ಯತ್ನಾಳ್​ರಂತೆ ಮಾತಾಡುವವರನ್ನು ಪಕ್ಷದಿಂದ ಉಚ್ಚಾಟಿಸುತ್ತಿದ್ದೆ ಎಂದಿದ್ದ ಶಿವಕುಮಾರ್ ಯಾಕೆ ಡಿ ಸುಧಾಕರ್ ವಿಷಯದಲ್ಲಿ ತೆಪ್ಪಗಿದ್ದಾರೆ? ಹೆಚ್ ಡಿ ಕುಮಾರಸ್ವಾಮಿ

|

Updated on: Sep 12, 2023 | 6:55 PM

ದಲಿತರ ಉದ್ಧಾರಕರು ಅಂತ ಪೋಸು ಬಿಗಿಯುವ ವರು ಅರವ ಮೇಲೆಯೇ ದೌರ್ಜನ್ಯ ನಡೆಸುತ್ತಾರೆ. ಸುಧಾಕರ್, ಚಾಕು ಚೂರಿ ಮಚ್ಚು ಅಂತೆಲ್ಲ ಮಾತಾಡಿದರೂ ಅವರ ಮೇಲೆ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತಮ್ಮ ಎಂದಿನ ವರಸೆಗೆ ವಾಪಸ್ಸಾಗಿದ್ದಾರೆ. ಜೆಪಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು ಡಿ ಸುಧಾಕರ್ (D Sudhakar) ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ದಲಿತರ ಉದ್ಧಾರಕರು ಅಂತ ಪೋಸು ಬಿಗಿಯುವ ವರು ಅರವ ಮೇಲೆಯೇ ದೌರ್ಜನ್ಯ ನಡೆಸುತ್ತಾರೆ. ಸುಧಾಕರ್, ಚಾಕು ಚೂರಿ ಮಚ್ಚು ಅಂತೆಲ್ಲ ಮಾತಾಡಿದರೂ ಅವರ ಮೇಲೆ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ವಿಧಾನ ಸಭೆ ಆಧಿವೇಶನ ನಡೆಯುತ್ತಿದ್ದಾಗ ಬಸನಗೌಡ ಪಾಟೀಲ್ (Basangouda Patil Yatnal) ಅವರ ಬಗ್ಗೆ ಉಪ ಮುಖ್ಯಮಂತ್ರಿ ಏನೋ ಹೇಳಿದ್ರಲ್ಲ? ಅವರ ಹಾಗೆ ತಮ್ಮ ಪಕ್ಷದ ಸದಸ್ಯನೇನಾದರೂ ಮಾತಾಡಿದ್ದರೆ, ಒಂದು ಕ್ಷಣವೂ ಪಕ್ಷದಲ್ಲಿ ಇರಗೊಡುತ್ತಿರಲಿಲ್ಲ, ಒದ್ದು ಹೊರಹಾಕುತ್ತಿದ್ದೆ ಅಂದಿದ್ದವರು, ಸುಧಾಕರ್ ವಿಷಯದಲ್ಲಿ ಸುಮ್ಮನಿದ್ದಾರಲ್ಲ ಯಾಕೆ? ಅಂತ ಕೇಳಿದ ಕುಮಾರಸ್ವಾಮಿ ಯಾಕೆಂದ್ರೆ, ಇವರೆಲ್ಲ ಅದೇ ಸಂಸ್ಕೃತಿಯಲ್ಲಿ ಬೆಳೆದು ಬಂದವರು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on