Sign In

By signing in or creating an account, you agree with Associated Broadcasting Company's Terms & Conditions and Privacy Policy.

Siddaramaiah Presser: ನಲ್ವತ್ತಕ್ಕೂ ಹೆಚ್ಚು ವರ್ಷಗಳ ನನ್ನ ರಾಜಕೀಯ ಬದುಕಿನಲ್ಲಿ ಒಂದು ಕಪ್ಪು ಚುಕ್ಕೆಯೂ ಇಲ್ಲ: ಸಿದ್ದರಾಮಯ್ಯ

Siddaramaiah Presser: ನಲ್ವತ್ತಕ್ಕೂ ಹೆಚ್ಚು ವರ್ಷಗಳ ನನ್ನ ರಾಜಕೀಯ ಬದುಕಿನಲ್ಲಿ ಒಂದು ಕಪ್ಪು ಚುಕ್ಕೆಯೂ ಇಲ್ಲ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 26, 2024 | 1:32 PM

Siddaramaiah Presser:  ತಮ್ಮ ರಾಜಕೀಯ ಬದುಕಿನ ಬಗ್ಗೆಯೂ ಮಾತಾಡಿದ ಸಿದ್ದರಾಮಯ್ಯ 83 ರಲ್ಲಿ ಮೊದಲಬಾರಿಗೆ ಶಾಸಕನಾಗಿ ಅಯ್ಕೆಯಾಗಿ ಮರುವರ್ಷವೇ ಮಂತ್ರಿಯಾಗಿದ್ದೆ ಎಂದರು. ತಮ್ಮ ನಾಲ್ಕು ದಶಕಗಳಿಗಿಂತ ಹೆಚ್ಚಿನ ರಾಜಕೀಯ ಬದುಕಿನಲ್ಲಿ ಒಂದೇ ಕಪ್ಪು ಚುಕ್ಕೆ ಇಲ್ಲ, ಅದೊಂದು ತೆರೆದ ಪುಸ್ತಕ ಎಂದು ಮುಖ್ಯಮಂತ್ರಿ ಹೇಳಿದರು.

ಬೆಂಗಳೂರು: ವಿಧಾನ ಸೌಧ ಆವರಣದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸದನದಲ್ಲಿ ಒಂದು ವಿರೋಧಪಕ್ಷವಾಗಿ ಕೆಲಸ ಮಾಡದೆ ಸರ್ಕಾರದ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು. ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ದಯನೀಯ ಸೋಲು ಮತ್ತು ಲೋಕಸಭಾ ಚುನಾವಣೆಯಲ್ಲಿ ಅವೆರಡು ಪಕ್ಷಗಳು ಜೊತೆಗೂಡಿ ಹೋರಾಡಿದರೂ ನಿರೀಕ್ಷಿತ ಮಟ್ಟದಲ್ಲಿ ಸಿಗದ ಯಶಸ್ಸು ಅವರನ್ನು ಹತಾಶೆಯ ಕೂಪಕ್ಕೆ ನೂಕಿದೆ. ಜನರಿಂದ ಕಳೆದಕೊಂಡಿರುವ ವಿಶ್ವಾಸವನ್ನು ವಾಪಸ್ಸು ಪಡೆಯಲು ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. 2019 ರ ಲೋಕಸಭಾ ಚುನಾವಣೆಯಲ್ಲಿ ಕೇವಲ 1 ಸೀಟು ಪಡೆದಿದ್ದ ಕಾಂಗ್ರೆಸ್ ಈ ಬಾರಿ 9 ಸ್ಥಾನ ಗಳಿಸಿದೆ ಮತ್ತು ತನ್ನ ವೋಟುಶೇರನ್ನು ಶೇಕಡ 13.5 ರಷ್ಟು ಹೆಚ್ಚಿಸಿಕೊಂಡಿದೆ ಎಂದು ಮುಖ್ಯಮಂತ್ರಿ ಹೇಳಿದರು. ನಗರಾಭಿವೃದ್ಧಿ ಪ್ರಾಧಿಕಾರಗಳ ಬಗ್ಗೆ ಮಾಹಿತಿ ನೀಡಿದ ಸಿದ್ದರಾಮಯ್ಯ, ಮೊದಲಿದ್ದ ಸಿಐಟಿಬಿ ಯನ್ನು 1987ರಲ್ಲಿ ರದ್ದು ಮಾಡಿ ಪ್ರಾಧಿಕಾರಗಳ ರಚನ ಮಾಡಲಾಗಿತ್ತು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    Siddaramaiah Press Meet Live: ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ