PM Modi in ISRO, Bengaluru: ಪ್ರಧಾನಿ ಮೋದಿ ಭಾರತ್ ಮಾತಾ ಕೀ ಜೈ ಅಂತ ವಂದಿಸಿದಾಗ ವಿಜ್ಞಾನಿಗಳು ದೀರ್ಘ ಕರತಾಡನ ಮೂಲಕ ಸ್ವಾಗತಿಸಿದರು!

PM Modi in ISRO, Bengaluru: ಪ್ರಧಾನಿ ಮೋದಿ ಭಾರತ್ ಮಾತಾ ಕೀ ಜೈ ಅಂತ ವಂದಿಸಿದಾಗ ವಿಜ್ಞಾನಿಗಳು ದೀರ್ಘ ಕರತಾಡನ ಮೂಲಕ ಸ್ವಾಗತಿಸಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on:Aug 26, 2023 | 11:42 AM

ಪ್ರಧಾನಿ ಮೋದಿ ಭಾರತ್ ಮಾತಾ ಕೀ ಅಂದಾಗ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ ಸೇರಿದಂತೆ ವಿಜ್ಞಾನಿಗಳು ಮತ್ತು ಬೇರೆ ಸಿಬ್ಬಂದಿ ವರ್ಗ ಒಕ್ಕೊರಲಿನಿಂದ ಜೈ ಅಂತ ಜೋರಾಗಿ ಕೂಗಿದರು. ಬಳಿಕ ಪ್ರಧಾನಿ ವಿಜ್ಞಾನಿಗಳಿಗೆ ಎರಡೂ ಕೈ ಜೋಡಿಸಿ ತಲೆಬಾಗಿ ವಂದಿಸಿದಾಗ ಎಲ್ಲರೂ ಎದ್ದುನಿಂತು ದೀರ್ಘ ಕರತಾಡನದ ಮೂಲಕ ಅವರಿಗೆ ಪ್ರತಿವಂದಿಸಿದರು.

ಬೆಂಗಳೂರು: ಕನ್ನಡಿಗರರು ಅದರಲ್ಲೂ ವಿಶೇಷವಾಗಿ ಬೆಂಗಳೂರು ನಿವಾಸಿಗಳು ಶನಿವಾರ ಬೆಳಗಿನ ಜಾವದ ಸಿಹಿನಿದ್ರೆಯಲ್ಲಿರುವಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ರಾಜ್ಯದ ರಾಜಧಾನಿಯಲ್ಲಿರುವ ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ (HAL airport) ಲ್ಯಾಂಡ್ ಆಗಿ ಅಲ್ಲಿಂದ ನೇರವಾಗಿ ಪೀಣ್ಯದ ಇಸ್ರೋ ಐಎಸ್​ಟಿಅರ್​ಎಸಿ (ISRO Telemetry Tracking and Command Network) ತಲುಪಿದ್ದರು! ವಿಜ್ಞಾನಿಗಳನ್ನು ಅಭಿನಂದಿಸಿ ಅವರೊಂದಿಗೆ ಮಾತಾಡುವ ಮೊದಲು ಪ್ರಧಾನಿ ಮೋದಿ ಪೋಡಿಯಂ ಬಳಿ ನಿಂತು ಭಾರತ್ ಮಾತಾ ಕೀ ಜೈ ಅಂತ 3-4 ಸಲ ಹೇಳಿದರು. ಅವರು ಭಾರತ್ ಮಾತಾ ಕೀ ಅಂದಾಗ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ ಸೇರಿದಂತೆ ವಿಜ್ಞಾನಿಗಳು ಮತ್ತು ಬೇರೆ ಸಿಬ್ಬಂದಿ ವರ್ಗ ಒಕ್ಕೊರಲಿನಿಂದ ಜೈ ಅಂತ ಜೋರಾಗಿ ಕೂಗಿದರು. ಬಳಿಕ ಪ್ರಧಾನಿ ಮೋದಿ ವಿಜ್ಞಾನಿಗಳಿಗೆ ಎರಡೂ ಕೈ ಜೋಡಿಸಿ ತಲೆಬಾಗಿ ವಂದಿಸಿದಾಗ ಎಲ್ಲರೂ ಎದ್ದುನಿಂತು ದೀರ್ಘ ಕರತಾಡನದ ಮೂಲಕ ಅವರಿಗೆ ಪ್ರತಿವಂದಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 26, 2023 11:28 AM