ಗಣೇಶನಿಗೆ 108 ಕೆಜಿ ತೂಕದ ಲಡ್ಡು ಸಮರ್ಪಿಸಿದ ಎನ್ಟಿಐ ಸೆಕೆಂಡ್ ಫೇಸ್ ಬಡಾವಣೆಯ ನಿವಾಸಿಗಳು
ಗಣಪನ ವಿಸರ್ಜನೆ ನಡೆಯುವ ರವಿವಾರದಂದು ಇಲ್ಲಿ ಅನೇಕ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಅದೇ ದಿನ ಬಹುಮಾನ ವಿತರಣೆ ಕೂಡ ನಡೆಯಲಿದೆ. ಶನಿವಾರ ಕನ್ನಡ ಖ್ಯಾತ ಸ್ಟ್ಯಾಂಡ್ ಅಪ್ ಕಮೇಡಿಯನ್ ಸುಧಾ ಬರಗೂರು ಹಾಸ್ಯ ಸಂಜೆಯ ಮೂಲಕ ಎಲ್ಲರನ್ನು ರಂಜಿಸಲಿದ್ದಾರೆ.
ಬೆಂಗಳೂರು, ಆಗಸ್ಟ್ 29: ಭಾರೀ ಗಾತ್ರದ ಗಣೇಶನನ್ನು ನಾವು ನೋಡುತ್ತಿದ್ದೇವೆ, ಆದರೆ ಗಣಪನಿಗೆ ನೈವೇದ್ಯ ರೂಪದಲ್ಲಿ ಭಾರೀ ಗಾತ್ರದ ಲಡ್ಡು ಸಮರ್ಪಿಸುವುದನ್ನು ಮೊದಲು ನೋಡಿದ್ದೀರಾ? ಇಲ್ಲಿ ನೋಡಿ, ರಾಜೀವ್ ಗಾಂಧಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರು ತಮ್ಮ ಏರಿಯಾದಲ್ಲಿ ಪ್ರತಿಷ್ಠಾಪಿಸಿರುವ ವಿನಾಯಕನಿಗೆ 108 ಕೆಜಿ ತೂಕದ ಲಡ್ಡುವನ್ನು ಸಮರ್ಪಣೆ ಮಾಡಿದ್ದಾರೆ. ಅದನ್ನು ಹೊರಲು 6 ಜನ ಬೇಕಾಗಿತ್ತು ಮಾರಾಯ್ರೇ! ಅಂದಹಾಗೆ ಸಂಘದವರು ಕಳೆದ ಹತ್ತು ವರ್ಷಗಳಿಂದ ಇಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದಾರೆ ಮತ್ತು ಪ್ರತಿಭಾರಿ ಭಿನ್ನತೆಯನ್ನು ಕಾಯ್ದುಕೊಳ್ಳುತ್ತಾರೆ. ಈ ಬಾರಿ ಏರಿಯಾದ ಗೃಹಿಣಿಯರೆಲ್ಲ ಡೊಳ್ಳು ಬಾರಿಸುತ್ತ ಕುಣಿಯುತ್ತ ಪಾರ್ವತೀಪುತ್ರನನ್ನು ಬರಮಾಡಿಕೊಂಡಿದ್ದಾರೆ. ಇಲ್ಲಿನ ನಿವಾಸಿಗಳು ಮೂರು ದಿನಗಳ ಕಾಲ ನಡೆಯುವ ಗಣೇಶೋತ್ಸವದ ಬಗ್ಗೆ ಉತ್ಸಾಹದಿಂದ ಮಾತಾಡಿದ್ದಾರೆ.
ಇದನ್ನೂ ಓದಿ: ಸ್ವಿಟ್ಜರ್ಲೆಂಡ್ ಪ್ರಜೆಯಿಂದ ಗಣೇಶೋತ್ಸವ: ಮುಸ್ಲಿಂ ಮನೆಯಲ್ಲಿ ಕ್ರೈಸ್ತನಿಂದ ಪ್ರತಿಷ್ಠಾಪನೆಯಾದ ಗಣಪತಿ ಇಲ್ಲಿ ನೋಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
