Nithya Bhavishya: ನವರಾತ್ರಿಯ ಐದನೇ ದಿನದ ರಾಶಿ ಭವಿಷ್ಯ ತಿಳಿಯಿರಿ

|

Updated on: Oct 07, 2024 | 6:45 AM

ಇಂದು (ಅ.07) ಸೋಮವಾರ. 9 ದಿನಗಳ ಕಾಲ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತೆ. ಹೆಣ್ಣು ದೇವತೆಗಳನ್ನು ಪೂಜಿಸಲಾಗುತ್ತೆ. ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಏನು ಫಲ? ಗ್ರಹಗಳ ಸಂಚಾರದಿಂದ ಆಗುವ ಪರಿಣಾಮಗಳೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 07ರ ಸೋಮವಾರವಾದ ಇಂದು ನವರಾತ್ರಿ ಹಬ್ಬದ 5ನೇ ದಿನ. ಈ ವರ್ಷದ ಶಾರದೀಯ ನವರಾತ್ರಿ ಹಬ್ಬವನ್ನ ಅಕ್ಟೋಬರ್ 3 ರಿಂದ ಆಚರಿಸಲಾಗುತ್ತಿದೆ. ನವರಾತ್ರಿಯ 9 ದಿನಗಳಲ್ಲಿ ದುರ್ಗಾ ದೇವಿಯ (Durga Devi) 9 ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಐದನೇ ದಿನವನ್ನು ದುರ್ಗಾ ದೇವಿಯ ಐದನೇ ರೂಪವಾದ ಸ್ಕಂದಮಾತೆಗೆ ಸಮರ್ಪಿಸಲಾಗಿದೆ. ಈಕೆಯನ್ನು ದುರ್ಗಾ ದೇವಿಯ ಒಂಬತ್ತು ಅವತಾರಗಳಲ್ಲಿ ಒಬ್ಬಳು ಎಂದು ಹೇಳಲಾಗುತ್ತದೆ.

ಪಾರ್ವತಿ ಹಾಗೂ ಶಿವನ ಮದುವೆ ಬಳಿಕ, ಸ್ಕಂದ ಅಥವಾ ಷಣ್ಮುಖನು ಜನ್ಮ ತಾಳುತ್ತಾನೆ. ಷಣ್ಮುಖನನ್ನೇ ತಮ್ಮ ದೇವಸೈನ್ಯಕ್ಕೆ ದೇವತೆಗಳು ಸೇನಾನಿಗಳಾಗಿಸಿಕೊಳ್ಳುತ್ತಾರೆ. ದೇವಿಯೂ ಸೇರಿದಂತೆ ಸರ್ವರೂ ಈತನಿಗೆ ತಮ್ಮ ಶಕ್ತಿಗಳನ್ನು ನೀಡುತ್ತಾರೆ. ಸ್ಕಂದನು ದೇವಸೇನಾ ಸಮೇತನಾಗಿ ತೆರಳಿ, ತಾರಕಾಸುರನನ್ನು ಘೋರ ಯುದ್ಧದಲ್ಲಿ ಕೊಂದು ಮರಳುತ್ತಾನೆ. ಹೀಗೆ ಜಗತ್ಕಲ್ಯಾಣಕಾರಕನಾದ ಸ್ಕಂದನನ್ನು ಹೆತ್ತು ಕೊಟ್ಟ ಈಕೆ ಸ್ಕಂದಮಾತೆ ಎನಿಸಿಕೊಳ್ಳುತ್ತಾಳೆ. ಇಂತಹ ವಿಶೇಷದಿನವಾದ ಇಂದು ದ್ವಾದಶ ರಾಶಿ ಭವಿಷ್ಯ (Horoscope) ಹೇಗಿದೆ?, ಈ ದಿನದ ಗ್ರಹಗಳ ಚಲನವಲನ ಹೇಗಿದೆ? ಈ ಪ್ರಶ್ನೆಗಳಿಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ. ವಿಡಿಯೋ ನೋಡಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪಂಚಮಿ/ ಷಷ್ಠಿ, ನಿತ್ಯನಕ್ಷತ್ರ: ಅನಿರಾಧಾ, ಯೋಗ: ಆಯುಷ್ಮಾನ್​, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 16 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:53 ರಿಂದ 09:22, ಯಮಘಂಡ ಕಾಲ ಮಧ್ಯಾಹ್ನ 10:51ರಿಂದ 12: 20ರವರೆಗೆ, ಗುಳಿಕ ಕಾಲ ಮಧ್ಯಾಹ್ನ 03:19 ರಿಂದ 04:48 ರವರೆಗೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ