ಕೊರೋನಾ ಲಸಿಕೆ ಮತ್ತು ಹೃದಯಾಘಾತದ ನಡುವೆ ಯಾವುದೇ ಸಂಬಂಧವಿಲ್ಲ: ಡಾ ರಾಹುಲ್ ಪಾಟೀಲ್, ಹೃದ್ರೋಗ ತಜ್ಞ, ಎಸ್ ಜೆ ಐ ಸಿ ಅರ್
ಕೋವಿಡ್ ಸೋಂಕಿಗೊಳಗಾದವರ ದೇಹದಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುವುದರಿಂದ ಹಾರ್ಟ್ ಅಟ್ಯಾಕ್ ಆಗುವ ಚಾನ್ಸ್ ಇರುತ್ತದೆ, ಹಾಗಂತ ಸೋಂಕಿನಿಂದ ಚೇತರಿಸಿಕೊಂಡು ಈಗ ಆರೋಗ್ಯವಂತ ಜೀವನ ನಡೆಸುವವರು ಹೆದರುವ ಅವಶ್ಯಕತೆಯಿಲ್ಲ ಎಂದು ಡಾ ರಾಹುಲ್ ಹೇಳುತ್ತಾರೆ.
ಬೆಂಗಳೂರು: ಕೋವಿಡ್ ಸೋಂಕು, ಕೋವಿಡ್ ಲಸಿಕೆ ಮತ್ತು ಹೃದಯಾಘಾತದ ನಡುವೆ ಸಂಬಂಧವಿದೆಯೇ? ಕಡಿಮೆ ವಯಸ್ಸಿನ ಜನ ಯಾಕೆ ಹೃದಯಾಘಾತಕ್ಕೊಳಗಾಗುತ್ತಿದ್ದಾರೆ, ಡಯಾಬಿಟೀಸ್, ಅಧಿಕ ರಕ್ತದೊತ್ತಡ, ದೇಹದಲ್ಲಿ ಹೆಚ್ಚಿದ ಕೊಲೆಸ್ಟ್ರಾಲ್ ಪ್ರಮಾಣ ಮೊದಲಾದ ಅಪಾಯಕಾರಿ ಅಂಶಗಳು ಹೇಗೆ ಹೃದಯಾಘಾತಕ್ಕೆ ಕಾರಣವಾಗುತ್ತವೆ ಮೊದಲಾದ ಸಂಗತಿಗಳನ್ನು ಖ್ಯಾತ ಹೃದ್ರೋಗ ತಜ್ಞ ಡಾ ರಾಹುಲ್ ಪಾಟೀಲ್ (Dr Rahul Patil) ಟಿವಿ9 ಕನ್ನಡ ವಾಹಿನಿಗೆ ವಿವರಿಸಿದ್ದಾರೆ. ಕೋವಿಡ್ ಸೋಂಕಿಗೊಳಗಾದವರ (Covid infection) ದೇಹದಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುವುದರಿಂದ ಹಾರ್ಟ್ ಅಟ್ಯಾಕ್ ಆಗುವ ಚಾನ್ಸ್ ಇರುತ್ತದೆ, ಹಾಗಂತ ಸೋಂಕಿನಿಂದ ಚೇತರಿಸಿಕೊಂಡು ಈಗ ಆರೋಗ್ಯವಂತ ಜೀವನ ನಡೆಸುವವರು ಹೆದರುವ ಅವಶ್ಯಕತೆಯಿಲ್ಲ, ಈ ಅಂಶದ ಮೇಲೆ ಇನ್ನೂ ಅಧ್ಯಯನಗಳು ನಡೆಯುತ್ತಿವೆ ಎಂದು ಹೇಳಿದ ಡಾ ರಾಹುಲ್, ಕೊರೊನಾ ಲಸಿಕೆ (Corona vaccine) ಮತ್ತು ಹೃದಯಾಘಾತದ ನಡುವೆ ಯಾವುದೇ ಸಂಬಂಧವಿಲ್ಲ ಎಂದರು.
ಹೆಲ್ದೀ ಹಾರ್ಟ್ ಕ್ಲಿನಿಕ್
40 ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತ ಪ್ರಕರಣಗಳು ಹೆಚುತ್ತಿರುವುದಕ್ಕೆ ಕಾರಣಗಳು ಹಲವಾರು ಇರಬಹುದು. ಜಯದೇವ ಆಸ್ಪತ್ರೆಯಲ್ಲಿ ನಿರ್ದೇಶಕರಾಗಿರುವ ವಿಖ್ಯಾತ ಹೃದ್ರೋಗ ತಜ್ಞ ಡಾ ಸಿ ಎನ್ ಮಂಜುನಾಥ್ (Dr CN Manjunath) ಅವರ ನೇತೃತ್ವದಲ್ಲಿ ಹೆಲ್ದೀ ಹಾರ್ಟ್ ಕ್ಲಿನಿಕ್ (Healthy heart Clinic) ಅಂತ ಆರಂಭಿಸಲಾಗಿದ್ದು, ಅಲ್ಲಿ ಕಾಂಪ್ರಿಹೆನ್ಸಿವ್ ಕಾರ್ಡಿಯಾಕ್ ಚೆಕಪ್ (Comprehensive Cardiac Check Up) ಮಾಡಿಸಿಕೊಳ್ಳಬಹುದು, ಅದು ಸರ್ಕಾರಿ ಆಸ್ಪತ್ರೆಯಾಗಿರುವುದರಿಂದ ಕಡಿಮೆ ವೆಚ್ಚದಲ್ಲಿ ಎಲ್ಲ ಟೆಸ್ಟ್ ಗಳನ್ನು ಮಾಡಲಾಗುತ್ತದೆ ಎಂದು ಡಾ ರಾಹುಲ್ ಹೇಳಿದರು. ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮತ್ತು ರಿಸ್ಕ್ ಫ್ಯಾಕ್ಟರ್ ಗಳನ್ನು ಹೊಂದಿರುವ ಜನರಿಗೆ ಕೌನ್ಸೆಲಿಂಗ್ ಸೌಲಭ್ಯ ಕೂಡ ಇರೋದ್ರಿಂದ ಜನ ಈ ವ್ಯವಸ್ಥೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ