ಮಂಗಳೂರಿನಿಂದ ಮಾಸ್ಕ್ ಖರೀದಿಯಲ್ಲಿ ನಡೆದಿದೆಯಾ ಭ್ರಷ್ಟಾಚಾರ?
[lazy-load-videos-and-sticky-control id=”I9RSNT04DqA”] ಬೆಂಗಳೂರು: ವಿಧಾನ ಪರಿಷತ್ ಸಿಬ್ಬಂದಿಗೆ ಮಂಗಳೂರಿನಿಂದ ಮಾಸ್ಕ್ ಖರೀದಿಸಿದ ವಿಧಾನ ಪರಿಷತ್ ಸಭಾಪತಿಗಳ ಕಾರ್ಯಲಯದ ಕ್ರಮಕ್ಕೆ ಭಾರೀ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಸಭಾಪತಿಗಳ ಕಚೇರಿ ಇಂದು ಸ್ಪಷ್ಟನೆ ನೀಡಿದೆ. ವಿಧಾನ ಪರಿಷತ್ ಸಚಿವಾಲಯ ಇತ್ತೀಚೆಗೆ ತನ್ನ ಕಚೇರಿ ಸಿಬ್ಬಂದಿಗಾಗಿ ಮಂಗಳೂರಿನಿಂದ 500 ಎನ್-95 ಮಾಸ್ಕ್ಗಳನ್ನು ಖರೀದಿಸಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತಲ್ಲದೇ ಇಲ್ಲಿಯೇ ಬೆಂಗಳೂರಿನಲ್ಲಿ ಖರೀದಿಯ ಬದಲು ಮಂಗಳೂರಿನಿಂದ ಖರೀದಿಸಿದ್ದ ಔಚಿತ್ಯವನ್ನ ಪ್ರಶ್ನಿಸಲಾಗಿತ್ತು. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಭಾಪತಿ ಕಚೇರಿ, ಬೆಂಗಳೂರಿನಲ್ಲಿ […]
[lazy-load-videos-and-sticky-control id=”I9RSNT04DqA”]
ಬೆಂಗಳೂರು: ವಿಧಾನ ಪರಿಷತ್ ಸಿಬ್ಬಂದಿಗೆ ಮಂಗಳೂರಿನಿಂದ ಮಾಸ್ಕ್ ಖರೀದಿಸಿದ ವಿಧಾನ ಪರಿಷತ್ ಸಭಾಪತಿಗಳ ಕಾರ್ಯಲಯದ ಕ್ರಮಕ್ಕೆ ಭಾರೀ ಟೀಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಸಭಾಪತಿಗಳ ಕಚೇರಿ ಇಂದು ಸ್ಪಷ್ಟನೆ ನೀಡಿದೆ.
ವಿಧಾನ ಪರಿಷತ್ ಸಚಿವಾಲಯ ಇತ್ತೀಚೆಗೆ ತನ್ನ ಕಚೇರಿ ಸಿಬ್ಬಂದಿಗಾಗಿ ಮಂಗಳೂರಿನಿಂದ 500 ಎನ್-95 ಮಾಸ್ಕ್ಗಳನ್ನು ಖರೀದಿಸಿತ್ತು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತಲ್ಲದೇ ಇಲ್ಲಿಯೇ ಬೆಂಗಳೂರಿನಲ್ಲಿ ಖರೀದಿಯ ಬದಲು ಮಂಗಳೂರಿನಿಂದ ಖರೀದಿಸಿದ್ದ ಔಚಿತ್ಯವನ್ನ ಪ್ರಶ್ನಿಸಲಾಗಿತ್ತು.
ಹೀಗಾಗಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಭಾಪತಿ ಕಚೇರಿ, ಬೆಂಗಳೂರಿನಲ್ಲಿ ಅಗತ್ಯವಿದ್ದಷ್ಟು ಎನ್-95 ಮಾಸ್ಕ್ ಸಕಾಲಕ್ಕೆ ಪೂರೈಕೆ ಆಗದ ಕಾರಣ ಮಂಗಳೂರಿನಿಂದ ಖರೀದಿಸಲಾಗಿದೆ. ಆರೋಗ್ಯ ಇಲಾಖೆ ಉಚಿತವಾಗಿ ವಿತರಣೆ ಬಗ್ಗೆ ಹೇಳಿರಲಿಲ್ಲ, ಬೆಂಗಳೂರಿನ ಮೆಡಿಕಲ್ ಸ್ಟೋರ್ಗಳಲ್ಲಿ ವಿಚಾರಿಸಿದಾಗ ಎಲ್ಲಿಯೂ ಸಿಗಲಿಲ್ಲ.
ಹಾಗೇನೇ ಕ್ರೆಡಿಟ್ ಆಧಾರದಲ್ಲಿ ಪೂರೈಸಲು ಯಾರೂ ಮುಂದೆ ಬರಲಿಲ್ಲ, ಹೀಗಾಗಿ ವಿಧಾನಪರಿಷತ್ ಕಾರ್ಯದರ್ಶಿ ಒಪ್ಪಿಗೆ ಮೇರೆಗೆ ಗುಣಮಟ್ಟ ಮತ್ತು ದರವನ್ನು ಗಮನದಲ್ಲಿಟ್ಟುಕೊಂಡು ಮಂಗಳೂರಿನಿಂದ ಖರೀದಿಸಲಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಕಚೇರಿ ಸ್ಪಷ್ಟನೆ ನೀಡಿದೆ.
Published On - 3:44 pm, Tue, 21 July 20