ಅವಾಚ್ಯ ಶಬ್ದಗಳನ್ನು ಬಳಸಿ ತಹಶೀಲ್ದಾರ್ ಜೊತೆ ಕಿರಿಕ್, ತ್ಯಾಮಗೊಂಡ್ಲು ಪೊಲೀಸರಿಂದ ಮೂವರ ಬಂಧನ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಹಶಿಲ್ದಾರ್ ಕೆ.ಮಂಜುನಾಥ್ ಕರ್ತ್ಯವ್ಯದ ತ್ಯಾಮಗೊಂಡ್ಲುಗೆ ತೆರಳುತ್ತಿದ್ದು, ಈ ವೇಳೆ ತ್ಯಾಮಗೊಂಡ್ಲುನಲ್ಲಿ ರಸ್ತೆಯಲ್ಲಿ ಕಾರು, ಟೆಂಪೋ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಗೊಳಿಸಿದ ಹಿನ್ನೆಲೆ ರಾಜು @ ಬುಲೇಟ್ ರಾಜ, ಮಂಜುನಾಥ್ @ ದೌಲತ್ ಮಂಜ, ರಂಗಸ್ವಾಮಿ @ ರಂಗ ಎನ್ನುವ ಮೂರು ಜನ ವ್ಯಕ್ತಿಗಳನ್ನ ತ್ಯಾಮಗೊಂಡ್ಲು ಪೊಲೀಸರು ಬಂದಿಸಿದ್ದಾರೆ.

ಅವಾಚ್ಯ ಶಬ್ದಗಳನ್ನು ಬಳಸಿ ತಹಶೀಲ್ದಾರ್ ಜೊತೆ ಕಿರಿಕ್, ತ್ಯಾಮಗೊಂಡ್ಲು ಪೊಲೀಸರಿಂದ ಮೂವರ ಬಂಧನ
ತಹಶೀಲ್ದಾರ್ ಕೆ.ಮಂಜುನಾಥ್ ಮತ್ತು ಆರೋಪಿಗಳು

ನೆಲಮಂಗಲ: ತಹಶೀಲ್ದಾರ್ ಜತೆ ಕಿರಿಕ್ ಮಾಡಿಕೊಂಡ ಹಿನ್ನೆಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ರಾಜು ಅಲಿಯಾಸ್ ಬುಲೆಟ್ ರಾಜ, ಮಂಜುನಾಥ, ರಂಗಸ್ವಾಮಿ ಅಲಿಯಾಸ್ ರಂಗನನ್ನು ಪೊಲೀಸರು ಬಂಧಿಸಿದ್ದಾರೆ.

ರಸ್ತೆಯಲ್ಲಿ ಕಾರು, ಟೆಂಪೊ ನಿಲ್ಲಿಸಿಕೊಂಡು ಸಾರ್ವಜನಿಕರಿಗೆ ಅಡ್ಡಿ ಮಾಡುತ್ತಿದ್ದ ಹಾಗೂ ತಹಶೀಲ್ದಾರ್ ಕರ್ತವ್ಯಕ್ಕೆ ತೆರಳುವ ವೇಳೆ ವಾಹನ ತೆರವಿಗೆ ಸೂಚಿಸಿದಾಗ ತಹಶೀಲ್ದಾರ್ ಜೊತೆ ಕಿರಿಕ್ ಮಾಡಿದ ಹಿನ್ನೆಲೆ ತ್ಯಾಮಗೊಂಡ್ಲು ಪೊಲೀಸರು ಮೂರು ಜನ ಆರೋಪಿಗಳನ್ನ ಬಂಧಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಹಶಿಲ್ದಾರ್ ಕೆ.ಮಂಜುನಾಥ್ ಕರ್ತ್ಯವ್ಯದ ತ್ಯಾಮಗೊಂಡ್ಲುಗೆ ತೆರಳುತ್ತಿದ್ದು, ಈ ವೇಳೆ ತ್ಯಾಮಗೊಂಡ್ಲುನಲ್ಲಿ ರಸ್ತೆಯಲ್ಲಿ ಕಾರು, ಟೆಂಪೋ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಗೊಳಿಸಿದ ಹಿನ್ನೆಲೆ ರಾಜು @ ಬುಲೇಟ್ ರಾಜ, ಮಂಜುನಾಥ್ @ ದೌಲತ್ ಮಂಜ, ರಂಗಸ್ವಾಮಿ @ ರಂಗ ಎನ್ನುವ ಮೂರು ಜನ ವ್ಯಕ್ತಿಗಳನ್ನ ತ್ಯಾಮಗೊಂಡ್ಲು ಪೊಲೀಸರು ಬಂದಿಸಿದ್ದಾರೆ. ತಹಶಿಲ್ದಾರ್ ಎಂದು ಗೊತ್ತಿದ್ದರು ಸಹ ದೂಂಡಾ ವರ್ತನೆ, ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಶಬ್ದ ಬಳಕೆ ಆರೋಪದಡಿ ತಹಶಿಲ್ದಾರ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಪೊಲೀಸರು ಆರೋಪಿಗಳನ್ನ ಬಂದಿಸಿ IPC1860 ಕಲಂ 341, 34, 504, 353ರೀತ್ಯಾ ಕೇಸ್ ಹಾಕಿ ಬಂಧಿಸಿದ್ದಾರೆ.

ಇದನ್ನೂ ಓದಿ: ನೆಲಮಂಗಲದಲ್ಲಿ ವಾಮಾಚಾರ: 10 ವರ್ಷದ ಬಾಲಕಿಯ ಅಪಹರಣ, ಬಲಿಗೆ ಯತ್ನ; ಅರ್ಚಕ ಸೇರಿದಂತೆ ಐದು ಮಂದಿ ಅರೆಸ್ಟ್