ಶಿವಕುಮಾರ ಮತ್ತು ಕುಮಾರಸ್ವಾಮಿ ಕೈಕುಲುಕಿದರು ಮತ್ತು ಜೊತೆಯಾಗಿ ದೀಪ ಬೆಳಗಿಸಿದರು!
ಮಂಗಳವಾರ ಮೈಸೂರಲ್ಲಿ ಆಯೋಜಿಸಿದ ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಡಿಕೆಶಿ ಮತ್ತು ಹೆಚ್ಡಿಕೆ ಒಂದೇ ವೇದಿಕೆ ಮೇಲೆ ಕಂಡರಲ್ಲದೆ ಪರಸ್ಪರ ಕೈಕುಲುಕಿದರು ಮತ್ತು ಜೊತೆಯಾಗಿ ದೀಪ ಬೆಳಗಿಸಿದರು.
ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಒಕ್ಕಲಿಗೆ ಸಮುದಾಯಕ್ಕೆ (Vokkaliga community) ಸೇರಿದ ರಾಜ್ಯದ ಪ್ರಮುಖ ನಾಯಕರು ಅನ್ನೋದು ಪ್ರಶ್ನಾತೀತ. ದೋಸ್ತಿ ಸರಕಾರ ಆಧಿಕಾರದಲ್ಲಿದ್ದಾಗ ಇವರಿಬ್ಬರ ನಡುವಿನ ದೋಸ್ತಿಯೂ ಗಾಢವಾಗಿತ್ತು. ಆದರೆ ಸರ್ಕಾರ ಉರುಳಿದ ಮೇಲೆ ದೋಸ್ತಿಯೂ ಉರುಳಿತು. ಮಂಗಳವಾರ ಮೈಸೂರಲ್ಲಿ ಆಯೋಜಿಸಿದ ಕೆಂಪೇಗೌಡರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಡಿಕೆಶಿ ಮತ್ತು ಹೆಚ್ಡಿಕೆ ಒಂದೇ ವೇದಿಕೆ ಮೇಲೆ ಕಂಡರಲ್ಲದೆ ಪರಸ್ಪರ ಕೈಕುಲುಕಿದರು ಮತ್ತು ಜೊತೆಯಾಗಿ ದೀಪ ಬೆಳಗಿಸಿದರು.
Latest Videos