ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಶಿವಕುಮಾರ ಮುಖ್ಯಮಂತ್ರಿ ಆಗೋದು ಕಷ್ಟ: ಹೆಚ್ ಡಿ ಕುಮಾರಸ್ವಾಮಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 19, 2022 | 7:00 PM

2013ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಂಥ ಹಿರಿಯ ನಾಯಕನನ್ನೇ ಮೂಲೆಗುಂಪು ಮಾಡಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಹಾಗಾಗಿ ಕಾಂಗ್ರೆಸ್ ಗೆ ಬಹುಮತ ಸಿಕ್ಕರೂ ಶಿವಕುಮಾರ ಸಿಎಮ್ ಆಗುವುದು ಕಷ್ಟ ಎಂದು ಕುಮಾರಸ್ವಾಮಿ ಹೇಳಿದರು.

ಮೈಸೂರಲ್ಲಿ ಮಂಗಳವಾರ ಡಿಕೆ ಶಿವಕುಮಾರ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಕ್ಕಲಿಗ ಸಮುದಾಯದವರಿಗೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಇಲ್ಲ ಅಂತ ಹೇಳಿದ ಬಳಿಕ ದೊಡ್ಡಮಟ್ಟದ ಚರ್ಚೆ ಶುರುವಾಗಿದೆ ಮಾರಾಯ್ರೇ. ಈ ಬಗ್ಗೆ ಮೈಸೂರಲ್ಲಿ ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿದ ಹೆಚ್ ಡಿ ಕುಮಾರಸ್ವಾಮಿ ಅವರು ಶಿವಕುಮಾರ ಮುಖ್ಯಮಂತ್ರಿಯಾಗುವುದು ಅಷ್ಟು ಸುಲಭವಲ್ಲ, ಯಾಕೆಂದರೆ ತಮಗೆ ಸಿದ್ದರಾಮಯ್ಯ ಬಗ್ಗೆ ಶಿವಕುಮಾರಗಿಂತ ಚೆನ್ನಾಗಿ ಗೊತ್ತು. 2013ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಂಥ ಹಿರಿಯ ನಾಯಕನನ್ನೇ ಮೂಲೆಗುಂಪು ಮಾಡಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಹಾಗಾಗಿ ಕಾಂಗ್ರೆಸ್ ಗೆ ಬಹುಮತ ಸಿಕ್ಕರೂ ಶಿವಕುಮಾರ ಸಿಎಮ್ ಆಗುವುದು ಕಷ್ಟ ಎಂದು ಕುಮಾರಸ್ವಾಮಿ ಹೇಳಿದರು.