ಒಂದೇ ದಿನದಲ್ಲಿ 15 ಜನರನ್ನು ಕಚ್ಚಿದ ಹುಚ್ಚುನಾಯಿ, ಗ್ರಾಮಸ್ಥರಲ್ಲಿ ಆತಂಕ

ಯರಝರವಿ, ಮಳಗಲಿ, ಹೊಸೂರು ಗ್ರಾಮಗಳು ಸೇರಿದಂತೆ ಮೂರು ಗ್ರಾಮಗಳ ಜನರ ಮೇಲೆ ಎರಗಿದೆ. ಮಲ್ಲವ್ವ, ಬಾಳಯ್ಯ, ಲಲಿತಾ, ಮಲ್ಲಯ್ಯ, ಸಿದ್ಧಪ್ಪ, ಸವಿತಾ ಎಂಬುವವರ ಮೇಲೆ ದಾಳಿ ಮಾಡಿದೆ.

ಒಂದೇ ದಿನದಲ್ಲಿ 15 ಜನರನ್ನು ಕಚ್ಚಿದ ಹುಚ್ಚುನಾಯಿ, ಗ್ರಾಮಸ್ಥರಲ್ಲಿ ಆತಂಕ

ಬೆಳಗಾವಿ: ಜಿಲ್ಲೆಯಲ್ಲಿ ಹುಚ್ಚುನಾಯಿಯ ಹಾವಳಿ ಹೆಚ್ಚಾಗಿದೆ. ಒಂದೇ ಒಂದು ಹುಚ್ಚು ನಾಯಿ ಒಂದೇ ದಿನ ಎರಡು ಗಂಟೆ ಅವಧಿಯಲ್ಲಿ ಮೂರು ಗ್ರಾಮದ 15ಕ್ಕೂ ಹೆಚ್ಚು ಜನರ ಮೇಲೆ ಅಟ್ಯಾಕ್ ಮಾಡಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿ ಹುಚ್ಚುನಾಯಿ ನಿನ್ನೇ ಒಂದೇ ದಿನ 15ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದೆ.

ಯರಝರವಿ, ಮಳಗಲಿ, ಹೊಸೂರು ಗ್ರಾಮಗಳು ಸೇರಿದಂತೆ ಮೂರು ಗ್ರಾಮಗಳ ಜನರ ಮೇಲೆ ಎರಗಿದೆ. ಮಲ್ಲವ್ವ, ಬಾಳಯ್ಯ, ಲಲಿತಾ, ಮಲ್ಲಯ್ಯ, ಸಿದ್ಧಪ್ಪ, ಸವಿತಾ ಎಂಬುವವರು ಸೇರಿ ಒಟ್ಟು 15 ಜನರ ಮೇಲೆ ದಾಳಿ ಮಾಡಿದೆ. ಗಾಯಗೊಂಡವರನ್ನು ಯರಗಟ್ಟಿ ಸರ್ಕಾರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹುಚ್ಚುನಾಯಿಯ ದಾಳಿ ಹಿನ್ನೆಲೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

ಇದನ್ನೂ ಓದಿ: ಜಿಂಕೆ ಮೇಲೆ ನಾಯಿ ದಾಳಿ: ಹೋರಾಟದಲ್ಲಿ ಸಾವಿಗೀಡಾದ ಸಾಧು ಪ್ರಾಣಿ ಅಂತ್ಯಸಂಸ್ಕಾರದ ವೇಳೆ ಕಣ್ಣೀರಿಟ್ಟ ಸ್ಥಳೀಯರು

Click on your DTH Provider to Add TV9 Kannada