ಆಮೆ ಸಂಸ್ಕಾರಕ್ಕೆಂದು ಮಕ್ಕಳು ಅಂಗಳ ಅಗೆಯುವಾಗ ಕುಡಿಕೆಯಲ್ಲಿ ಪ್ರಾಚೀನ ನಾಣ್ಯಗಳು ಪತ್ತೆ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಅಪೂರ್ವ ಘಟನೆಯೊಂದು ನಡೆದಿದೆ. ಆಮೆ ಸಂಸ್ಕಾರದ ನಿಮಿತ್ತ ಮಕ್ಕಳು ಅಂಗಳದಲ್ಲಿ ನೆಲ ಅಗೆಯುತ್ತಿದ್ದಾಗ ಮಣ್ಣಿನ ಕುಡಿಕೆಯೊಂದು ದೊರೆತಿದೆ. ಈ ಕುಡಿಕೆಯನ್ನು ತೆರೆದು ನೋಡಿದಾಗ ಅದರೊಳಗೆ ಹಳೆಯ ಕಾಲದ ನಾಣ್ಯಗಳು ಪತ್ತೆಯಾಗಿವೆ. ಈ ಘಟನೆಯು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಸ್ಥಳಕ್ಕೆ ತಹಶೀಲ್ದಾರ್ ರಹೆನ್ ಪಾಶಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಚಿತ್ರದುರ್ಗ, ಅಕ್ಟೋಬರ್ 26: ಚಳ್ಳಕೆರೆ ತಾಲೂಕಿನ ಗೋಪನಹಳ್ಳಿಯಲ್ಲಿ ಆಮೆಯ ಅಂತಿಮ ಸಂಸ್ಕಾರಕ್ಕೆಂದು ಮಕ್ಕಳು ಮನೆಯ ಅಂಗಳ ಅಗೆದಾಗ ಪುಟ್ಟ ಕುಡಿಕೆಯಲ್ಲಿ ಹಳೇ ಕಾಲದ ನಾಣ್ಯಗಳು ಪತ್ತೆಯಾಗಿವೆ. ರಂಗಮ್ಮ ಎಂಬುವರ ಮನೆ ಅಂಗಳದಲ್ಲಿ ಕುಡಿಕೆ ಪತ್ತೆಯಾಗಿದ್ದು, ಸ್ಥಳಕ್ಕೆ ತಹಶೀಲ್ದಾರ್ ರಹೆನ್ ಪಾಶಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪುರಾತತ್ವ ಇಲಾಖೆ ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ರವಾನಿಸಲಾಗಿದ್ದು, ಕುಡಿಕೆ ಮತ್ತು ನಾಣ್ಯವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

