ಶವಸಂಸ್ಕಾರದಲ್ಲಿ ಭಾಗಿಯಾಗಿದ್ದ ಜನರ ಮೇಲೆ ಹೆಜ್ಜೇನು ದಾಳಿ, ಒಬ್ಬನ ಸಾವು, ಆರು ಜನರ ಸ್ಥಿತಿ ಗಂಭೀರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 28, 2022 | 9:22 PM

ಆರು ಜನ ಪಡಬಾರದ ಕಟ್ಟಪಟ್ಟು ಅಲ್ಲಿಂದ ದೂರ ಓಡುವಲ್ಲಿ ಯಶ ಕಂಡಿದ್ದಾರೆ. ಅದರೆ ಗೋವಿಂದರನ್ನು ನೊಣಗಳು ಯಾವಮಟ್ಟಿಗೆ ಕಚ್ಚಿವೆಯೆಂದರೆ ಅವರು ಅದೇ ಸ್ಥಳದಲ್ಲಿ ಮರಣವನ್ನಿಪ್ಪಿದ್ದಾರೆ.

ಕುಶಾಲನಗರದ ಸಮುದಾಯ ಅರೋಗ್ಯ ಕೇಂದ್ರದಲ್ಲಿ (Community Health Centre) ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಮಹಿಳೆಯರು ಮತ್ತು ನಾಲ್ವರು ಪುರುಷರನ್ನು ನೋಡಿ ಮಾರಾಯ್ರೇ. ಇವರು ತಾಲ್ಲೂಕಿನ ಕಾಟಿಕೊಪ್ಪಲು ಗ್ರಾಮದವರು. ಹಾಗೆ ನೋಡಿದರೆ ಈ ಆರು ಜನ ಅದೃಷ್ಟವಂತರೇ. ಅಸಲಿಗೆ ವಿಷಯವೇನೆಂದರೆ ಸದರಿ ಗ್ರಾಮದಲ್ಲಿ ಒಬ್ಬ ವ್ಯಕ್ತಿಯ ಶವಸಂಸ್ಕಾರದಲ್ಲಿ (funeral) ಭಾಗಿಯಾಗಿದ್ದಾರೆ. ಅಂತ್ಯಕ್ರಿಯೆ ನಡೆಯಬೇಕಿದ್ದ ಸ್ಥಳದಲ್ಲಿದ್ದ ಒಂದು ಮರದಲ್ಲಿ ಹೆಜ್ಜೇನು ಗೂಡುಕಟ್ಟಿವೆ. ವಿಧಿವಿಧಾನಗಳ ಭಾಗವಾಗಿ ಶವದ ಮುಂದೆ ಗಂಧದಕಡ್ಡಿ ಹೊತ್ತಿಸಿದಾಗ ಜೇನುನೊಣಗಳು (bees) ವಿಚಲಿತಗೊಂಡು ಅಲ್ಲಿ ನೆರೆದವರವ ಮೇಲೆ ದಾಳಿ ಮಾಡಿವೆ. ಶವಸಂಸ್ಕಾರಕ್ಕೆಂದು ಬಂದಿದ್ದ ತಮ್ಮ ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿದ್ದಾರೆ. ಆದರೂ ಈ ಆರು ಜನ ಮತ್ತು ಗೋವಿಂದ ಹೆಸರಿನ ವ್ಯಕ್ತಿಯನ್ನು ಜೇನುನೊಣಗಳು ಮನಬಂದಂತೆ ಕಚ್ಚಿವೆ.

ಆರು ಜನ ಪಡಬಾರದ ಕಟ್ಟಪಟ್ಟು ಅಲ್ಲಿಂದ ದೂರ ಓಡುವಲ್ಲಿ ಯಶ ಕಂಡಿದ್ದಾರೆ. ಅದರೆ ಗೋವಿಂದರನ್ನು ನೊಣಗಳು ಯಾವಮಟ್ಟಿಗೆ ಕಚ್ಚಿವೆಯೆಂದರೆ ಅವರು ಅದೇ ಸ್ಥಳದಲ್ಲಿ ಮರಣವನ್ನಿಪ್ಪಿದ್ದಾರೆ. ಅದಕ್ಕೆಂದೇ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರು ಜನ ಅದೃಷ್ಟವಂತರೆಂದು ನಾವು ಹೇಳಿದ್ದು.

ಶವಸಂಸ್ಕಾರವೂ ಪೂರ್ತಿಗೊಂಡಿಲ್ಲ ಮಾರಾಯ್ರೇ. ಆಸ್ಪತ್ರೆಯ ಬಳಿಯಿದ್ದ ಮೂರು ಜನ ವಾಪಸ್ಸು ಹೋಗಿ ಇಬ್ಬರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಬೇಕಿದೆಯೆಂದು ಹೇಳುತ್ತಿದ್ದಾರೆ. ಎರಡನೇ ವ್ಯಕ್ತಿ ಅಂದರೆ ಹೆಜ್ಜೇನು ದಾಳಿಗೊಳಗಾದ ವ್ಯಕ್ತಿಯದು ನಿಜಕ್ಕೂ ದಾರುಣ ಸಾವು.

ಇದನ್ನೂ ಓದಿ:  Shocking Video: ನಡುರಸ್ತೆಯಲ್ಲೇ ಹೆಂಡತಿ, ಮಗಳನ್ನು ಕೊಂದು, ತಾನೂ ಶೂಟ್ ಮಾಡಿಕೊಂಡ ವ್ಯಕ್ತಿ; ಶಾಕಿಂಗ್ ವಿಡಿಯೋ ವೈರಲ್