ಬಂಡಿಪುರ ರಕ್ಷಿತಾರಣ್ಯದಲ್ಲಿ ಕಾಲು ಮುರಿದುಕೊಂಡಿರುವ ಮರಿಯಾನೆಯ ಚಿಕಿತ್ಸೆಗೆ ಮುಂದಾದ ಅರಣ್ಯಾಧಿಕಾರಿಗಳು

ಬಂಡಿಪುರ ರಕ್ಷಿತಾರಣ್ಯದಲ್ಲಿ ಕಾಲು ಮುರಿದುಕೊಂಡಿರುವ ಮರಿಯಾನೆಯ ಚಿಕಿತ್ಸೆಗೆ ಮುಂದಾದ ಅರಣ್ಯಾಧಿಕಾರಿಗಳು

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 26, 2023 | 1:36 PM

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮರಿಯಾನೆಯನ್ನು ಸೆರೆಹಿಡಿದು ಚಿಕಿತ್ಸೆ ನೀಡಲು ಜಿಎಸ್ ಬೆಟ್ಟ ಹಾಗೂ ಬಂಡಿಪುರ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಎರಡು ತಂಡ ರಚಸಿದ್ದು ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆಹಿಡಿಯಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಆನೆಮರಿಯ ಕಾಲು ನೆಟ್ಟಗಾದರೆ ಸಾಕು ಮಾರಾಯ್ರೇ.

ಚಾಮರಾಜನಗರ: ತಾಯಿ ಮಾನವಳಾಗಿರಲಿ ಅಥವಾ ಪಶು-ಪಕ್ಷಿ, ಅದು ತಾಯಿಯೇ! ಇಲ್ನೋಡಿ, ಬಂಡಿಪುರ ಅಭಯಾರಣ್ಯದಲ್ಲಿ ಮರಿಯಾನೆಯೊಂದು (baby elephant) ಎಡಮುಂಗಾಲಿಗೆ ಪೆಟ್ಟು ಮಾಡಿಕೊಂಡು, ಕುಂಟುತ್ತಾ ಹಿಂಡಿನೊಂದಿಗೆ ಸಾಗಿರುವುದನ್ನು ಬಂಡಿಪುರ-ಊಟಿ ರಸ್ತೆಯ (Bandipur-Ooty Road) ಮೂಲಕ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಒಂದು ದೊಡ್ಡ ಆನೆ, ಪ್ರಾಯಶಃ ಊನಗೊಂಡಿರುವ ಮರಿಯಾನೆಯ ತಾಯಿಯಾಗಿರಬಹುದು (mother elephant)-ಅದು ಅತ್ಯಂತ ಕಾಳಜಿ, ಮುತುವರ್ಜಿ ಹಾಗೂ ವಾತ್ಸಲ್ಯದಿಂದ ರಸ್ತೆ ದಾಟಿಸುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಮತ್ತು ಪರಿಸರವಾದಿಗಳು; ಅರಣ್ಯಾಧಿಕಾರಿಗಳು ಕೂಡಲೇ ಮರಿಯಾನೆಯ ನೆರವಿಗೆ ಧಾವಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮರಿಯಾನೆಯನ್ನು ಸೆರೆಹಿಡಿದು ಚಿಕಿತ್ಸೆ ನೀಡಲು ಜಿಎಸ್ ಬೆಟ್ಟ ಹಾಗೂ ಬಂಡಿಪುರ ವಲಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಎರಡು ತಂಡ ರಚಸಿದ್ದು ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆಹಿಡಿಯಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಆದಷ್ಟು ಬೇಗ ಆನೆಮರಿಯ ಕಾಲು ನೆಟ್ಟಗಾದರೆ ಸಾಕು ಮಾರಾಯ್ರೇ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ