ರಾಮನಗರ ಬಿಡದಿ ಬಳಿ 2 ಕಾಡಾನೆಗಳು ಪ್ರತ್ಯಕ್ಷ; ಒಂದು ಆನೆಗೆ ರೈಲು ಗುದ್ದಿರುವ ಅನುಮಾನ

ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಬಿಡದಿಗೆ ಬಂದಿದ್ದ ಕಾಡಾನೆಗಳು ರೈಲ್ವೆ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಎರಡು ಆನೆಗಳಲ್ಲಿ ಒಂದು ಕಾಡಾನೆಗಳಿಗೆ ಸ್ವಲ್ಪ ಮಟ್ಟಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

ರಾಮನಗರ ಬಿಡದಿ ಬಳಿ 2 ಕಾಡಾನೆಗಳು ಪ್ರತ್ಯಕ್ಷ; ಒಂದು ಆನೆಗೆ ರೈಲು ಗುದ್ದಿರುವ ಅನುಮಾನ
ಬಿಡದಿ ಬಳಿ ಆನೆಗಳು

ರಾಮನಗರ: ಜಿಲ್ಲೆಗೆ ಪದೇ ಪದೇ ಕಾಡಾನೆಗಳ ಹಿಂಡು ದಾಳಿ ಇಟ್ಟು ರೈತರು ಬೆಳೆದ ಬೆಳೆಗಳನ್ನ ನಾಶಪಡಿಸುತ್ತಿವೆ. ಇದರಿಂದ ರೈತರು ಕಂಗಾಲಾಗುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಕಾಡಾನೆಗಳು ಕಾಣಿಸಿಕೊಂಡು ಸಾರ್ವಜನಿಕರು ಕೂಡ ಆತಂಕಗೊಳ್ಳುವಂತೆ ಮಾಡುತ್ತಿವೆ. ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ರಾಮನಗರ ತಾಲೂಕಿನ ಬಿಡದಿ ಪಟ್ಟಣದಲ್ಲಿ ಇಂದು (ಜುಲೈ 18) ಬೆಳ್ಳಂಬೆಳಗ್ಗೆ ಎರಡು ಕಾಡಾನೆಗಳು ಕಾಣಿಸಿಕೊಂಡು ಕೆಲಕಾಲ ಸಾರ್ವಜನಿಕರು ಆತಂಕಗೊಳ್ಳುವಂತೆ ಮಾಡಿವೆ.

ಬಿಡದಿ ಪಟ್ಟಣದ ಬಾಲಾಜಿ ಲೇಔಟ್​ ಬಳಿ ಎರಡು ಕಾಡಾನೆಗಳು ಪ್ರತ್ಯೇಕ್ಷಗೊಂಡಿವೆ. ಹೀಗಾಗಿ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಬಂದಿರುವ ಕಾಡಾನೆಗಳನ್ನ ವಾಪಾಸ್ ಅರಣ್ಯಕ್ಕೆ ಹಿಮ್ಮೆಟ್ಟಿಸಲು ಹರಸಾಹಸ ಪಟ್ಟರು. ಆದರೆ ಸಮೀಪದ ನೀಲಗಿರಿ ತೋಪಿನಲ್ಲಿ ಸದ್ಯ ಕಾಡಾನೆಗಳು ಬೀಡುಬಿಟ್ಟಿವೆ.

ಕಾಡಾನೆಗಳಿಗೆ ರೈಲು ಡಿಕ್ಕಿ ಶಂಕೆ
ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಬಿಡದಿಗೆ ಬಂದಿದ್ದ ಕಾಡಾನೆಗಳು ರೈಲ್ವೆ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಎರಡು ಆನೆಗಳಲ್ಲಿ ಒಂದು ಕಾಡಾನೆಗಳಿಗೆ ಸ್ವಲ್ಪ ಮಟ್ಟಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಬಂದಿರುವ ಕಾಡಾನೆಗಳು ಬಿಡದಿ ಬಾಲಾಜಿ ಲೇಔಟ್​ನಲ್ಲಿ ಕಾಣಿಸಿಕೊಂಡಿವೆ. ಸದ್ಯ ನೀಲಗಿರಿ ತೋಪಿನಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಸಂಜೆ ನಂತರ ಅರಣ್ಯಕ್ಕೆ ಹಿಮ್ಮೆಟ್ಟಿಸಲಾಗುತ್ತದೆ. ರೈಲು ಡಿಕ್ಕಿ ಹೊಡೆದಿರುವ ಬಗ್ಗೆ ರೈಲ್ವೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಬಿಡದಿ ಬಳಿ ಸಿಗ್ನಲ್ ಇರುವುದರಿಂದ ರೈಲು ನಿಧಾನವಾಗಿ ಬಂದಿದೆ. ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಸದ್ಯ ಕಾಡಾನೆಗಳು ಸುರಕ್ಷಿತವಾಗಿವೆ ಎಂದು ರಾಮನಗರದ ಆರ್​​ಎಫ್​ಒ ಕಿರಣ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ

Viral Video: ವಿದೇಶಿ ಮಗುವಿನ ಬಾಯಲ್ಲಿ ನಮಸ್ತೇ ಇಂಡಿಯಾ! ವಿಡಿಯೋ ನೋಡಿ ದೃಷ್ಟಿ ತೆಗೆದ ಭಾರತೀಯರು

Viral Video: ಹಾವು- ಮುಂಗುಸಿ ನಡುವೆ ಜಟಾಪಟಿ; ಗೆದ್ದವರಾರು? ಸೋತವರಾರು?

(two Elephants found in Ramanagar bidadi and An elephant is suspected of being hit by a train)