Onam 2023: ಕಾಲೇಜ್​ನಲ್ಲಿ ಮುಗಿಲು ಮುಟ್ಟಿದ ಓಣಂ ಸಂಭ್ರಮ- ಮಿರ ಮಿರ ಮಿಂಚಿದ ವಿದ್ಯಾರ್ಥಿನಿಯರು

| Updated By: ಸಾಧು ಶ್ರೀನಾಥ್​

Updated on: Aug 26, 2023 | 2:51 PM

ಮಂಗಳೂರಿನ ಪಾಂಡೇಶ್ವರ ಬಳಿ ಇರುವ ಖಾಸಗಿ ಕಾಲೇಜ್​ನಲ್ಲಿ ಓಣಂ ಹಬ್ಬದ ಜೋಶ್​ ಸಖತ್ತಾಗಿಯೇ ಇತ್ತು. ಮಂಗಳೂರು ಫಿಸಿಯೋಥೆರಪಿ ಇನ್ಸ್​​ಟಿಟ್ಯೂಟ್​ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇರಳ ಸಂಪ್ರದಾಯ ಉಡುಗೆಯಲ್ಲಿ ಭರ್ಜರಿಯಾಗಿಯೇ ರೆಡಿ ಆಗಿದ್ರು. ಮೊದಲಿಗೆ ಮಹಾಬಲಿಯ ಪಾತ್ರದಾರಿಯನ್ನ ಮೆರವಣಿಗೆ ಮೂಲಕ ಕಾಲೇಜು ಆವರಣಕ್ಕೆ ಕರೆತಂದು ಈ ಓಣಂ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು.

ಅಲ್ಲಿನ ಕಾಲೇಜ್​ನಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು.. ಓಣಂ ನಿಮಿತ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಪ್ರದಾಯ ಉಡುಗೆ ತೊಟ್ಟು ಮಿರ ಮಿರ ಮಿಂಚಿದ್ದಾರೆ.. ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.. ಮಸ್ತ್​ ಮಸ್ತ್​ ಡ್ಯಾನ್ಸ್​.. ಸೀರೆಯಲ್ಲಿ ಸಖತ್​ ಮಿಂಚಿಂಗ್​.. ನಾವೇನ್​ ಕಮ್ಮಿ ಅಂತ ಪಂಚೆ ತೊಟ್ಟು ಬಂದ ಪಡ್ಡೆ ಹುಡುಗರು.. ಫೋಟೋ ಕ್ರೇಜ್​.. ಬಿಂದಾಸ್​ ಭೋಜನ.. ಮದುವಣಗಿತ್ತಿ ಸಿಂಗಾರಗೊಂಡ ಕಾಲೇಜ್​.. ಮುಗಿಲು ಮುಟ್ಟಿದ ಸಂಭ್ರಮ..
ವಾವ್​.. ಅದೇನ್​ ಸಡಗರ.. ಅದೇನ್​ ವಯ್ಯಾರ ಅಂತೀರಾ.. ಮಂಗಳೂರಿನ ಪಾಂಡೇಶ್ವರ ಬಳಿ ಇರುವ ಖಾಸಗಿ ಕಾಲೇಜ್​ನಲ್ಲಿ ಓಣಂ ಹಬ್ಬದ ಜೋಶ್​ ಸಖತ್ತಾಗಿಯೇ ಇತ್ತು. ಮಂಗಳೂರು ಫಿಸಿಯೋಥೆರಪಿ ಇನ್ಸ್​​ಟಿಟ್ಯೂಟ್​ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇರಳ ಸಂಪ್ರದಾಯ ಉಡುಗೆಯಲ್ಲಿ ಭರ್ಜರಿಯಾಗಿಯೇ ರೆಡಿ ಆಗಿದ್ರು. ಮೊದಲಿಗೆ ಮಹಾಬಲಿಯ ಪಾತ್ರದಾರಿಯನ್ನ ಮೆರವಣಿಗೆ ಮೂಲಕ ಕಾಲೇಜು ಆವರಣಕ್ಕೆ ಕರೆತಂದು ಈ ಓಣಂ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಇಷ್ಟೇ ಅಲ್ಲ ಹೂಗಳಿಂದ ರಂಗೋಲಿ ಹಾಕಿದ ಯುವತಿಯರು, ಅಲ್ಲಿಯೇ ಫೋಟೋಗೆ ಫೋಸ್​​ ಕೊಟ್ರು. ಈ ಸಂಭ್ರಮಗಳ ನಡುವೆ ಒಂದಿಷ್ಟು ಮನೋರಂಜನಾ ಕ್ರೀಡೆಗಳು ಗಮನ ಸೆಳೆದ್ವು. ಬಾಯಲ್ಲಿ ಸ್ಪೂನ್​ ಅದರ ಮೇಲೆ ನಿಂಬೆ ಇಟ್ಟುಕೊಂಡ ಯುವಕ, ಯುವತಿಯರು ವಾಕ್​ ಮಾಡಿದ್ರು. ಅಂತಿಮವಾಗಿ ಓಣಂ ಪ್ರಯುಕ್ತ ಭೂರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅನ್ನ ಸಾಂಬಾರ್, ವೆರೈಟಿ ವೆರೈಟಿ ಪಲ್ಯ ಇತರೆ ತಿನಿಸುಗಳನ್ನ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೇವಲ ಕೇರಳದ ವಿದ್ಯಾರ್ಥಿಗಳು ಮಾತ್ರವಲ್ಲ, ರಾಜ್ಯದ ಹಲವು ಜಿಲ್ಲೆ, ಗುಜರಾತ್ ಸೇರಿದಂತೆ ಇತರ ರಾಜ್ಯದ ವಿದ್ಯಾರ್ಥಿಗಳು ಭಾಗಿಯಾಗಿ ಎಂಜಾಯ್ ಮಾಡಿದ್ರು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠದ ಜತೆ ಜತೆಗೆ ಅನೇಕತೆಯಲ್ಲಿ ಏಕತೆ ಅನ್ನೋ ಸಂದೇಶವನ್ನ ಮನವರಿಕೆ ಮಾಡ್ತಿರೋದು ಖುಷಿಯ ಸಂಗತಿ.