ನಂಜನಗೂಡು ನಂಜುಂಡೇಶ್ವರ ದೇವಸ್ಥಾನದಲ್ಲಿ ಸಂಗ್ರಹವಾಗಿರುವ ಎರಡು ತಿಂಗಳ ಕಾಣಿಕೆ ರೂ. 2 ಕೋಟಿಗೂ ಹೆಚ್ಚು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 26, 2022 | 6:47 PM

ದೇವಸ್ಥಾನದ ಮೂಲಗಳಿಂದ ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ದೇವಸ್ಥಾನದ 25 ಹುಂಡಿಗಳಲ್ಲಿ ಸಂಗ್ರಹವಾಗಿರುವ ಒಟ್ಟು ಮೊತ್ತ ರೂ. 2,04, 08,923. ಇದಲ್ಲದೆ, 120 ಗ್ರಾಮ್ ಚಿನ್ನ, 5.6 ಕೆಜಿ ಬೆಳ್ಳಿಯನ್ನು ಸಹ ಭಕ್ತರು ದೇವರಿಗೆ ಸಮರ್ಪಿಸಿದ್ದಾರೆ.

ನಂಜನಗೂಡಿನ ನಂಜುಂಡೇಶ್ವರ (Nanjundeshwara) ದೇವಸ್ಥಾನಕ್ಕೆ ಐಶ್ವರ್ಯ ದೇವತೆ ಲಕ್ಷ್ಮಿದೇವತೆಯ ಆಗಮವಾಗಿದೆ. ಕನ್ಪ್ಯೂಸ್ ಆದ್ರಾ? ದಕ್ಷಿಣದ ಕಾಶಿ (Southern Kashi) ಎಂದು ಖ್ಯಾತ ಹೊಂದಿರುವ ದೇವಸ್ಥಾನದ ಕಾಣಿಕೆ ಹುಂಡಿಗಳಲ್ಲಿ ಕಳೆದ ಕೇವಲ ಎರಡು ತಿಂಗಳಲ್ಲಿ ಭಕ್ತರು ಹಾಕಿರುವ ಕಾಣಿಕೆಯ ಮೊತ್ತ ರೂ. 2 ಕೋಟಿಗಿಂತ ಹೆಚ್ಚು ಮಾರಾಯ್ರೇ. ಹುಂಡಿಯಲ್ಲಿ ಸಂಗ್ರಹವಾಗಿರುವ ಹಣ ಎಣಿಸಲು ಎಷ್ಟು ಜನರನ್ನು ನಿಯೋಜಿಸಲಾಗಿದೆ ಅಂತ ನೀವೇ ನೋಡಿ. ನಂಜನಗೂಡಿನ ನಂಜುಂಡೇಶ್ವರ ನಿಸ್ಸಂದೇಹವಾಗಿ ಕುಬೇರ. ಕೇವಲ ತಿರುಪತಿ ತಿಮ್ಮಪ್ಪನ (Tirupati Timmappa) ದೇವಸ್ಥಾನದಲ್ಲಿ ಕೋಟಿಗಟ್ಟಲೆ ಹಣ ಹುಂಡಿಗಳಲ್ಲಿ ಸಂಗ್ರಹವಾಗಿದ್ದು ಕೇಳಿಸಿಕೊಂಡಿದ್ದ ನಮಗೆ ನಂಜುಂಡೇಶ್ವರ ದೇವಸ್ಥಾನದಲ್ಲೂ ಭಾರಿ ಮೊತ್ತದ ಕಾಣಿಕೆ ಸಂಗ್ರವಾಗುತ್ತಿರುವುದು ಕಂಡು ಖುಷಿ ಆಗುವುದರ ಜೊತೆ ಅಭಿಮಾನವೂ ಮೂಡುತ್ತದೆ.

ದೇವಸ್ಥಾನದ ಮೂಲಗಳಿಂದ ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ದೇವಸ್ಥಾನದ 25 ಹುಂಡಿಗಳಲ್ಲಿ ಸಂಗ್ರಹವಾಗಿರುವ ಒಟ್ಟು ಮೊತ್ತ ರೂ. 2,04, 08,923. ಇದಲ್ಲದೆ, 120 ಗ್ರಾಮ್ ಚಿನ್ನ, 5.6 ಕೆಜಿ ಬೆಳ್ಳಿಯನ್ನು ಸಹ ಭಕ್ತರು ದೇವರಿಗೆ ಸಮರ್ಪಿಸಿದ್ದಾರೆ. ಗಮ್ಮತ್ತಿನ ಸಂಗತಿಯೆಂದರೆ, 2016 ರಲ್ಲಿ ನಿಷೇಧಗೊಂಡ ನೋಟುಗಳನ್ನು ಜನ ಈಗಲೂ ಇಟ್ಟುಕೊಂಡಿದ್ದಾರೆ. ಕೆಲ ನೋಟುಗಳು ಹುಂಡಿಗಳಲ್ಲಿ ಪತ್ತೆಯಾಗಿವೆ.

ಎಷ್ಟು ಮೌಲ್ಯದ ನಿಷೇಧಿತ ನೋಟುಗಳ ದೊರೆತಿವೆ ಅನ್ನೋದು ನಮಗೆ ಗೊತ್ತಾಗಿಲ್ಲವಾದರೂ, ಅವು ಎಷ್ಟೇ ಮೌಲ್ಯದ ನೋಟುಗಳಿದ್ದರೂ ಈಗ ಪೇಪರ್ ತುಣುಕುಗಳು ಮಾತ್ರ.

ಅಂದಹಾಗೆ, ನಮ್ಮ ನಂಜುಂಡೇಶ್ವರನಿಗೆ ವಿದೇಶಿ ಮೂಲದ ಭಕ್ತರೂ ಇದ್ದಾರೆ ಮಾರಾಯ್ರೇ. ಹುಂಡಿಗಳಲ್ಲಿ ಸಿಕ್ಕಿರುವ ವಿದೇಶೀ ಕರೆನ್ಸಿಯೇ ಇದಕ್ಕೆ ಸಾಕ್ಷಿ. ಎರಡು ತಿಂಗಳ ಹಿಂದೆ ಸಂಗ್ರಹವಾದ ಕಾಣಿಕೆಗಿಂತ ಹೆಚ್ಚು ಕಾಣಿಕೆ ಸಂಗ್ರಹವಾಗಿರುವುದಕ್ಕೆ ಕೊರೊನಾದಿಂದ ಮುಚ್ಚಲ್ಪಟ್ಟಿದ್ದ ದೇವಸ್ಥಾನಗಳನ್ನು ತೆರೆದು ಭಕ್ತರಿಗೆ ದರ್ಶನದ ಅವಕಾಶ ನೀಡಿದ್ದೇ ಕಾರಣ ಎನ್ನಲಾಗಿದೆ.

ಇದನ್ನೂ ಓದಿ:   Sachin Tendulkar: ಗಾಯಗೊಂಡಿದ್ದ ಪಕ್ಷಿಯ ಜೀವ ಉಳಿಸಿದ ಸಚಿನ್ ತೆಂಡೂಲ್ಕರ್! ಹೃದಯವಂತ ಎಂದ ನೆಟ್ಟಿಗರು; ವಿಡಿಯೋ

Follow us on