Loading video

ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು

|

Updated on: Oct 12, 2024 | 4:05 PM

ಬಾಗಲಕೋಟೆ ಜಿಲ್ಲೆಯಲ್ಲಿ ನಿನ್ನೆ(ಅ.11) ರಾತ್ರಿ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಈರುಳ್ಳಿ ಹಾಳಾಗಿದೆ. ತಾಲೂಕಿನ ಸೀಗಿಕೇರಿ, ಬೆನಕಟ್ಟಿ ಹಾಗೂ ಹೊನ್ನಾಕಟ್ಟಿ ಸೇರಿ ಹಲವು ಭಾಗದಲ್ಲಿ ರಾಶಿ ಮಾಡಲು ಕಿತ್ತುಹಾಕಿದ್ದ ಈರುಳ್ಳಿ ಬೆಳೆ, ಭಾರಿ ಮಳೆಯಿಂದ ಕೊಚ್ಚಿ ಹೋಗಿದೆ. ಪ್ರತಿ ರೈತರ ಲಕ್ಷಾಂತರ ರೂಪಾಯಿ ಈರುಳ್ಳಿ ನಾಶವಾಗಿ ರೈತರು ಕಂಗಾಲಾಗಿದ್ದಾರೆ.

ಬಾಗಲಕೋಟೆ, ಅ.12: ಬಾಗಲಕೋಟೆ ಜಿಲ್ಲೆಯಲ್ಲಿ ನಿನ್ನೆ(ಅ.11) ರಾತ್ರಿ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಈರುಳ್ಳಿ ಹಾಳಾಗಿದೆ. ತಾಲೂಕಿನ ಸೀಗಿಕೇರಿ, ಬೆನಕಟ್ಟಿ ಹಾಗೂ ಹೊನ್ನಾಕಟ್ಟಿ ಸೇರಿ ಹಲವು ಭಾಗದಲ್ಲಿ ರಾಶಿ ಮಾಡಲು ಕಿತ್ತುಹಾಕಿದ್ದ ಈರುಳ್ಳಿ ಬೆಳೆ, ಭಾರಿ ಮಳೆಯಿಂದ ಕೊಚ್ಚಿ ಹೋಗಿದೆ. ಪ್ರತಿ ರೈತರ ಲಕ್ಷಾಂತರ ರೂಪಾಯಿ ಈರುಳ್ಳಿ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದೇ ರೈತರು ಪರದಾಟ ನಡೆಸಿದ್ದಾರೆ. ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ರೈತರನ್ನು ಕಂಗಾಲಾಗಿಸಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ