ಹೋರಾಟಕ್ಕೆ ಬೆಂಬಲ ನೀಡುವಂತೆ ಪ್ರಯಾಣಿಕರ ನೆರವು ಕೋರಿದ ಸಾರಿಗೆ ಸಂಸ್ಥೆಯ ಪದಾಧಿಕಾರಿಗಳು
ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬಸ್ಗಳಿಗೆ ಕಾಯುತ್ತಿದ್ದ ಜನ; ಮುಷ್ಕರದಿಂದ ಅನಾನುಕೂಲವಾದರೂ ಸಾರಿಗೆ ನೌಕರರ ಪರ ಇದ್ದೇವೆ, ಬಹಳ ವರ್ಷಗಳಿಂದ ಅವರು ತಮ್ಮ ಬೇಡಿಕೆಗಳಿಗಾಗಿ ಹೋರಾಡುತ್ತಿದ್ದಾರೆ, ಅವರಿಗೆ ತಮ್ಮ ಸಹಕಾರದ ಅಗತ್ಯವಿದೆ, ಮೆಟ್ರೋ ಟ್ರೇನ್ಗಳ ಮೂಲಕ ಇಲ್ಲವೇ ಕ್ಯಾಬ್ಗಳ ನೆರವಿನಿಂದ ಕಚೇರಿ, ಶಾಲಾ ಕಾಲೇಜುಗಳನ್ನು ತಲುಪುತ್ತೇವೆ ಎಂದು ಹೇಳುತ್ತಾರೆ.
ಬೆಂಗಳೂರು, ಆಗಸ್ಟ್ 4: ಸಾರಿಗೆ ನೌಕರರ ಸಂಸ್ಥೆಯ ಪ್ರತಿನಿಧಿಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಡುವೆ ಸಭೆ ಶುರುವಾಗಿದೆ ಮತ್ತು ಮಾತುಕತೆ ಫಲ ಕಾಣದೆ ಹೋದರೆ ಇವತ್ತು ಮಧ್ಯರಾತ್ರಿಯಿಂದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಸೇವೆ ನಿಲ್ಲಲಿದೆ. ಬಿಎಂಟಿಸಿ ಬಸ್ಗಳಲ್ಲಿ ಓಡಾಡುವ ಲಕ್ಷಾಂತರ ಜನರಿಗೆ ಮುಷ್ಕರದಿಂದ ತೊಂದರೆಯಾಗಲಿದ್ದು, ಪ್ರತಿಭಟನೆ ನಡೆಸುತ್ತಿರೋದು ಜನರಿಗೋಸ್ಕರ ದಯವಿಟ್ಟು ತಮ್ಮೊಂದಿಗೆ ಸಹಕರಿಸುವಂತೆ ಸಂಘದ ಪದಾಧಿಕಾರಿಗಳು ಭಿತ್ತಿಪತ್ರಗಳನ್ನು ಹಂಚಿ ವಿನಂತಿ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಪದಾಧಿಕಾರಿಯೊಬ್ಬರು, ಸರ್ಕಾರ ತಮ್ಮ ಬೇಡಿಕೆಗಳನ್ನು ಅಸಡ್ಡೆ ಮಾಡುತ್ತಿದೆ, ವೇತನ ಪರಿಷ್ಕರಣೆ, ಹಿಂಬಾಕಿಯ ಬಿಡುಗಡೆ ಮತ್ತು 2021ರಲ್ಲಿ ಸಾರಿಗೆ ನೌಕರರ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ಹಿಂಪಡೆದುಕೊಳ್ಳುವುದು ತಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದು ಹೇಳಿದರು.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರಕ್ಕೆ ಕಾದಿದೆ ಮತ್ತೊಂದು ಪ್ರತಿಭಟನೆ ಬಿಸಿ!
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
