‘ಸಮರದಿಂದ ಪರಿಹಾರ ಇಲ್ಲ’- ಉಕ್ರೇನ್ ಯುದ್ಧ ನಿಲ್ಲಿಸಲು ಪುಟಿನ್​ಗೆ ಮೋದಿ ಮನವಿ; ರಷ್ಯಾ ಸೇನೆಯಿಂದ ಭಾರತೀಯರ ಬಿಡುಗಡೆಗೆ ನಿರ್ಧಾರ

Modi appeals Putin to end Ukraine war: ಎರಡು ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್ ಯುದ್ಧವನ್ನು ನಿಲ್ಲಿಸುವಂತೆ ರಷ್ಯಾಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಎರಡು ದಿನ ರಷ್ಯಾ ಭೇಟಿಗೆ ಮಾಸ್ಕೋಗೆ ತೆರಳಿರುವ ಮೋದಿ ಅಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ರನ್ನು ಭೇಟಿ ಮಾಡಿದ್ದಾರೆ. ಏಜೆಂಟ್​ಗಳ ಸುಳ್ಳು ಆಶ್ವಾಸನೆ ನಂಬಿ ಇಚ್ಛೆ ಇಲ್ಲದೇ ರಷ್ಯಾ ಸೇನೆಯಲ್ಲಿ ಸಿಲುಕಿರುವ 20ಕ್ಕೂ ಹೆಚ್ಚು ಭಾರತೀಯರ ಬಿಡುಗಡೆಗೆ ಮೋದಿ ಮನವಿ ಮಾಡಿದ್ದಾರೆ.

‘ಸಮರದಿಂದ ಪರಿಹಾರ ಇಲ್ಲ’- ಉಕ್ರೇನ್ ಯುದ್ಧ ನಿಲ್ಲಿಸಲು ಪುಟಿನ್​ಗೆ ಮೋದಿ ಮನವಿ; ರಷ್ಯಾ ಸೇನೆಯಿಂದ ಭಾರತೀಯರ ಬಿಡುಗಡೆಗೆ ನಿರ್ಧಾರ
ನರೇಂದ್ರ ಮೋದಿ, ವ್ಲಾದಿಮಿರ್ ಪುಟಿನ್
Follow us
|

Updated on: Jul 09, 2024 | 12:14 PM

ಮಾಸ್ಕೋ, ಜುಲೈ 9: ರಷ್ಯಾಗೆ ಎರಡು ದಿನದ ಭೇಟಿಯಲ್ಲಿರುವ ನರೇಂದ್ರ ಮೋದಿ ನಿನ್ನೆ ಸೋಮವಾರ ರಾತ್ರಿ ನಡೆದ ಡಿನ್ನರ್ ಕಾರ್ಯಕ್ರಮದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಉಕ್ರೇನ್ ವಿಚಾರವನ್ನು ಚರ್ಚಿಸಿದರು. ಇದು ಅನೌಪಚಾರಿಕ ಮಾತುಕತೆಯಾದರೂ ಮೋದಿ ಅವರು ಉಕ್ರೇನ್ ಯುದ್ಧ ನಿಲ್ಲಿಸುವಂತೆ ಪುಟಿನ್​ಗೆ ನೇರವಾಗಿ ಮನವಿ ಮಾಡಿದರು. ಯುದ್ಧದಿಂದ ಯಾವ ಪರಿಹಾರವೂ ಸಿಗದು ಎಂಬ ವಿಚಾರವನ್ನು ಪುಟಿನ್ ಅವರಿಗೆ ಮೋದಿ ಈ ಸಂದರ್ಭದಲ್ಲಿ ತಿಳಿಸಿದರೆನ್ನಲಾಗಿದೆ.

‘ರಾಷ್ಟ್ರಗಳ ಸಾರ್ವಭೌಮತೆಯನ್ನೂ ಒಳಗೊಂಡಂತೆ ವಿಶ್ವಸಂಸ್ಥೆಯ ಒಪ್ಪಂದವನ್ನು ಭಾರತ ಸದಾ ಕಾಲ ಗೌರವಿಸುತ್ತದೆ. ರಣರಂಗದಲ್ಲಿ ಯಾವ ಪರಿಹಾರವನ್ನೂ ಕಂಡುಕೊಳ್ಳಲು ಆಗದು. ಸಂವಾದ ಮತ್ತು ರಾಜತಾಂತ್ರಿಕತೆಯೇ ಸರಿಯಾದ ದಾರಿ,’ ಎಂದು ಮೋದಿ ಈ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: ಪುಟಿನ್ ನಿವಾಸದಲ್ಲಿ ಮೋದಿ ಸುತ್ತಾಟ; ಇಂಟರ್ಪ್ರಿಟರ್ ನೆರವಿಲ್ಲದೆ ಮಾತನಾಡತೊಡಗಿದ ಇಬ್ಬರು ನಾಯಕರು

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಇದಕ್ಕೆ ನೀಡಿದು ಉತ್ತರ ಏನು ಎಂಬುದು ಗೊತ್ತಿಲ್ಲ. ಎರಡು ವರ್ಷದ ಹಿಂದೆ ಉಕ್ರೇನ್ ಮೇಲೆ ರಷ್ಯಾ ಸೇನೆ ಆಕ್ರಮಣ ಮಾಡಿತು. ಈಗಲೂ ಆ ಯುದ್ದ ನಿಂತಿಲ್ಲ. ಸಾವಿರಾರು ಜನರು ಈ ಯುದ್ಧದಲ್ಲಿ ಬಲಿಯಾಗಿದ್ದಾರೆ. ಪಾಶ್ಚಿಮಾತ್ಯ ದೇಶಗಳ ನೆರವಿನಿಂದ ಉಕ್ರೇನ್ ಎರಡು ವರ್ಷಗಳಿಂದಲೂ ರಷ್ಯಾ ಆಕ್ರಮಣಕ್ಕೆ ಪ್ರತಿರೋಧ ತೋರುತ್ತಿದೆ. ರಷ್ಯಾದ ಪ್ರಯತ್ನವೂ ಕಡಿಮೆ ಆಗಿಲ್ಲ.

ರಷ್ಯಾ ಸೇನೆಯಲ್ಲಿ ಸಿಲುಕಿರುವ ಭಾರತೀಯರ ಬಿಡುಗಡೆ ಸಾಧ್ಯತೆ..?

ಬೇರೆ ಬೇರೆ ಕಾರಣಗಳಿಂದಾಗಿ ಅನೇಕ ಭಾರತೀಯರು ರಷ್ಯಾ ಸೇನೆಯಲ್ಲಿ ಸಿಲುಕಿದ್ದಾರೆ. ಒಳ್ಳೆಯ ಸಂಬಳದ ಕೆಲಸ ಕೊಡಿಸುತ್ತೇವೆಂದು ಯುವಕರನ್ನು ನಂಬಿಸಿ ಏಜೆಂಟ್​ಗಳು ಅವರನ್ನು ರಷ್ಯಾಗೆ ಕರೆದೊಯ್ದು ಅಲ್ಲಿ ಸೇನೆಯ ಸುಪರ್ದಿಗೆ ನೀಡಿದ್ದಾರೆ. ಸೇನೆಯಲ್ಲಿ ವಿವಿಧ ಸಹಾಯಕ ಕೆಲಸಗಳನ್ನು ಈ ಭಾರತೀಯ ಯುವಕರು ಮಾಡುತ್ತಿದ್ದಾರೆ. ಈ ರೀತಿ 20ಕ್ಕೂ ಹೆಚ್ಚು ಯುವಕರು ರಷ್ಯಾ ಸೇನೆಯಲ್ಲಿ ಸಿಲುಕಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ರಷ್ಯಾದಲ್ಲಿ ಪ್ರಧಾನಿ ಮೋದಿ; ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ

ನಿನ್ನೆ ಸೋಮವಾರ ರಾತ್ರಿ ನರೇಂದ್ರ ಮೋದಿ ಈ ವಿಚಾರವನ್ನೂ ವ್ಲಾದಿಮಿರ್ ಪುಟಿನ್ ಬಳಿ ಪ್ರಸ್ತಾಪಿಸಿದರು. ರಷ್ಯಾ ಸೇನೆಯಿಂದ ಈ ಯುವಕರನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಪುಟಿನ್ ಪೂರಕವಾಗಿ ಸ್ಪಂದಿಸಿದರು. ಮೂಲಗಳ ಪ್ರಕಾರ ಈ ಭಾರತೀಯ ಯುವಕರಿಗೆ ಸದ್ಯದಲ್ಲೇ ಬಿಡುಗಡೆಯ ಭಾಗ್ಯ ಸಿಗಬಹುದು ಎನ್ನಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ