ಕಾಲ್ತುಳಿತ ನಡೆದ ಜಾಗದಲ್ಲಿ ಒಂದು ಅಂಬ್ಯುಲೆನ್ಸ್ ಕೂಡ ಇರಲಿಲ್ಲ, ಹಣದಿಂದ ಅಕ್ಷತಾ ವಾಪಸ್ಸು ಬಂದಾಳೆಯೇ? ಅಶಯ್ ಅಂಬಲಿ

Updated on: Jun 09, 2025 | 5:16 PM

ನಮ್ಮ ಸೊಸೆ ಸಾಯುವುದನ್ನು ಪ್ರತ್ಯಕ್ಷವಾಗಿ ನೋಡಿದ ಮಗನೇ ಎಲ್ಲವನ್ನೂ ಹೇಳಿದ್ದಾನೆ, ನಾನೇನು ಹೇಳಲಿ ಎಂದು ಗದ್ಗದಿತ ಸ್ವರದಲ್ಲಿ ಅಶಯ್ ರಂಜನ್ ಅಂಬಲಿಯ ತಂದೆ ಹೇಳಿದರು. ಸರ್ಕಾರದ ಬಗ್ಗೆ ಏನು ಹೇಳೋದು? ಅದರಿಂದ ಪ್ರಯೋಜನವಾದರೂ ಏನು? ಮುಂದಿನ ದಿನಗಳಲ್ಲಿ ಇಂಥ ದುರ್ಘಟನೆ ಮತ್ತೊಮ್ಮೆ ನಡೆಯದಂತೆ ಸರ್ಕಾರ ನೋಡಿಕೊಳ್ಳಬೇಕು, ಎಂದು ಅವರು ಹೇಳಿದರು.

ಕಾರವಾರ, ಜೂನ್ 9: ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ ದುರ್ಮರಣಕ್ಕೀಡಾದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅಕ್ಷತಾ ಪೈ ಅವರ ಮನೆಗೆ ತೆರಳಿ ಪತಿ ಮತ್ತು ಅತ್ತೆ-ಮಾವಂದರಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ (Lakshmipriya, DC) ರೂ 25 ಲಕ್ಷ ಮೊತ್ತದ ಚೆಕ್ ನೀಡಿದರು. ಚೆಕ್ ಸ್ವೀಕರಿಸಿದ ಬಳಿಕ ಮಾತಾಡಿದ ಅಕ್ಷತಾ ಪತಿ ಅಶಯ್ ರಂಜನ್ ಅಂಬಲಿ, ಹಣದಿಂದ ಅಕ್ಷತಾ ವಾಪಸ್ಸು ಬರಲ್ಲ, ತನ್ನ ಕುಟುಂಬಕ್ಕೆ ಬಹಳ ಅನ್ಯಾಯವಾಗಿದೆ, ನೂಕುನುಗ್ಗಲು ಶುರುವಾದಾಗ ಸ್ಟೇಡಿಯಂ ಗೇಟ್ ಹಾಕಿರಲಿಲ್ಲ, ಗೇಟ್ ಹಾಕಿ ಅಂತ ಜನ ಕೂಗುತ್ತಿದ್ದರೂ ಆ ಕೆಲಸ ಯಾರೂ ಮಾಡಲಿಲ್ಲ, ಸ್ಥಳದಲ್ಲಿ ಅಂಬ್ಯುಲೆನ್ಸ್ ಕೂಡ ಇರಲಿಲ್ಲ, ಯಾವುದೋ ಕಾರಲ್ಲಿ ಜನರನ್ನು ಆಸ್ಪತ್ರೆಗಳಿಗೆ ಕಳಿಸುತ್ತಿದ್ದರು ಎಂದರು.

ಇದನ್ನೂ ಓದಿ:  ಬೆಂಗಳೂರು ಕಾಲ್ತುಳಿತ ಕೇಸ್ ಸಿಐಡಿಗೆ, ಬೆಂಗಳೂರು ಕಮಿಷನರ್, ಎಸಿಪಿ ಸೇರಿ ಹಲವು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ