ಪುಟಿನ್ ನಿವಾಸದಲ್ಲಿ ಮೋದಿ ಸುತ್ತಾಟ; ಇಂಟರ್ಪ್ರಿಟರ್ ನೆರವಿಲ್ಲದೆ ಮಾತನಾಡತೊಡಗಿದ ಇಬ್ಬರು ನಾಯಕರು

Vladimir Putin and Narendra Modi meeting: ಪ್ರಧಾನಿ ನರೇಂದ್ರ ಮೋದಿ ರಷ್ಯಾಗೆ ಎರಡು ದಿನದ ಭೇಟಿಯಲ್ಲಿದ್ದಾರೆ. ಮಾಸ್ಕೋದಲ್ಲಿ ಮೋದಿಯನ್ನು ರಷ್ಯಾ ಅಧ್ಯಕ್ಷ ಬರಮಾಡಿಕೊಂಡರು. ತಮ್ಮ ನಿವಾಸದ ಉದ್ಯಾನವನದಲ್ಲಿ ಮೋದಿ ಅವರನ್ನು ಎಲೆಕ್ಟ್ರಿಕ್ ಕಾರಿನಲ್ಲಿ ಪುಟಿನ್ ಸುತ್ತಾಡಿಸಿದರು. ಸೋಮವಾರ ರಾತ್ರಿ ನಡೆದ ಡಿನ್ನರ್ ಪಾರ್ಟಿ ವೇಳೆ ಪುಟಿನ್ ಜೊತೆ ಕೆಲ ವಿಚಾರಗಳನ್ನು ಮೋದಿ ಪ್ರಸ್ತಾಪಿಸಿದರು.

ಪುಟಿನ್ ನಿವಾಸದಲ್ಲಿ ಮೋದಿ ಸುತ್ತಾಟ; ಇಂಟರ್ಪ್ರಿಟರ್ ನೆರವಿಲ್ಲದೆ ಮಾತನಾಡತೊಡಗಿದ ಇಬ್ಬರು ನಾಯಕರು
ನರೇಂದ್ರ ಮೋದಿ, ವ್ಲಾದಿಮಿರ್ ಪುಟಿನ್
Follow us
|

Updated on: Jul 09, 2024 | 11:13 AM

ಮಾಸ್ಕೋ, ಜುಲೈ 9: ಭಾರತ ಮತ್ತು ರಷ್ಯಾ ನಡುವಿನ ಸ್ನೇಹದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ನೇಹ ಗಟ್ಟಿಯಾಗುತ್ತಿದೆ. ಪುಟಿನ್ ತಮ್ಮ ನಿವಾಸದ ಅಂಗಳದಲ್ಲಿ ಪುಟ್ಟ ಎಲೆಕ್ಟ್ರಿಕ್ ಗಾಡಿಯಲ್ಲಿ ಮೋದಿಯನ್ನು ಕೂರಿಸಿಕೊಂಡು ಸುತ್ತಾಡಿಸಿದ ಘಟನೆ ನಡೆಯಿತು. ಸ್ವತಃ ಪುಟಿನ್ ಅವರೇ ಗೋಲ್ಫ್ ಕಾರ್ಟ್ ಅನ್ನು ಡ್ರೈವ್ ಮಾಡುತ್ತಿದ್ದರು. ಮೋದಿ ಅವರ ಪಕ್ಕದ ಸೀಟಿನಲ್ಲಿ ಕೂತು ಈ ಶಾರ್ಟ್ ಡ್ರೈವ್ ಅನ್ನು ಆನಂದಿಸುತ್ತಿದ್ದಂತಿತ್ತು.

ಇಂಟರ್​ಪ್ರಿಟರ್ ಬಿಟ್ಟು ಮಾತನಾಡತೊಡಗಿದ ಮೋದಿ-ಪುಟಿನ್

ಪುಟ್ಟದಾದ ಕಾರ್ಟ್ ಎಲೆಕ್ಟ್ರಿಕ್ ಗಾಡಿಯಲ್ಲಿ ವ್ಲಾದಿಮಿರ್ ಪುಟಿನ್ ಮತ್ತು ಮೋದಿ ಅವರಷ್ಟೇ ಅಲ್ಲದೆ ಇಬ್ಬರು ಇಂಟರ್​ಪ್ರಿಟರ್​ಗಳೂ ಇದ್ದರು. ತಮ್ಮ ನಿವಾಸದಲ್ಲಿನ ಉದ್ಯಾನದಾದ್ಯಂತ ಈ ಗಾಡಿ ಓಡಾಡಿತು. ಮೋದಿ ಮತ್ತು ಪುಟಿನ್ ಇಬ್ಬರೂ ಇಂಟರ್​ಪ್ರಿಟರ್​ಗಳ ಸಹಾಯದೊಂದಿಗೆ ಸಂವಾದ ನಡೆಸಿದ್ದು ಕಂಡು ಬಂದಿತು.

ಇದನ್ನೂ ಓದಿ: 2 ದಿನಗಳ ರಷ್ಯಾ ಪ್ರವಾಸಕ್ಕಾಗಿ ಮಾಸ್ಕೋ ತಲುಪಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ

ಎಲೆಕ್ಟ್ರಿಕ್ ಗಾಡಿಯಿಂದ ಕೆಳಗಿಳಿದ ಬಳಿಕ ಇಬ್ಬರೂ ಉದ್ಯಾನದಲ್ಲಿ ನಡೆದರು. ಈ ವೇಳೆ ಇಂಟರ್​ಪ್ರಿಟರ್​ಗಳು ಜೊತೆಯಲ್ಲಿ ಇರಲಿಲ್ಲ. ಇಂಟರ್​ಪ್ರಿಟರ್​ಗಳ ಸಹಾಯವಿಲ್ಲದೇ ಇಬ್ಬರೂ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಿದ್ದಿರಬಹುದು.

ನರೇಂದ್ರ ಮೋದಿ ಅವರು ಎರಡು ದಿನದ ಭೇಟಿಗಾಗಿ ರಷ್ಯಾಗೆ ಆಗಮಿಸಿದ್ದಾರೆ. ನಿನ್ನೆ (ಜುಲೈ 8) ರಾತ್ರಿ ಮೋದಿ ಅವರಿಗೆ ಪುಟಿನ್ ಔತಣಕೂಟ ಏರ್ಪಡಿಸಿದ್ದರು.

ಇದನ್ನೂ ಓದಿ: ರಷ್ಯಾದಲ್ಲಿ ಪ್ರಧಾನಿ ಮೋದಿ; ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ

ರಷ್ಯಾ ಸೇನೆ ಸೇರಿದ ಭಾರತೀಯರ ಬಿಡುಗಡೆ ಸಾಧ್ಯತೆ

ವ್ಲಾದಿಮಿರ್ ಪುಟಿನ್ ಜೊತೆ ನರೇಂದ್ರ ಮೋದಿ ವಿವಿಧ ವಿಷಯಗಳ ಚರ್ಚೆ ನಡೆಸಿದರು. ಉಕ್ರೇನ್ ಯುದ್ಧ ನಿಲ್ಲಿಸುವ ಸಂಬಂಧವೂ ಮೋದಿ ಮಾತನಾಡಿದರು. ಈ ವೇಳೆ, ಕೆಲಸ ಸಿಗುವ ಆಮಿಷದಿಂದ ರಷ್ಯಾ ಸೇನೆಗೆ ಸಿಲುಕಿರುವ ಭಾರತೀಯರನ್ನು ಮುಕ್ತಗೊಳಿಸಲು ಮೋದಿ ಯತ್ನಿಸಿದ್ದಾರೆ. ಪುಟಿನ್ ಜತೆ ಸೋಮವಾರದ ಡಿನ್ನರ್ ವೇಳೆ ಈ ವಿಚಾರ ಪ್ರಸ್ತಾಪಿಸಿ ಭಾರತೀಯರ ಬಿಡುಗಡೆಗೆ ಮನವಿ ಮಾಡಿದರೆನ್ನಲಾಗಿದೆ.

ಪುಟಿನ್ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಷ್ಯಾ ಸೇನೆಯಲ್ಲಿರುವ ಭಾರತೀಯರನ್ನು ವಿಮುಕ್ತಗೊಳಿಸಲು ಪುಟನ್ ನಿರ್ಧರಿಸಿದ್ದಾರಂತೆ. ಅದೇ ವೇಳೆ, ವ್ಲಾದಿಮಿರ್ ಪುಟಿನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನದುಂಬಿ ಶ್ಲಾಘಿಸಿದರು. ಭಾರತಕ್ಕೆ ಮೋದಿ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ ಎಂದೂ ಅವರು ಹೇಳಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ