‘ಅವಾ ಯಾವನೊ ಡಿಕೆ ಪಾಕೆ ಅಂತೆಲ್ಲ ಹೇಳ್ತಾನೆ, ನನ್ ಹಾಳ್ ಮಾಡೋಕೆ ಈ ಕೆಲಸ ಮಾಡ್ತಿದ್ದೀರಾ’: ಅಭಿಮಾನಿಗಳ ವಿರುದ್ಧ ಡಿ.ಕೆ.ಶಿವಕುಮಾರ್ ಗರಂ

ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಕ್ರಾಸ್ ಬಳಿ ಡಿ.ಕೆ.ಶಿವಕುಮಾರ್​ಗೆ ಅಭಿಮಾನಿಗಳು ಸೇಬಿನ ಹಾರ ಹಾಕಿ ಭರ್ಜರಿ ಸ್ವಾಗತ ಮಾಡಿದ್ದಾರೆ. ಕ್ರೇನ್ ಮೂಲಕ ಸುಮಾರು ಒಂದು ಕ್ವಿಂಟಾಲ್ ಸೇಬಿನ ಹಣ್ಣಿನ ಹಾರ ಹಾಕಿ, ಹೂಮಳೆ ಸುರಿಸಿ ಅವರ ಬೆಂಬಲಿಗರು ಸ್ವಾಗತಿಸಿದ್ದಾರೆ.

‘ಅವಾ ಯಾವನೊ ಡಿಕೆ ಪಾಕೆ ಅಂತೆಲ್ಲ ಹೇಳ್ತಾನೆ, ನನ್ ಹಾಳ್ ಮಾಡೋಕೆ ಈ ಕೆಲಸ ಮಾಡ್ತಿದ್ದೀರಾ’: ಅಭಿಮಾನಿಗಳ ವಿರುದ್ಧ ಡಿ.ಕೆ.ಶಿವಕುಮಾರ್ ಗರಂ
ಸೇಬಿನ ಹಾರ ಹಾಕಿದ ಡಿ.ಕೆ.ಶಿವಕುಮಾರ್ ಅಭಿಮಾನಿಗಳು


ಬಾಗಲಕೋಟೆ: ಡಿಕೆ.. ಡಿಕೆ.. ಅಂತ ಕೂಗಿದ ಅಭಿಮಾನಿಗಳ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗರಂ ಆಗಿದ್ದಾರೆ. ಅವಾ ಯಾವನೊ ಡಿಕೆ ಪಾಕೆ ಅಂತೆಲ್ಲ ಹೇಳ್ತಾನೆ ಅದೆಲ್ಲ ಬಿಡು. ನನ್ ಹಾಳ್ ಮಾಡೋಕೆ ಈ ಕೆಲಸ ಮಾಡ್ತಿದ್ದೀರಾ ನೀವು ಎಂದು ಡಿ.ಕೆ.ಶಿವಕುಮಾರ್ ಅಭಿಮಾನಿಗಳಿಗೆ ಗದರಿದರು. ನಿಮಗೆ ಅಭಿಮಾನ ಇದ್ರೆ ಮುಂದೆ ತೋರಿಸಿ. ಈಗ ಯಾವುದೇ ಜಯಕಾರ, ಹಾರ ತುರಾಯಿ ಬೇಡ ಅಂತ ಡಿಕೆಶಿ ಕೈ ಮುಗಿದು ಕೇಳಿಕೊಂಡಿದ್ದಾರೆ. ಜಿಲ್ಲೆಯ ಬನಹಟ್ಟಿ ನಗರದಲ್ಲಿ ನೇಕಾರ ಸಂವಾದಕ್ಕೆ ಆಗಮಿಸಿದ ವೇಳೆ ಈ ಘಟನೆ ನಡೆದಿದೆ.

ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಕ್ರಾಸ್ ಬಳಿ ಡಿ.ಕೆ.ಶಿವಕುಮಾರ್​ಗೆ ಅಭಿಮಾನಿಗಳು ಸೇಬಿನ ಹಾರ ಹಾಕಿ ಭರ್ಜರಿ ಸ್ವಾಗತ ಮಾಡಿದ್ದಾರೆ. ಕ್ರೇನ್ ಮೂಲಕ ಸುಮಾರು ಒಂದು ಕ್ವಿಂಟಾಲ್ ಸೇಬಿನ ಹಣ್ಣಿನ ಹಾರ ಹಾಕಿ, ಹೂಮಳೆ ಸುರಿಸಿ ಅವರ ಬೆಂಬಲಿಗರು ಸ್ವಾಗತಿಸಿದ್ದಾರೆ. ಅಲ್ಲದೆ ಡಿಕೆ ಡಿಕೆ ಎಂದು ಘೋಷಣೆ ಕೂಗುವ ಜೊತೆಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಜಿ.ಮಾದೇಗೌಡ ನಿಧನಕ್ಕೆ ಡಿಕೆಶಿ ಸಂತಾಪ

ನಾನು ವಿದ್ಯಾರ್ಥಿ ಜೀವನದಿಂದಲೂ ಮಾಜಿ ಸಂಸದ ಜಿ.ಮಾದೇಗೌಡ ಅವರನ್ನು ನೋಡುತ್ತಿದ್ದೇನೆ. 45 ವರ್ಷಗಳಿಂದ ಅವರ ಜತೆ ರಾಜಕೀಯ ಸಂಪರ್ಕದಲ್ಲಿದ್ದೆ. ರೈತ ಮುಖಂಡ ಜಿ.ಮಾದೇಗೌಡ ನಿಧನದಿಂದ ನೋವಾಗಿದೆ ಎಂದು ಸಂತಾಪ ಸೂಚಿಸಿದ ಶಿವಕುಮಾರ್, ನಿಧನದ ಸುದ್ದಿ ತಿಳಿದ ಬಳಿಕ ಕಾರ್ಯಕ್ರಮ ರದ್ದು ಮಾಡಿ, ಹೆಲಿಕಾಪ್ಟರ್ ಮೂಲಕ ಅಂತಿಮ ದರ್ಶನಕ್ಕೆ ಬರಬೇಕು ಅಂತ ಅಂದುಕೊಂಡಿದ್ದೆ. ಆದರೆ ಮೋಡ ಕವಿದ ವಾತವಾರಣ ಇರುವ ಕಾರಣ, ಹೆಲಿಕಾಪ್ಟರ್ ಪ್ರಯಾಣ ಸೂಕ್ತವಲ್ಲ ಎಂದು ಪೈಲಟ್ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ

ಅವಾಚ್ಯ ಶಬ್ದಗಳನ್ನು ಬಳಸಿ ತಹಶೀಲ್ದಾರ್ ಜೊತೆ ಕಿರಿಕ್, ತ್ಯಾಮಗೊಂಡ್ಲು ಪೊಲೀಸರಿಂದ ಮೂವರ ಬಂಧನ

‘ಏನೇನೂ ಇಲ್ಲ..ಎಲ್ಲ ಸರ್ವನಾಶವಾಯ್ತು..’-ಉಕ್ಕುಕ್ಕಿ ಬಂದು ಎಲ್ಲವನ್ನೂ ನಾಶ ಮಾಡುತ್ತಿರುವ ಪ್ರವಾಹಕ್ಕೆ ಬೆಚ್ಚಿದ ಯುರೋಪ್​, 170 ಮಂದಿ ಸಾವು

(DK Shivakumar got angry against the fans in Bagalkot)