‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್

Edited By:

Updated on: Oct 06, 2024 | 5:42 PM

ನಟ ಪ್ರಥಮ್ ಅವರು ‘ಕರ್ನಾಟಕದ ಅಳಿಯ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾವನ್ನು ‘ಡೆವಿಲ್​’ ಎದುರು ಬಿಡುಗಡೆ ಮಾಡುವುದಾಗಿ ಈ ಮೊದಲು ನಿರ್ಧಾರ ಮಾಡಿದ್ದರು. ಈಗಲೂ ಅವರು ಅದೇ ನಿರ್ಧಾರಕ್ಕೆ ಬದ್ಧವಾಗಿದ್ದಾರಾ? ಈ ಪ್ರಶ್ನೆಗೆ ಸ್ವತಃ ಪ್ರಥಮ್​ ಉತ್ತರ ನೀಡಿದ್ದಾರೆ. ಬಿಡುಗಡೆ ಫ್ಲ್ಯಾನ್​ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ದರ್ಶನ್​ ಅಭಿಮಾನಿಗಳ ಅತಿರೇಕದ ಬಗ್ಗೆ ಮಾತನಾಡುವಾಗ ನಟ ಪ್ರಥಮ್​ ಅವರು ಒಂದು ಸವಾಲು ಹಾಕಿದ್ದರು. ‘ನಾವು ‘ಡೆವಿಲ್​’ ಸಿನಿಮಾದ ವಿರುದ್ಧವೇ ‘ಕರ್ನಾಟಕದ ಅಳಿಯ’ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ’ ಎಂದು ಜೂನ್​ ತಿಂಗಳಲ್ಲಿ ಹೇಳಿಕೆ ನೀಡಿದ್ದರು. ಅದರ ಬಗ್ಗೆ ಈಗ ಅವರು ಮತ್ತೆ ಮಾತನಾಡಿದ್ದಾರೆ. ‘ಡೆವಿಲ್​ ಎದುರು ಕರ್ನಾಟಕದ ಅಳಿಯ ಬರೋದು ಫಿಕ್ಸ್. ಅವರು ಫೆಬ್ರವರಿಯಲ್ಲಿ ಬಿಡುಗಡೆ ಮಾಡಿದರೆ ನಾನು ಕೂಡ ಆಗಲೇ ರಿಲೀಸ್​ ಮಾಡುತ್ತೇನೆ. ಫೆಬ್ರವರಿ 24ರವರೆಗೆ ಕಾಯುತ್ತೇನೆ ಅಷ್ಟೇ. ಯಾಕೆಂದರೆ ದುಡ್ಡು ಹಾಕಿದ ನಿರ್ಮಾಪಕರು ನಮ್ಮ ಮಾತು ಕೇಳಲ್ಲ’ ಎಂದಿದ್ದಾರೆ ಪ್ರಥಮ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಂಗಳ ರಾಜ್

ಮಂಗಳ ರಾಜ್ ಮೂಲತಃ ಮಧುಗಿರಿ ಬಳಿಯ ರತ್ನಗಿರಿ ರಂಗಾಪುರದವರು. ಇವರು ಸುದ್ದಿ ಮಧ್ಯಮಕ್ಕೆ ಕಾಲಿಟ್ಟು 13 ವರ್ಷಗಳಾಗಿವೆ. ಈಟಿವಿಯಲ್ಲಿ ಇಂಟರ್​ನ್​ಶಿಪ್​ , ಮಧ್ಯಮದ ಅ, ಆ ಇ ಈ ಕಲಿತಿದ್ದು ಕಸ್ತೂರಿ ನ್ಯೂಸ್ 24 ನಲ್ಲಿ ನಂತ್ರ ರಾಜ್ ನ್ಯೂಸ್, ದಿಗ್ವಿಜಯ ನ್ಯೂಸ್ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. 2021ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮುಂದುವರಿಸಿದ್ದಾರೆ. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ಅರಸಿ ಬಂದಿದ್ದು ಸಿನಿಮಾ ಜರ್ನಲಿಸ್ಟ್ ಕೆಲಸ. ಸಿನಿಮಾ ಸುದ್ದಿಗಳ ಕವರೇಜ್, ಸಿನಿಮಾ ಹಾಗೂ ಸಿನಿಮಾ ಮಂದಿಯ ವಿವಾದಗಳು, ವಿಮರ್ಶೆ, ಸಿನಿಮಾದವರ ಸಾವು ನೋವು ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವುಗಳ ವರದಿಗಾರಿಕೆ ಇವರ ಕಾಯಕ. ಸಿನಿಮಾ ನೋಡುವುದೇ ಎಲ್ಲಾ ಆಸಕ್ತಿಗಳಿಗಿಂತ ಹೆಚ್ಚು ಆಸಕ್ತಿ.

Read More