ವಿಡಿಯೋ: ರೇಣುಕಾ ಸ್ವಾಮಿ ಕುಟುಂಬದ ಭೇಟಿ ಬಳಿಕ ಭಾವುಕರಾದ ವಿನೋದ್ ರಾಜ್
ದರ್ಶನ್ ಮತ್ತು ಗ್ಯಾಂಗ್ನಿಂದ ಹತ್ಯೆಗೆ ಒಳಗಾಗಿದ್ದಾರೆ ಎನ್ನಲಾಗಿರುವ ರೇಣುಕಾ ಸ್ವಾಮಿ ಕುಟುಂಬವನ್ನು ನಟ ವಿನೋದ್ ರಾಜ್ ಇಂದು (ಜುಲೈ 26) ಭೇಟಿ ಮಾಡಿದರು. ರೇಣುಕಾ ಸ್ವಾಮಿ ಕುಟುಂಬಕ್ಕೆ 1 ಲಕ್ಷ ರೂಪಾಯಿ ಹಣ ಸಹಾಯವನ್ನು ಸಹ ಮಾಡಿದ್ದಾರೆ. ಭೇಟಿ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ ವಿನೋದ್ ಭಾವುಕರಾದರು.
ಕೆಲವು ದಿನಗಳ ಹಿಂದಷ್ಟೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಅನ್ನು ಭೇಟಿ ಮಾಡಿದ್ದ ನಟ ವಿನೋದ್ ರಾಜ್, ಇಂದು (ಜುಲೈ 26) ಚಿತ್ರದುರ್ಗಕ್ಕೆ ತೆರಳಿ ರೇಣುಕಾ ಸ್ವಾಮಿ ಕುಟುಂಬದವರನ್ನು ಭೇಟಿ ಆಗಿದ್ದಾರೆ. ರೇಣುಕಾ ಸ್ವಾಮಿ ಪೋಷಕರು ಹಾಗೂ ಪತ್ನಿಗೆ ಸಾಂತ್ವನ ಹೇಳಿದ ನಟ ವಿನೋದ್ ರಾಜ್, ಒಂದು ಲಕ್ಷ ರೂಪಾಯಿ ಹಣ ಸಹಾಯವನ್ನು ಸಹ ಮಾಡಿದ್ದಾರೆ. ಭೇಟಿಗೆ ಬಂದ ವಿನೋದ್ ರಾಜ್ ಎದುರು ರೇಣುಕಾ ಸ್ವಾಮಿಯ ಪತ್ನಿ ಮತ್ತು ತಾಯಿ ಕಣ್ಣೀರು ಹಾಕಿದ್ದಾರೆ. ರೇಣುಕಾ ಸ್ವಾಮಿ ಕುಟುಂಬವನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ವಿನೋದ್ ರಾಜ್ ಸಹ ಭಾವುಕರಾದರು. ಇಲ್ಲಿದೆ ವಿಡಿಯೋ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 26, 2024 02:51 PM
Latest Videos