ಪುನೀತ್ ರಾಜ್ಕುಮಾರ್ ಪೋಟೋಗೆ ಮುತ್ತಿಟ್ಟ ಒಂದು ವರ್ಷದ ಮಗು; ವಿಡಿಯೋ ವೈರಲ್
ಅಪ್ಪು ಮೇಲಿನ ಪ್ರೀತಿ, ಅಭಿಮಾನ ದಿನದಿಂದ ಬೆಳೆಯುತ್ತಲೇ ಇದೆ. ಒಂದು ವರ್ಷದ ಮಗು ಅಪ್ಪು ಫೋಟೋ ನೋಡಿ ಮುತ್ತಿಟ್ಟಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆ ನೋವು ಕಡಿಮೆಯಾಗುತ್ತಿಲ್ಲ. ಚಿತ್ರರಂಗ ಮಾತ್ರವಲ್ಲ ಇಡೀ ರಾಜ್ಯಕ್ಕೆ ನಷ್ಟವಾಗಿದೆ. ಅಪ್ಪನಿಗೆ ತಕ್ಕ ಮಗನಾಗಿದ್ದ ಅಪ್ಪು ಕರುನಾಡಿನ ಪವರ್ ಆಗಿದ್ದರು. ಅದೆಷ್ಟೋ ಮಕ್ಕಳ ಬಾಳಿಗೆ ಬೆಳಕಾಗಿದ್ದರು. ಕಟ್ಟುಮಸ್ತಾಗಿದ್ದ ಪುನೀತ್ ದಿಢೀರ್ ಸಾವಿನಿಂದ ತುಂಬಾಲಾರದ ನಷ್ಟ ಉಂಟಾಗಿದೆ. ಇನ್ನು ಪುನೀತ್ ಇಹಲೋಕ ತ್ಯಜಿಸಿ 15 ದಿನಗಳು ಕಳೆದಿವೆ. ಆದರೆ ಪುನೀತ್ ನಿಧನದ ನೋವು ಶಮನವಾಗುತ್ತಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರ ವರೆಗೆ ಕಣ್ಣೀರು ಹಾಕುತ್ತಿದ್ದಾರೆ. ಅಪ್ಪು ಮೇಲಿನ ಪ್ರೀತಿ, ಅಭಿಮಾನ ದಿನದಿಂದ ಬೆಳೆಯುತ್ತಲೇ ಇದೆ. ಒಂದು ವರ್ಷದ ಮಗು ಅಪ್ಪು ಫೋಟೋ ನೋಡಿ ಮುತ್ತಿಟ್ಟಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುಮಕೂರಿನ ಶಾಂತಿನಗರದ ನಿವಾಸಿ ನವೀನ್ ಎಂಬುವವರ ಮಗು ಭುವನರಾಜ್ ಪುನೀತ್ ಫೋಟೋವನ್ನು ಕೈಯಲ್ಲಿ ಹಿಡಿದು ಮುತ್ತಿಟ್ಟಿದೆ.
Latest Videos