ಪೋಷಕರ ಒತ್ತಡದಿಂದ ಓದು ಬಿಟ್ಟು ಕುರಿಗಾಹಿಯಾಗಿದ್ದ 11ರ ಪೋರ ಮತ್ತೇ ಶಾಲೆ ಸೇರುವಂತೆ ಮಾಡಿದ ಸಿಎಂ ಸಿದ್ದರಾಮಯ್ಯ!

ಪೋಷಕರ ಒತ್ತಡದಿಂದ ಓದು ಬಿಟ್ಟು ಕುರಿಗಾಹಿಯಾಗಿದ್ದ 11ರ ಪೋರ ಮತ್ತೇ ಶಾಲೆ ಸೇರುವಂತೆ ಮಾಡಿದ ಸಿಎಂ ಸಿದ್ದರಾಮಯ್ಯ!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 12, 2023 | 7:32 PM

ಇದನ್ನು ಗಮನಿಸಿದ ಸಿದ್ದರಾಮಯ್ಯ ಕೂಡಲೇ ಕಾರ್ಯೋನ್ಮುಖರಾಗಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತಾಡಿ ಮರುದಿನದಿಂದಲೇ ಯೋಗೇಶ್ ಶಾಲೆಗೆ ಹಾಜರಾಗುವಂತೆ ಮಾಡಿದ್ದಾರೆ. ಮುಖ್ಯಮಂತ್ರಿಗೆ ಟ್ವೀಟ್ ಮಾಡಿದ ಯುವಕ ವಿಡಿಯೋದಲ್ಲಿ ಮಾತಾಡುತ್ತಿರುವುದನ್ನು ನೋಡಬಹುದು. ತಮ್ಮ ಟ್ವೀಟ್ ಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳ ಕಚೇರಿಯ ಆಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ಈ ಕಾರ್ಯವನ್ನು ವಿರೋದ ಪಕ್ಷಗಳ ಮೆಚ್ಚಬಹುದು. ವಿಷಯವೇನೆಂದರೆ, ಜಿಲ್ಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಬಸಾಪುರ ಹೆಸರಿನ ಗ್ರಾಮದಲ್ಲಿ 11-ವರ್ಷ ವಯಸ್ಸಿನ ಯೋಗೇಶ್ ಎಂಬ ಬಾಲಕನನ್ನು ಅವನ ಪೋಷಕರು (parents) ಶಾಲೆ ಬಿಡಿಸಿ ಕುರಿ ಕಾಯಲು ಕಳಿಸಿದ್ದಾರೆ ಹುಡುಗನಿಗೆ ಓದಿನಲ್ಲಿ ಬಹಳ ಆಸಕ್ತಿ ಇತ್ತಂತೆ. ಅವನ ಅವಸ್ಥೆಯನ್ನು ನೋಡಿದ ಸ್ಥಳೀಯರೊಬ್ಬರು ಬಾಲಕನ ಫೋಟೊ ತೆಗೆದು ಒಂದು ಸಂದೇಶವನ್ನು ಬರೆದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎಕ್ಸ್ ಹ್ಯಾಂಡಲ್ ಗೆ (X handle, twitter) ಪೋಸ್ಟ್ ಮಾಡಿದ್ದಾರೆ. ಇದನ್ನು ಗಮನಿಸಿದ ಸಿದ್ದರಾಮಯ್ಯ ಕೂಡಲೇ ಕಾರ್ಯೋನ್ಮುಖರಾಗಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತಾಡಿ ಮರುದಿನದಿಂದಲೇ ಯೋಗೇಶ್ ಶಾಲೆಗೆ ಹಾಜರಾಗುವಂತೆ ಮಾಡಿದ್ದಾರೆ. ಮುಖ್ಯಮಂತ್ರಿಗೆ ಟ್ವೀಟ್ ಮಾಡಿದ ಯುವಕ ವಿಡಿಯೋದಲ್ಲಿ ಮಾತಾಡುತ್ತಿರುವುದನ್ನು ನೋಡಬಹುದು. ತಮ್ಮ ಟ್ವೀಟ್ ಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳ ಕಚೇರಿಯ ಆಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ