ಮುಂದಿನ ಜನ್ಮಕ್ಕೂ ಚಿನ್ನಯ್ಯನೇ ತನಗೆ ಗಂಡನಾಗಿ ಸಿಗಲಿ ಎನ್ನುತ್ತಿರುವ ಮಾಸ್ಕ್ಮ್ಯಾನ್ನ ಒಬ್ಬ ಹೆಂಡತಿ
ಚಿನ್ನಯ್ಯನ ಜೊತೆ 17-ವರ್ಷ ಸಂಸಾರ ನಡೆಸಿರುವ ಚಾಮರಾಜನಗರದ ಮಹಿಳೆಗೆ ಎರಡು ಮಕ್ಕಳಿದ್ದಾರೆ. ಹಣದ ಆಮಿಶವೊಡ್ಡಿ ಯಾರಾದರೂ ಚಿನ್ನಯ್ಯನನ್ನು ಬಲೆಗೆ ಕೆಡವಿದರಾ ಎಂದು ನಮ್ಮ ವರದಿಗಾರ ಕೇಳುವ ಪ್ರಶ್ನೆಗೆ ಅವರು, ನಂಗೇನೂ ಗೊತ್ತಿಲ್ಲ, ಕೆಲಸಕ್ಕೆ ಅಂತ ಆಚೆ ಹೋಗಿದ್ದರು, ಮಿಕ್ಕಿದ ಎಲ್ಲ ವಿದ್ಯಮಾನಗಳನ್ನು ಎಲ್ಲರಂತೆ ತಾನೂ ಟಿವಿಯಲ್ಲಿ ವೀಕ್ಷಿಸುತ್ತಿದ್ದೇನೆ ಎಂದು ಹೇಳುತ್ತಾರೆ.
ಚಾಮರಾಜನಗರ, ಆಗಸ್ಟ್ 26: ಎಸ್ಐಟಿ ಬಂಧನದಲ್ಲಿರುವ ಸಿಎನ್ ಚಿನ್ನಯ್ಯನ ಪೂರ್ವಾಪರಗಳನ್ನು ಹೆಕ್ಕುವುದು ನಿಸ್ಸಂದೇಹವಾಗಿ ಜಟಿಲದ ಕೆಲಸ. ಅವನು ತಮಿಳುನಾಡು ಮೂಲದವನು, ಬೆಳೆದಿದ್ದು ಮಂಡ್ಯದ ಚಿಕ್ಕಬಳ್ಳಿಯಲ್ಲಿ ಅಂತ ಹೇಳಲಾಗುತ್ತಿದೆ. ಅವನಿಗೆ ಮೂರು ಹೆಂಡತಿಯರು ಎಂಬ ಸುದ್ದಿಯೂ ಇದೆ. ಒಂದು ಹೆಂಡತಿ ಚಿನ್ನಯ್ಯ ಕೆಟ್ಟವನು ಎಂಬ ಚಿತ್ರಣ ನೀಡುತ್ತಾರೆ. ಆದರೆ ಚಾಮರಾಜನಗರ ಜಿಲ್ಲೆಯಲ್ಲಿರುವ ಮತ್ತೊಬ್ಬ ಹೆಂಡತಿ (another wife) ಅದಕ್ಕೆ ತದ್ವಿರುದ್ಧವಾದ ಚಿತ್ರಣ ನೀಡುತ್ತಾರೆ. ಚಿನ್ನಯ್ಯ ತುಂಬಾ ಒಳ್ಳೆಯವನು, ಕುಡಿತದ ಚಟ ಹಾಗಿರಲಿ, ಕುಡುಕರನ್ನು ಮತ್ತು ಬೀಡಿ-ಸಿಗರೇಟು ಸೇದುವವರನ್ನು ಅವನು ಮನೆಗೂ ಸೇರಿಸುತ್ತಿರಲಿಲ್ಲವಂತೆ! ಈ ಜನ್ಮ ಮಾತ್ರವಲ್ಲ ಮುಂದಿನ ಜನ್ಮಕ್ಕೂ ಚಿನ್ನಯ್ಯನೇ ತನಗೆ ಗಂಡನಾಗಿ ಸಿಗಲಿ ಎಂದು ಮಹಿಳೆ ಹೇಳುತ್ತಾರೆ.
ಇದನ್ನೂ ಓದಿ: ಧರ್ಮಸ್ಥಳ ಕೇಸ್: ಆರೋಪಿ ಚಿನ್ನಯ್ಯನ ಜೊತೆ ಫೋನ್ ಸಂಪರ್ಕದಲ್ಲಿದ್ದವರಿಗೆ ಶಾಕ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Aug 26, 2025 10:47 AM