ಮಾಲ್ ಗಳು ಓಪನ್.. ಆದ್ರೆ ಜನರಿಲ್ಲದೆ ಎಲ್ಲಾ ಖಾಲಿ ಖಾಲಿ
[lazy-load-videos-and-sticky-control id=”7qQWEU59Fkw”] ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದ ಕಾರಣ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಕಟ್ಟುನಿಟ್ಟಾದ ಲಾಕ್ ಡೌನ್ ಘೋಷಣೆ ಮಾಡಿತ್ತು. ಇದರಿಂದಾಗಿ ಬೆಂಗಳೂರಿನ ಪ್ರಮುಖ ಮಾಲ್ ಗಳು, ಸಿನಿಮಾ ಥಿಯೇಟರ್ ಗಳು ಹಾಗೂ ಪ್ರಮುಖ ಜನ ಸಂದಣಿ ಸೇರುವ ಸ್ಥಳಗಳನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ಸರ್ಕಾರದ ಆದೇಶದಂತೆ ಎಲ್ಲಾ ಮಾಲ್ ಗಳ ಹಾಗೂ ಸಿನಿಮಾ ಥಿಯೇಟರ್ ಗಳ ಮಾಲೀಕರು ತಮ್ಮೆಲ್ಲಾ ವಹಿವಾಟಿಗೆ ಬ್ರೇಕ್ ಹಾಕಿದ್ದರು. ಆದರೆ ನೆನ್ನೆಯಿಂದ ರಾಜ್ಯದ ರಾಜಧಾನಿಯಲ್ಲಿ ಹಾಗೂ […]
[lazy-load-videos-and-sticky-control id=”7qQWEU59Fkw”]
ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದ ಕಾರಣ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಕಟ್ಟುನಿಟ್ಟಾದ ಲಾಕ್ ಡೌನ್ ಘೋಷಣೆ ಮಾಡಿತ್ತು. ಇದರಿಂದಾಗಿ ಬೆಂಗಳೂರಿನ ಪ್ರಮುಖ ಮಾಲ್ ಗಳು, ಸಿನಿಮಾ ಥಿಯೇಟರ್ ಗಳು ಹಾಗೂ ಪ್ರಮುಖ ಜನ ಸಂದಣಿ ಸೇರುವ ಸ್ಥಳಗಳನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ಸರ್ಕಾರದ ಆದೇಶದಂತೆ ಎಲ್ಲಾ ಮಾಲ್ ಗಳ ಹಾಗೂ ಸಿನಿಮಾ ಥಿಯೇಟರ್ ಗಳ ಮಾಲೀಕರು ತಮ್ಮೆಲ್ಲಾ ವಹಿವಾಟಿಗೆ ಬ್ರೇಕ್ ಹಾಕಿದ್ದರು.
ಆದರೆ ನೆನ್ನೆಯಿಂದ ರಾಜ್ಯದ ರಾಜಧಾನಿಯಲ್ಲಿ ಹಾಗೂ ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಲಾಕ್ಡೌನ್ ಇರುವುದಿಲ್ಲವೆಂದು ಸಿಎಂ ಬಿಎಸ್ ಯಡಿಯೂರಪ್ಪನವರು ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡಿದ್ದರು. ಇದರಿಂದಾಗಿ ಮತ್ತೆ ನಗರದ ಎಲ್ಲಾ ಮಾಲ್ ಗಳು ಓಪನ್ ಆಗಿದ್ದು, ಪ್ರಾರಂಭದಲ್ಲಿ ಮಾಲ್ ಗಳ ಮಾಲೀಕರಿಗೆ ಕೊಂಚ ಬೇಸರ ಎದುರಾಗಿದೆ.
ಇಂದು ಬೆಳಿಗ್ಗೆಯಿಂದಲೇ ಕಾರ್ಯರಂಭ ಗೊಂಡಿರುವ ಮಾಲ್ಗಳು ಜನರೇ ಇಲ್ಲದೆ ಖಾಲಿ ಹೊಡೆಯುತ್ತಿವೆ. ಲಾಕ್ಡೌನ್ ಆದ ಒಂದು ವಾರದ ಬಳಿಕ ಮಾಲ್ಗಳು ಓಪನ್ ಆಗಿದ್ದರೂ ಸಹ ಜನರು ಮಾಲ್ ಗಳತ್ತ ಮುಖ ಮಾಡುತ್ತಿಲ್ಲ. ಹೀಗಾಗಿ ನಗರದ ಪ್ರಮುಖ ಮಾಲ್ಗಳು ಜನರೇ ಇಲ್ಲದೆ ಖಾಲಿ ಹೊಡೆಯುತ್ತಿವೆ.
Published On - 3:34 pm, Wed, 22 July 20