ಚುನಾವಣೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿ ನಾಳೆ ಆಟಂ ಬಾಬ್ ಸಿಡಿಸಲಿದ್ದಾರೆ: ಶಿವರಾಜ್ ತಂಗಡಿಗಿ
ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಚುನಾವಣೆ ಬ್ಯಾಲಟ್ ಪೇಪರ್ಗಳ ಮೂಲಕ ಆಗುತ್ತಿತ್ತೇ ಹೊರತು ಈವಿಎಂಗಳ ಬಳಕೆಯಾಗುತ್ತಿರಲಿಲ್ಲ, ಮತಗಳ್ಳತನಕ್ಕೆ ಅಗ ಅವಕಾಶವಿರಲಿಲ್ಲ, ಈವಿಎಂಗಳ ಬಳಕೆಯನ್ನು ಅನುಷ್ಠಾನಗೊಳಿಸಿದ್ದ್ದು ಕಾಂಗ್ರೆಸ್ ಸರ್ಕಾರವೇ, ಆದರೆ ಅವುಗಳನ್ನು ಹೀಗೆ ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಅಂತ ಯಾರಿಗೆ ಗೊತ್ತಿತ್ತು ಎಂದು ಸಚಿವ ತಂಗಡಿಗಿ ಹೇಳಿದರು.
ಬೆಂಗಳೂರು, ಆಗಸ್ಟ್ 4: ನಗರದಲ್ಲಿಂದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಿಗಿ (Shivaraj Tangadigi), ಚುನಾವಣೆಯಲ್ಲ್ಲಿ ಅಕ್ರಮಗಳು ನಡೆದಿರೋದು ಸತ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಅದನ್ನು ಪತ್ತೆ ಮಾಡಿದ್ದಾರೆ ಮತ್ತು ನಾಳೆ ಬೆಂಗಳೂರಲ್ಲಿ ಅಕ್ರಮಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು. ದೇಶದ ಚುನಾವಣಾ ಅಯೋಗ ಬಹಳ ಜವಾಬ್ದಾರಿಯುತ ಸಂಸ್ಥೆ, ಅದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು. ಲೋಕಸಭಾ ಚುನಾವಣೆ ನಡೆಯುವ ಸಂದರ್ಭದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲದಿದ್ದರೂ, ಕಾಂಗ್ರೆಸ್ ಕಡಿಮೆ ಸೀಟು ಬರೋದಿಕ್ಕೆ ಕಾರಣವೇನು? ತಾನು ಸಹ ಚುನಾವಣಾಯಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಗೂ ಸಂಶಯವಿತ್ತು, ಅದನ್ನು 2-3 ಸಲ ಮಾಧ್ಯಮಗಳಲ್ಲಿ ಪ್ರಸ್ತಾಪ ಕೂಡ ಮಾಡಿದ್ದೆ ಎಂದು ತಂಗಡಿಗಿ ಹೇಳಿದರು.
ಇದನ್ನೂ ಓದಿ: ಮತ ಕಳ್ಳತನ ಆರೋಪ: ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ನೇತೃತ್ವದ ಪ್ರತಿಭಟನೆಗೆ ಸ್ಥಳ ನಿಗದಿಯೇ ದೊಡ್ಡ ತಲೆನೋವು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

