ಬೇರೆ ಉದ್ದೇಶ ಇರಲಿಲ್ಲ. ಬಡವರ ಬಗ್ಗೆ, ನಿರುದ್ಯೋಗಿಗಳ ಬಗ್ಗೆ ಪೀಠಕ್ಕೆ ಯಾವುದೇ ಕಾಳಜಿ ಇಲ್ಲ ಅಂತ ಯತ್ನಾಳ್ ಹೇಳಿದರು.
ವಿಜಯಪುರ: ತಮ್ಮ ಪಕ್ಷದ ಮಂತ್ರಿಗಳು, ಶಾಸಕರನ್ನು ಟೀಕಿಸಲೆಂದೇ ಬಿಜೆಪಿಯ ಬೆಂಕಿಚೆಂಡು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಅವರು ಮಂಗಳವಾರವನ್ನು ಮೀಸಲಿಟ್ಟಿದ್ದರೆಂದು ಕಾಣುತ್ತದೆ ಮಾರಾಯ್ರೇ. ಅವರು ಸಾಲುಸಾಲಾಗಿ ತಮ್ಮ ಪಕ್ಷದ ನಾಯಕರನ್ನು ಆರಿಸಿಕೊಂಡು ತರಾಟೆಗೆ ತೆಗೆದುಕೊಂಡರು. ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, (BS Yediyurappa) ಅವರ ಮಗ ಮತ್ತು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮತ್ತು ಇಲ್ಲಿ ಈ ವಿಡಿಯೋನಲ್ಲಿ ಬ್ರಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ. ಅವರು ಮಾತು ಶುರು ಮಾಡಿದ್ದು ಪಂಚಮ ಸಾಲಿ ಪೀಠದಿಂದ. ಇವರಿಗೆ ಎರಡನೇ ಯಾಕೆ ಬೇಕು ಎಂದು ಕೇಳಿದ ಯತ್ನಾಳ್ ಅವರು ಮಾಡಲು ಕೆಲಸವಿಲ್ಲದೆ ಇಂಥ ಬೇಡಿಕೆಗಳನ್ನು ಮುಂದಿಡುತ್ತಾರೆ ಎಂದರು.
ಅಸಲಿಗೆ ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡಲು ಮುರುಗೇಶ್ ನಿರಾಣಿ ಪಂಚಮಸಾಲಿ ಪೀಠವನ್ನು ಬಳಸಿಕೊಂಡರು ಎಂದು ಯತ್ನಾಳ್ ಹೇಳಿದರು. ನಿರಾಣಿಯನ್ನು ಮಂತ್ರಿಸ್ಥಾನದಲ್ಲಿ ಮುಂದುವರಿಸದಿದ್ದರೆ, ರಕ್ತಕ್ರಾಂತಿ ಆಗುತ್ತದೆ, ಬಿಜೆಪಿ ಸರ್ವನಾಶ ಆಗುತ್ತದೆ, ಪಂಚಮಸಾಲಿ ಲಿಂಗಾಯತರು ಒಂದು ಕೋಟಿಗಿಂತ ಜಾಸ್ತಿ ಇದ್ದಾರೆ ಅಂತೆಲ್ಲ ಬ್ಲ್ಯಾಕ್ ಮೇಲ್ ಮಾಡಲು ಪೀಠವನ್ನು ನಿರಾಣಿ ಬಳಸಿಕೊಂಡರು ಎಂದು ಅವರು ಹೇಳಿದರು.
ನಿರಾಣಿ ಕುಟುಂಬಕ್ಕೆ ಪ್ರಯೋಜನ ಅಗುವಂತೆ ಮಾಡುವುದನ್ನು ಬಿಟ್ಟು ಈ ಪೀಠಕ್ಕೆ ಬೇರೆ ಉದ್ದೇಶ ಇರಲಿಲ್ಲ. ಬಡವರ ಬಗ್ಗೆ, ನಿರುದ್ಯೋಗಿಗಳ ಬಗ್ಗೆ ಪೀಠಕ್ಕೆ ಯಾವುದೇ ಕಾಳಜಿ ಇಲ್ಲ ಅಂತ ಯತ್ನಾಳ್ ಹೇಳಿದರು.
ವಿಜಯೇಂದ್ರ, ಯಾರೋ ಒಬ್ಬರು ನನ್ನ ತಂದೆ ಪಂಚಮಸಾಲಿ ಲಿಂಗಾಯತರ ವಿರೋಧಿಗಳು ಅಂತ ಮಾತಾಡಿದನ್ನು ಉಲ್ಲೇಖಿಸಿದ ಯತ್ನಾಳ್ ಅವರು, ಯಾರೋ ಒಬ್ಬರು ಅಂತ ಅವರು ಹೇಳೋದ್ಯಾಕೆ, ನಾನೇ ಮಾಡಿದ್ದು ಅಂತ ಯತ್ನಾಳ್ ಹೇಳಿದರು.
ಇದನ್ನೂ ಓದಿ: ನಮ್ಮ ರಾಜ್ಯದಲ್ಲಿ ಡಿಸಿ ಮತ್ತು ಎಸ್ಪಿಗಳ ವರ್ಗಾವಣೆ ದಂಧೆಯನ್ನು ಒಬ್ಬ ಮಾಜಿ ಮುಖ್ಯಮಂತ್ರಿಯ ಮಗ ಆರಂಭಿಸಿದ: ಬಸನಗೌಡ ಯತ್ನಾಳ್