ಗೆದ್ದುಬಿಟ್ಟರು ಇಸ್ರೋ ವಿಜ್ಞಾನಿಗಳು! ಚಂದ್ರನ ಮೇಲೆ ಸೇಫಾಗಿ ಲ್ಯಾಂಡ್ ಆಯಿತು ಚಂದ್ರಯಾನ-3 ವಿಕ್ರಮ ಲ್ಯಾಂಡರ್!! ಪ್ರಧಾನಿ ಮೋದಿ ಅಭಿನಂದನೆ!!!
ಇದು ಎಲ್ಲ ಭಾರತೀಯರಿಗೆ ಹೆಮ್ಮೆಯ ಕ್ಷಣ, ನೂತನ ಭಾರತದ ಜಯಘೋಷದ ಕ್ಷಣ, ಭಾರತೀಯರೆಲ್ಲರು ಗೆಲುವಿನ ಪಥದಲ್ಲಿ ನಡೆಯುವ ಕ್ಷಣ, 140 ಕೋಟಿ ಭಾರತೀಯರ ಸಾಮರ್ಥ್ಯ ವಿಶ್ವಕ್ಕೆ ಗೊತ್ತಾದ ಕ್ಷಣ, ಭಾರತೀಯರಲ್ಲಿ ಹೊಸ ಹುಮ್ಮಸ್ಸು, ಹೊಸ ಚೇತನ, ಹುರುಪು, ಉತ್ಸಾಹ ಹುಟ್ಟಿಸಿದ ಕ್ಷಣ, ಇದು ಅವಿಸ್ಮರಣೀಯ ಮತ್ತು ಅಭೂತಪೂರ್ವ ಕ್ಷಣ ಎಂದು ಪ್ರಧಾನಿ ಮೋದಿ ಹೇಳಿದರು.
ಬೆಂಗಳೂರು: ಭಾರತದ ಬಾಹ್ಯಾಕಾಶ ವಿಜ್ಞಾನಿಗಳ 4-ವರ್ಷದ ಪರಿಶ್ರಮ ಸಾರ್ಥಕಗೊಂಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ವಿಕ್ರಮ ಲ್ಯಾಂಡರ್ (Chandrayaan-3 Vikram Lander ) 40 ದಿನಗಳ ಯಾನದ ನಂತರ ಇಂದು ಭಾರತೀಯ ಕಾಲಮಾನ 6.04 ಕ್ಕೆ ಚಂದ್ರನ ಮೇಲೆ ಯಶ್ವಸ್ವೀಯಾಗಿ ಲ್ಯಾಂಡ್ (land) ಆಯಿತು. ಇದು ಪ್ರತಿಯೊಬ್ಬ ಭಾರತೀಯನಿಗೆ ಅತ್ಯಂತ ಭಾವುಕ, ರೋಮಾಂಚನ ಮತ್ತು ಆನಂದಾತಿರೇಕ ಹುಟ್ಟಿಸುವ ಸಂದರ್ಭ. ಎಲ್ಲರಲ್ಲಿ ಬಹಳ ಸಮಯದವರೆಗೆ ಘನೀಭವಿಸುವ ರೋಚಕ ಘಟನೆ. ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾ ತೆರಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಇಸ್ರೋ ವಿಜ್ಞಾನಿಗಳನ್ನು ಅವರ ಅಭೂತಪೂರ್ವ ಸಾಧನೆಗಾಗಿ ಅಭಿನಂದಿಸಿ ಕೊಂಡಾಡಿದರು. ಇದು ಎಲ್ಲ ಭಾರತೀಯರಿಗೆ ಹೆಮ್ಮೆಯ ಕ್ಷಣ, ನೂತನ ಭಾರತದ ಜಯಘೋಷದ ಕ್ಷಣ, ಭಾರತೀಯರೆಲ್ಲರು ಗೆಲುವಿನ ಪಥದಲ್ಲಿ ನಡೆಯುವ ಕ್ಷಣ, 140 ಕೋಟಿ ಭಾರತೀಯರ ಸಾಮರ್ಥ್ಯ ವಿಶ್ವಕ್ಕೆ ಗೊತ್ತಾದ ಕ್ಷಣ, ಭಾರತೀಯರಲ್ಲಿ ಹೊಸ ಹುಮ್ಮಸ್ಸು, ಹೊಸ ಚೇತನ, ಹುರುಪು, ಉತ್ಸಾಹ ಹುಟ್ಟಿಸಿದ ಕ್ಷಣ, ಇದು ಅವಿಸ್ಮರಣೀಯ ಮತ್ತು ಅಭೂತಪೂರ್ವ ಕ್ಷಣ ಎಂದು ಪ್ರಧಾನಿ ಮೋದಿ ಹೇಳಿದರು.
ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ