Video: ಮಗಳು ರಸ್ತೆಗುಂಡಿಗೆ ಬಿದ್ದಿದ್ದಕ್ಕೆ, ಕೆಸರು ನೀರಿನಲ್ಲಿ ಕುಳಿತು ಪ್ರತಿಭಟಿಸಿದ ತಂದೆ
ಮಗಳು ರಸ್ತೆಗುಂಡಿಗೆ ಬಿದ್ದಿದ್ದಕ್ಕೆ ಕೋಪಗೊಂಡ ತಂದೆಯೊಬ್ಬರು ಅದೇ ಕೊಳಕು ನೀರಿನಲ್ಲಿ ಕುಳಿತು ವಿಶಿಷ್ಟ ಪ್ರತಿಭಟನೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಹಲವಾರು ರಾಜಕೀಯ ಮುಖಂಡರಿಗೆ ಪದೇ ಪದೇ ದೂರು ನೀಡಿದ್ದರೂ, ರಸ್ತೆ ಹಲವು ತಿಂಗಳುಗಳಿಂದ ಶೋಚನೀಯ ಸ್ಥಿತಿಯಲ್ಲಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಇದನ್ನು ದುರಸ್ತಿ ಮಾಡಲು ಅಥವಾ ಪುನರ್ನಿರ್ಮಿಸಲು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಕಾನ್ಪುರ, ಆಗಸ್ಟ್ 04: ಮಗಳು ರಸ್ತೆಗುಂಡಿಗೆ ಬಿದ್ದಿದ್ದಕ್ಕೆ ಕೋಪಗೊಂಡ ತಂದೆಯೊಬ್ಬರು ಅದೇ ಕೊಳಕು ನೀರಿನಲ್ಲಿ ಕುಳಿತು ವಿಶಿಷ್ಟ ಪ್ರತಿಭಟನೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಕೇವಳ ಮಗಳು ಬಿದ್ದಿದ್ದಾಳೆಂದಷ್ಟೇ ಅಲ್ಲ, ಇನ್ಯಾರೂ ಕೂಡ ಬೀಳಬಾರದು ಎನ್ನುವ ಕಾರಣಕ್ಕೆ ಪ್ರತಿಭಟನೆ ನಡೆಸಿದ್ದಾರೆ. ಹಲವು ರಾಜಕೀಯ ಮುಖಂಡರಿಗೆ ಪದೇ ಪದೇ ದೂರು ನೀಡಿದ್ದರೂ, ರಸ್ತೆ ಹಲವು ತಿಂಗಳುಗಳಿಂದ ಶೋಚನೀಯ ಸ್ಥಿತಿಯಲ್ಲಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆದರೆ, ಇದನ್ನು ದುರಸ್ತಿ ಮಾಡಲು ಅಥವಾ ಪುನರ್ನಿರ್ಮಿಸಲು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನೀರು ತುಂಬಿದ ಗುಂಡಿಯಲ್ಲಿ ಚಾಪೆ ಮತ್ತು ದಿಂಬಿನೊಂದಿಗೆ ಮಲಗಿರುವ ವ್ಯಕ್ತಿಯ ವಿಡಿಯೋ ಸಾಮಾಜಿಕ ಮಾಧ್ಯಮ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ.
ರಸ್ತೆಗಳ ದುಃಸ್ಥಿತಿ ಮತ್ತು ಗುಂಡಿಗಳಿಂದ ಉಂಟಾಗುವ ಅಪಘಾತಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲು ಈ ವಿಚಿತ್ರ ಪ್ರತಿಭಟನೆ ನಡೆಸಿದ್ದಾರೆ. ನಿರಂತರ ಮಳೆಯಿಂದಾಗಿ ಕಾನ್ಪುರದ ಹಲವಾರು ಭಾಗಗಳು ಜಲಾವೃತಗೊಂಡಿವೆ. ಹವಾಮಾನ ಇಲಾಖೆಯು ಹೆಚ್ಚಿನ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

