ಯುವರತ್ನದಲ್ಲಿ ಪುನೀತ್ ರಾಜಕುಮಾರ್ ಅವರನ್ನು ಕುಣಿಸಿದ ಜಾನಿ ಮಾಸ್ಟರ್ ಸಹ ಅಗಲಿದ ನಟನ ಅಂತಿಮ ದರ್ಶನ ಪಡೆದರು

| Updated By: shivaprasad.hs

Updated on: Oct 31, 2021 | 7:31 AM

ಒಂದೆರಡು ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲೂ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಪುನೀತ್ ರಾಜ್​ಕುಮಾರ್ ಅವರನ್ನು ‘ಯುವರತ್ನ’ದ ಕೇವಲ ಎರಡು ಹಾಡುಗಳಿಗೆ ಮಾತ್ರ ಕುಣಿಸಿದ್ದರು

ಶುಕ್ರವಾರ ಹೃದಯಾಘಾತದಿಂದ ಅಕಾಲಿಕ ಮರಣವನ್ನಪ್ಪಿದ ಪುನೀತ್ ರಾಜ್ ಕುಮಾರ ತಮ್ಮ ತಂದೆಯಂತೆಯೇ, ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಶನಿವಾರ ರಾತ್ರಿಯವರೆಗೂ ಜನ ಅವರ ಅಂತಿಮ ದರ್ಶನಕ್ಕಾಗಿ ಕಂಠೀರವ ಸ್ಟುಡಿಯೋಗೆ ಬರುತ್ತಲೇ ಇದ್ದರು. ಶನಿವಾರ ತಡವಾಗಿ ಬಂದವರಲ್ಲಿ ತೆಲುಗಿನ ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಕೂಡ ಒಬ್ಬರು. ಅಸಲಿಗೆ ಇವರ ಹೆಸರು ಶೇಖ್ ಜಾನಿ ಬಾಷಾ ಅಂತ. ಅದರೆ ತೆಲುಗು ಸಿನಿಮಾ ಇಂಡಸ್ಟ್ರೀಯಲ್ಲಿ ಅವರು ಜಾನಿ ಮಾಸ್ಟರ್ ಎಂದೇ ಚಿರಪರಿಚಿತರು.

ಜಾನಿ ಮಾಸ್ಟರ್ ಅವರಿಗೆ ಅಪ್ಪು ನಿಧನ ಹೊಂದಿದ ಸುದ್ದಿ ಗೊತ್ತಾದಾಗ ಅದ್ಯಾವ ಊರಿನಲ್ಲಿದ್ದರೋ? ಶನಿವಾರ ಅವರು ಪುನೀತ್ ಅಂತಿಮ ದರ್ಶನ ಪಡೆದ ನಂತರ ಕೇವಲ ಶಿವಣ್ಣ ಆವರೊಂದಿಗೆ ಮಾತಾಡಿ ಕಂಠೀರವ ಸ್ಟೇಡಿಯಂನಿಂದ ಹೊರಬಿದ್ದರು. ಜಾನಿ ತೆಲುಗು ಸಿನಿಮಾಗಳಲ್ಲೇ ಹೆಚ್ಚು ಕೆಲಸ ಮಾಡೋದು.

ಒಂದೆರಡು ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲೂ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಪುನೀತ್ ರಾಜ್​ಕುಮಾರ್ ಅವರನ್ನು ‘ಯುವರತ್ನ’ದ ಕೇವಲ ಎರಡು ಹಾಡುಗಳಿಗೆ ಮಾತ್ರ ಕುಣಿಸಿದ್ದರು. ಆದಗ್ಯೂ ಅವರಿಬ್ಬರ ನಡುವೆ ಗಾಢಾವಾದ ಬಾಂಧವ್ಯ ಬೆಳೆದಿದ್ದು ಮಾತ್ರ ಆಶ್ಚರ್ಯ ಹುಟ್ಟಿಸುತ್ತದೆ.

ಜಾನಿ ಮಾಸ್ಟರ್ ಅವರು ಶಿವಣ್ಣನಿಗೂ ಚೆನ್ನಾಗಿ ಪರಿಚಿತರು ಅನಿಸುತ್ತದೆ. ಜಾನಿ ಹೊರಡುವ ಮೊದಲು ಶಿವಣ್ಣನ ಕಿವಿಯಲ್ಲಿ ಏನೋ ಹೇಳಿ ಅವರನ್ನು ತಬ್ಬಿಕೊಂಡು ಸಂತೈಸಿದರು. ಅದೇನೆ ಇರಲಿ, ಅಪ್ಪು ತೆಲುಗು ಸಿನಿಮಾ ಇಂಡಸ್ಟ್ರೀಯಲ್ಲೂ ಸಾಕಷ್ಟು ಜನಪ್ರಿಯರಾಗಿದ್ದರು ಅನ್ನೋದು ಮಾತ್ರ ಸತ್ಯ.

ಇದನ್ನೂ ಓದಿ:  ಪುನೀತ್​ ನಿಧನದಿಂದ ಮಕ್ಕಳ ಮನಸ್ಸಿಗೆ ಘಾಸಿ; ‘ಅಪ್ಪು ಅಣ್ಣ ಬೇಕು’ ಅಂತ ಅಳುವ ಕಂದಮ್ಮಗಳ ವಿಡಿಯೋ ವೈರಲ್​

Published on: Oct 31, 2021 07:30 AM