Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi in ISRO, Bengaluru: ವಿಜ್ಞಾನಿಗಳನ್ನು ಅಭಿನಂದಿಸುವ ಮೊದಲು ಪ್ರಧಾನಿ ಮೋದಿ ‘ಜೈ ವಿಗ್ಯಾನ್ ಜೈ ಅನುಸಂಧಾನ’ ಘೋಷವಾಕ್ಯ ದೇಶಕ್ಕೆ ನೀಡಿದರು!

PM Modi in ISRO, Bengaluru: ವಿಜ್ಞಾನಿಗಳನ್ನು ಅಭಿನಂದಿಸುವ ಮೊದಲು ಪ್ರಧಾನಿ ಮೋದಿ ‘ಜೈ ವಿಗ್ಯಾನ್ ಜೈ ಅನುಸಂಧಾನ’ ಘೋಷವಾಕ್ಯ ದೇಶಕ್ಕೆ ನೀಡಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 26, 2023 | 12:24 PM

ಅಲ್ಲಿಂದ ಪೀಣ್ಯದ ಇಸ್ರೋ ಐಎಸ್ ಟಿಅರ್ ಎಸಿಗೆ ತೆರಳುವ ಮುನ್ನ ಪ್ರಧಾನಿ ಮುಂದೆ ಜನರನ್ನು ಉದ್ದೇಶಿಸಿ ಮಾತಾಡಿದರಲ್ಲದೆ ‘ಜೈ ಜವಾನ್ ಜೈ ಕಿಸಾನ್’ ಘೋಷವಾಕ್ಯದ ಹಾಗೆ ‘ಜೈ ವಿಗ್ಯಾನ್ ಜೈ ಅನುಸಂಧಾನ್’ ಉಕ್ತಿಯನ್ನು ದೇಶಕ್ಕೆ ನೀಡಿದರು. ಪ್ರಧಾನಿ ದೆಹಲಿಗೆ ವಾಪಸ್ಸು ಹೋಗುವಾಗಲೂ ವಿಮಾನ ನಿಲ್ದಾಣದ ಹೊರಗಡೆ ಸಹಸ್ರಾರು ಜನ ಹಾಜರಿದ್ದರು.

ಬೆಂಗಳೂರು:  ಶನಿವಾರ ಬೆಳಗಿನ ಜಾವ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಸಮಾರು 3 ಗಂಟೆಗಳ ಕಾಲ ನಗರದಲ್ಲಿದ್ದ ಬಳಿಕ ವಾಪಸ್ಸು ದೆಹಲಿಗೆ ತೆರಳಿದರು. ಚಂದ್ರಯಾನ-3 ವಿಕ್ರಮ ಲ್ಯಾಂಡರ್ (Chandrayaan-3 Vikram Lander ) ಅನ್ನು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳನ್ನು ಅಭಿನಂದಿಸಲು ಅತ್ಯಂತ ಕಾತುರರಾಗಿದ್ದ ಪ್ರಧಾನ ಮಂತ್ರಿಯವರು ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ (South Africa and Greece) ಪ್ರವಾಸದ ಮೂಲಕ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದರು. ಅವರನ್ನು ಬೆಂಗಳೂರಲ್ಲಿ ಬರಮಾಡಿಕೊಳ್ಳಲು, ಹಲವಾರು ಬಿಜೆಪಿ ನಾಯಕರು ಜೊತೆ ಅಸಂಖ್ಯಾತ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ನೆರೆದಿದ್ದರು. ಅಲ್ಲಿಂದ ಪೀಣ್ಯದ ಇಸ್ರೋ ಐಎಸ್ ಟಿಅರ್ ಎಸಿಗೆ (ISRO Telemetry Tracking and Command Network) ತೆರಳುವ ಮುನ್ನ ಪ್ರಧಾನಿ ಮುಂದೆ ಜನರನ್ನು ಉದ್ದೇಶಿಸಿ ಮಾತಾಡಿದರಲ್ಲದೆ ‘ಜೈ ಜವಾನ್ ಜೈ ಕಿಸಾನ್’ ಘೋಷವಾಕ್ಯದ ಹಾಗೆ ‘ಜೈ ವಿಗ್ಯಾನ್ ಜೈ ಅನುಸಂಧಾನ್’ ಉಕ್ತಿಯನ್ನು ದೇಶಕ್ಕೆ ನೀಡಿದರು. ಪ್ರಧಾನಿ ದೆಹಲಿಗೆ ವಾಪಸ್ಸು ಹೋಗುವಾಗಲೂ ವಿಮಾನ ನಿಲ್ದಾಣದ ಹೊರಗಡೆ ಸಹಸ್ರಾರು ಜನ ಹಾಜರಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ