Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ವೀಕೆಂಡ್ ನಲ್ಲಿ ಡಿಫರೆಂಟ್ ಅಗಿ ಡ್ರೆಸ್ ಮಾಡಿಕೊಂಡು ಹೊರಬಿದ್ದ ಗೃಹ ಸಚಿವ ಪರಮೇಶ್ವರ್ ಬೈಟ್ ನೀಡದೆ ಹೊರಟರು!

Bengaluru News: ವೀಕೆಂಡ್ ನಲ್ಲಿ ಡಿಫರೆಂಟ್ ಅಗಿ ಡ್ರೆಸ್ ಮಾಡಿಕೊಂಡು ಹೊರಬಿದ್ದ ಗೃಹ ಸಚಿವ ಪರಮೇಶ್ವರ್ ಬೈಟ್ ನೀಡದೆ ಹೊರಟರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 29, 2023 | 2:31 PM

ಅವರು ವಿದೇಶಗಳಲ್ಲಿ ಓದಿದವರು ಅಂತ ಬಹಳ ಜನಕ್ಕೆ ಗೊತ್ತಿರಲಾರದು. ಆಗೆಲ್ಲ ಅವರು ಆಗಿನ ಫ್ಯಾಶನ್ ಗೆ ತಕ್ಕಂತೆ ಡ್ರೆಸ್ ಮಾಡಿಕೊಳ್ಳುತ್ತಿದ್ದರು.

ಬೆಂಗಳೂರು: ಯಾರಿವರು ಅಂತ ಗೊಂದಲಕ್ಕೆ ಬಿದ್ರಾ? ಹೋಮ್ ಮಿನಿಸ್ಟ್ರು ಜಿ ಪರಮೇಶ್ವರ್ (G Parameshwara) ಸಾಹೇಬರು ಕಣ್ರೀ. ಹೌದು, ಕನ್ನಡಿಗರು ಸಚಿವರನ್ನು ಮೊದಲ್ಯಾತ್ತೂ ಹೀಗೆ ಫ್ಯಾಶನೇಬಲ್ ಉಡುಗೆಯಲ್ಲಿ ನೋಡಿರಲಿಲ್ಲ. ಅವರು ವಿದೇಶಗಳಲ್ಲಿ ಓದಿದವರು ಅಂತ ಬಹಳ ಜನಕ್ಕೆ ಗೊತ್ತಿರಲಾರದು. ಆಗೆಲ್ಲ ಅವು ಆಗಿನ ಫ್ಯಾಶನ್ ಗೆ ತಕ್ಕಂತೆ ಡ್ರೆಸ್ ಮಾಡಿಕೊಳ್ಳುತ್ತಿದ್ದರು. ಆದರೆ ರಾಜಕಾರಣಕ್ಕೆ ಬಂದ ಬಳಿಕ ಖಾದಿಬಟ್ಟೆಗಳಲ್ಲೇ ಓಡಾಡಲಾರಂಭಿಸಿದರು. ಎನಿವೇಸ್ ಡಾರ್ಕ್ ಬ್ಲ್ಯೂ ಟ್ರೌಸರ್ (blue trouser) ಮತ್ತು ಅದಕ್ಕೆ ಮ್ಯಾಚ್ ಆಗುವ ಬ್ಲ್ಯೂ ಚೆಕ್ಸ್ ಶರ್ಟ್ ನಲ್ಲಿ ಗೃಹಸಚಿವರು ಸ್ಲಾರ್ಟ್ ಕಾಣುತ್ತಿದ್ದಾರೆ. ಅದರಲ್ಲೂ ಇವತ್ತು ವೀಕೆಂಡ್ (weekend) ಬೇರೆ. ಹಾಗಾಗೇ, ತಮ್ಮ ಎಂದಿನ ಉಡುಗೆ ತೊಡುಗೆ ಬಿಟ್ಟು ಡಿಫರೆಂಟ್ ಆಗಿ ಡ್ರೆಸ್ ಮಾಡಿಕೊಳ್ಳೋಣ ಅಂತ ಪರಮೇಶ್ವರ್ ಯೋಚನೆ ಮಾಡಿದ್ದ್ದರೆ ಆಶ್ಚರ್ಯ ಪಡಬೇಕಿಲ್ಲ. ಕಾರಲ್ಲಿ ಕೂತ ಬಳಿಕ ಅವರು ಮಾಧ್ಯಮದವರಿಗೆ ಬೈಟ್ ನೀಡಲು ನಿರಾಕರಿಸಿದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ