ದನ, ಕರುಗಳ ಜೊತೆ ಕಾಡಾನೆ ಪರೇಡ್; ಅಪರೂಪದ ವಿಡಿಯೋ ನೋಡಿ

ಆಲೂರು ಸಕಲೇಶಪುರ ಭಾಗದಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ಮಿತಿ ಮೀರಿದೆ. ಕಾಡಾನೆ ಕಂಡು ಜನರು ಭಯಭೀತರಾಗುತ್ತಿದ್ದಾರೆ. ಜತೆಗೆ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಾಸನ: ದನ, ಕರುಗಳ ಜೊತೆ ಕಾಡಾನೆ ಪ್ರತ್ಯಕ್ಷವಾದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬನವಾಸೆ ಗ್ರಾಮದ‌ ಬಳಿ ನಡೆದಿದೆ. ಒಂಟಿ ಕಾಡಾನೆ ಬಯಲಿನಲ್ಲಿ ಜಾನುವಾರುಗಳ ನಡುವೆ ಪ್ರತ್ಯಕ್ಷವಾಗಿದೆ. ಕಳೆದ ಒಂದು ವರ್ಷದಿಂದ ಈ ಭಾಗದಲ್ಲಿ ಸಲಗ ಓಡಾಡುತ್ತಿದೆ. ಆಹಾರ ಅರಸಿ ಅಲೆದಾಡುವ ವೇಳೆ ನಡುವೆ ಸಿಕ್ಕಿದ ಜಾನುವಾರುಗಳ ಜೊತೆಗೆ ಕಾಡಾನೆ ಓಡಾಟ ನಡೆಸಿದೆ. ಆಲೂರು ಸಕಲೇಶಪುರ ಭಾಗದಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ಮಿತಿ ಮೀರಿದೆ. ಕಾಡಾನೆ ಕಂಡು ಜನರು ಭಯಭೀತರಾಗುತ್ತಿದ್ದಾರೆ. ಜತೆಗೆ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:
ಸಕ್ರೆಬೈಲು ಆನೆ ಮರಿಗೆ ಪುನೀತ್​ ಹೆಸರು; ವನ್ಯಜೀವಿಗಳ ಬಗ್ಗೆ ಅಪ್ಪುಗೆ ಇತ್ತು ವಿಶೇಷ ಕಾಳಜಿ

ರಾಮನಗರ ಬಿಡದಿ ಬಳಿ 2 ಕಾಡಾನೆಗಳು ಪ್ರತ್ಯಕ್ಷ; ಒಂದು ಆನೆಗೆ ರೈಲು ಗುದ್ದಿರುವ ಅನುಮಾನ

Click on your DTH Provider to Add TV9 Kannada