ನಿರ್ಮಾಪಕ ರಾಕ್ಲೈನ್ ವೆಂಕಟೇಶ್ಗೆ ಪ್ರೀತಿಯಿಂದ ತಾತ ಎಂದು ಕರೆಯುವ ದರ್ಶನ್
ರಾಕ್ಲೈನ್ ವೆಂಕಟೇಶ್ ಮತ್ತು ದರ್ಶನ್ ನಡುವೆ ಉತ್ತಮವಾದ ಒಡನಾಟ ಇದೆ. ‘ಕಾಟೇರ’ ಸಿನಿಮಾದಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ರಾಕ್ಲೈನ್ ವೆಂಕಟೇಶ್ ಮಾತನಾಡಿದ್ದಾರೆ. ‘ದರ್ಶನ್ ಅವರು ನನ್ನನ್ನು ತಾತ ಅಂತ ಕರೆಯುತ್ತಾರೆ. ನಾನು ಅವರನ್ನು ಮೊಮ್ಮಗನೇ ಎಂದು ಕರೆಯುತ್ತೇನೆ’ ಎಂದು ವೆಂಕಟೇಶ್ ಹೇಳಿದ್ದಾರೆ.
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ‘ಕಾಟೇರ’ (Kaatera) ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾದಲ್ಲಿ ದರ್ಶನ್ ಮತ್ತು ಆರಾಧನಾ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ನೂರನೇ ದಿನದ ಚಿತ್ರೀಕರಣದ ವೇಳೆ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಕೆಲವು ಇಂಟರೆಸ್ಟಿಂಗ್ ವಿಚಾರಗಳ ಬಗ್ಗೆ ರಾಕ್ಲೈನ್ ವೆಂಕಟೇಶ್ ಮಾತನಾಡಿದರು. ಅಚ್ಚರಿ ಏನೆಂದರೆ, ರಾಕ್ಲೈನ್ ವೆಂಕಟೇಶ್ ಅವರನ್ನು ದರ್ಶನ್ (Darshan) ಅವರು ತಾತಾ ಎಂದು ಕರೆಯುತ್ತಾರೆ. ಇಬ್ಬರ ನಡುವೆ ಅಷ್ಟು ಆತ್ಮೀಯತೆ ಇದೆ. ‘ದರ್ಶನ್ ಅವರು ನನ್ನನ್ನು ತಾತ ಅಂತ ಕರೆಯುತ್ತಾರೆ. ನಾನು ಅವರನ್ನು ಮೊಮ್ಮಗನೇ ಎಂದು ಕರೆಯುತ್ತೇನೆ. ಅವರೇ ಈ ಕಥೆಯನ್ನು ಕೇಳುವಂತೆ ನನಗೆ ಹೇಳಿದರು. ಆಗ ತರುಣ್ ಸುಧೀರ್ ಬಂದು ಕಥೆ ಹೇಳಿದರು. ಅದು ನನಗೆ ಬಹಳ ಇಷ್ಟ ಆಯ್ತು’ ಎಂದು ರಾಕ್ಲೈನ್ ವೆಂಕಟೇಶ್ (Rockline Venkatesh) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

