ಕೇವಲ ಭಾರತೀಯ ಸಂಜಾತರು ಮಾತ್ರವಲ್ಲ, ರಷ್ಯನ್ನರಲ್ಲೂ ಪ್ರಧಾನಿ ಮೋದಿಯವರನ್ನು ಕಾಣಲು ರೋಮಾಂಚನ!
ನೀಲಿ ಸೂಟ್ ಧರಿಸಿರುವ ಭಾರತೀಯ ಸಂಜಾತರೊಬ್ಬರು, 2014 ರಲ್ಲಿ ನರೇಂದ್ರ ಮೋದಿಯವರು ಭಾರತದ ಪ್ರಧಾನಿ ಮಂತ್ರಿಯಾದ ಬಳಿಕ ವಿಶ್ವದಾದ್ಯಂತ ಭಾರತೀಯರ ಗೌರವ ಹೆಚ್ಚಿದೆ, ಜನ ನಮ್ಮನ್ನು ನೋಡುವ ದೃಷ್ಟಿಕೋನ ಬದಲಾಗಿದೆ, ಅವರನ್ನು ಇಷ್ಟು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿರುವುದಕ್ಕೆ ಆಗುತ್ತಿರುವ ಸಂತೋಷವನ್ನು ಬಾಯಲ್ಲಿ ಹೇಳಲಾರೆ ಅನ್ನುತ್ತಾರೆ.
ಮಾಸ್ಕೋ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಷ್ಯಾ ಪ್ರವಾಸದಲ್ಲಿದ್ದಾರೆ. ಅವರು ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಭಾರತೀಯ ಸಂಜಾತರು ಪಡುವ ಖುಷಿ, ಸಂಭ್ರಮ ಮತ್ತು ಸ್ವಾಗತಿಸುವ ರೀತಿ ಪದಗಳಲ್ಲಿ ವರ್ಣಿಸಲಾಗದು. ಮಾಸ್ಕೋದ ಒಂದು ಭವನದಲ್ಲಿ ಪ್ರಧಾನಿ ಮೋದಿ ಅವರು ಭಾರತೀಯರನ್ನು ಭೇಟಿಯಾಗಿ ಸಂವಾದ ಮಾತಾಡಲಿದ್ದಾರೆ..ರಷ್ಯನ್ ಮೂಲದ ಜನ ಸಹ ಇಲ್ಲಿ ಸೇರಿದ್ದಾರೆ. ಪ್ರಧಾನಿ ಮೋದಿ ಸ್ವಾಗತಕ್ಕೆ ನಡೆದಿರುವ ತಯಾರಿಯನ್ನು ಗಮನಿಸಿ. ಗುಜರಾತಿನ ಸಾಂಪ್ರದಾಯಿಕ ನೃತ್ಯವನ್ನು ಕೆಲ ರಷ್ಯನ್ ಕಲಾವಿದರು ಮಾಡುತ್ತಿದ್ದಾರೆ. ಅವರು ಹಿಂದಿಯಲ್ಲಿ ಮಾತಾಡುದು ಸೋಜಿಗ ಹುಟ್ಟಿಸುತ್ತದೆ, ನೃತ ಮಾಡುತ್ತಿರುವ ಒಬ್ಬ ಮಹಿಳೆ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಅತೀವ ಸಂತೋಷವೆನಿಸುತ್ತಿದೆ ಎನ್ನುತ್ತಾರೆ. ಭಾರತೀಯ ಸಂಜಾತರ ಜೊತೆ ಕುಳಿತಿರುವ ಒಬ್ಬ ರಷ್ಯನ್ ಯುವತಿ ಪ್ರಧಾನಿ ಮೋದಿಯರನ್ನು ಭೇಟಿಯಾಗುವ ಅವಕಾಶ ಸಿಗುತ್ತಿರುವುದು ನನ್ನ ಸೌಭಾಗ್ಯವೆಂದು ಹೇಳುತ್ತಾರೆ, ಭಾರತೀಯ ಮೂಲದ ಯುವತಿಯೊಬ್ಬರು, ಪ್ರಧಾನಿ ಮೋದಿಯವರನ್ನು ಭೇಟಿಯಾಗುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಮತ್ತು ಅದು ನನ್ನಲ್ಲಿ ರೋಮಾಂಚನ ಹುಟ್ಟಿಸಿದೆ ಎನ್ನುತ್ತಾರೆ. ಮತ್ತೊಬ್ಬ ರಷ್ಯನ್ ಮಹಿಳೆ ಇದು ನನ್ನ ಬದುಕಿನ ಅತ್ಯಂತ ರೋಮಾಂಚಕ ಕ್ಷಣ ಎನ್ನುತ್ತಾರೆ. ಎಲ್ಲರಲ್ಲೂ ಸಂಭ್ರಮ ಸಡಗರ!.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ಸಮರದಿಂದ ಪರಿಹಾರ ಇಲ್ಲ’- ಉಕ್ರೇನ್ ಯುದ್ಧ ನಿಲ್ಲಿಸಲು ಪುಟಿನ್ಗೆ ಮೋದಿ ಮನವಿ; ರಷ್ಯಾ ಸೇನೆಯಿಂದ ಭಾರತೀಯರ ಬಿಡುಗಡೆಗೆ ನಿರ್ಧಾರ