ಪಿ ಎಸ್ ಐ ನೇಮಕಾತಿ ಹಗರಣ: ಸಿಐಡಿ ಅಧಿಕಾರಿಗಳಿಂದ ಬಂಧಿತ ಅರೋಪಿಗಳ ವಿಚಾರಣೆ, ದಿವ್ಯಾ ಇನ್ನೂ ನಾಪತ್ತೆ

ಪಿ ಎಸ್ ಐ ನೇಮಕಾತಿ ಹಗರಣ: ಸಿಐಡಿ ಅಧಿಕಾರಿಗಳಿಂದ ಬಂಧಿತ ಅರೋಪಿಗಳ ವಿಚಾರಣೆ, ದಿವ್ಯಾ ಇನ್ನೂ ನಾಪತ್ತೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 28, 2022 | 6:54 PM

ಅಂದಹಾಗೆ, ಪಿಎಸ್ ಐ ನೇಮಕಾತಿ ಹಗರದಲ್ಲಿ ತಲೆಮರೆಸಿಕೊಂಡಿರುವ ಖಾಸಗಿ ಶಾಲೆಯೊಂದರ ಮುಖ್ಯಸ್ಥೆ ದಿವ್ಯಾ ಹಾಗರಗಿ ಅವರಿಗೆ ಮರ್ಯಾದೆಯಿಂದ ಸಿಐಡಿ ಅಧಿಕಾರಿಗಳ ಮುಂದೆ ಶರಣಾಗುವಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಎಚ್ಚರಿಕೆ ನೀಡಿದ್ದಾರೆ.

Kalaburgi: ಪಿ ಎಸ್ ಐ ನೇಮಕಾತಿ ಹಗರಣದ (PSI Recruitment Scam) ತನಿಖೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ ಆದರೆ ತಲೆಮರೆಸಿಕೊಂಡವರು ಮಾತ್ರ ಇನ್ನೂ ಪತ್ತೆಯಾಗಿಲ್ಲ. ನಿಮಗೆ ಗೊತ್ತಿರುವ ಹಾಗೆ ತನಿಖೆ ನಡೆಸುತ್ತಿರು ಸಿ ಐ ಡಿ (CID) ಈಗಾಗಲೇ ಒಂದಷ್ಟು ಆರೋಪಿಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ. ಬಂಧಿತ ರುದ್ರಗೌಡ ಪಾಟೀಲ, ಮಹಾಂತೇಶ್ ಪಾಟೀಲ ಸೇರಿದಂತೆ ಉಳಿದವರ ವಿಚಾರಣೆಯನ್ನು ಸಿಐಡಿ ಅಧಿಕಾರಿಗಳು ಕಲಬುರಗಿಯಲ್ಲಿ ಗುರುವಾರ ನಡೆಸಿದರು. ಅಕ್ರಮದ ಬಗ್ಗೆ, ಆರೋಪಿಗಳ ಮೊಡಸ್ ಆಪರಂಡೈ (modus operandi), ಇನ್ನೂ ಎಷ್ಟು ಜನ ಭಾಗಿಯಾಗಿದ್ದಾರೆ, ತಲೆಮರೆಸಿಕೊಂಡವರು ಎಲ್ಲಿ ಅಡಗಿರಬಹುದು ಮೊದಲಾದ ವಿವರಗಳನ್ನು ಅಧಿಕಾರಿಗಳು ಸಂಗ್ರಹಿಸಿದರು ಎನ್ನಲಾಗಿದೆ. ವಿಡಿಯೋನಲ್ಲಿ 7 ಬಂಧಿತರು ಕಾಣುತ್ತಿದ್ದಾರೆ.

ಅವರಲ್ಲಿ ಮೊದಲ ಮೂವರು ಬಿಂದಾಸ್ ಆಗಿ ಪೊಲೀಸ್ ವ್ಯಾನತ್ತ ನಡೆದು ಬರುತ್ತಿದ್ದಾರೆ. ಉಳಿದವರು ಮುಖ ಮುಚ್ಚಿಕೊಂಡಿದ್ದಾರೆ. ಒಬ್ಬ ಮುಖ ತುರಸಿಕೊಳ್ಳುವ ನೆಪದಲ್ಲಿ ಮುಖದ ಒಂದಷ್ಟು ಭಾಗ ಮರೆಮಾಡುತ್ತಾನೆ. ಇನ್ನಿಬ್ಬರು ಕಣ್ಣಿಗೂ ಮಾಸ್ಕ್ ಧರಿಸಿರುವ ಹಾಗೆ ಮುಖದ ತುಂಬ ಅಂದರೆ ಮುಖವೇ ಕಾಣದ ಹಾಗೆ ಬಟ್ಟೆ ಸುತ್ತಿಕೊಂಡಿದ್ದಾರೆ.

ಮತ್ತೊಬ್ಬ ಕರ್ಚೀಫ್ ಮುಖದ ಬಲಭಾಗದ ಮೇಲೆ ಹಾಕಿಕೊಂಡಿದ್ದಾನೆ. ವಿಚಾರಣೆಯ ಬಳಿಕ ಅವರನ್ನು ಪುನಃ ಸೆರೆಮನೆಗೆ ಕರೆದೊಯ್ಯಲಾಗಿದೆ.

ಅಂದಹಾಗೆ, ಪಿಎಸ್ ಐ ನೇಮಕಾತಿ ಹಗರದಲ್ಲಿ ತಲೆಮರೆಸಿಕೊಂಡಿರುವ ಖಾಸಗಿ ಶಾಲೆಯೊಂದರ ಮುಖ್ಯಸ್ಥೆ ದಿವ್ಯಾ ಹಾಗರಗಿ ಅವರಿಗೆ ಮರ್ಯಾದೆಯಿಂದ ಸಿಐಡಿ ಅಧಿಕಾರಿಗಳ ಮುಂದೆ ಶರಣಾಗುವಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಎಚ್ಚರಿಕೆ ನೀಡಿದ್ದಾರೆ.

ಅವರು ಎಲ್ಲೇ ಅಡಗಿದ್ದರೂ ಹೆಕ್ಕಿ ಬಂಧಿಸಲಾಗುವುದು, ತನಿಖಾಧಿಕಾರಿಗಳ ಜೊತೆ ಕಣ್ಣಾಮುಚ್ಚಾಲೆ ಆಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ:   PSI Recruitment Scam: ದೇಶದ್ರೋಹಿ ದಾವೂದ್ ಇಬ್ರಾಹಿಂಗೆ ಜಾರಿ ಮಾಡಿದಂತೆ ದಿವ್ಯಾ ಹಾಗರಗಿಗೂ ಅರೆಸ್ಟ್​ ವಾರಂಟ್ ಜಾರಿ!