ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ಜನರ ಸಮಾಧಿಗಳ ಮೇಲೆ ಸರ್ಕಾರ ನಡೆಸುವುದು ಬಿಜೆಪಿಗೆ ಮಾತ್ರ ಗೊತ್ತು: ಲಕ್ಷ್ಮಿ ಹೆಬ್ಬಾಳ್ಕರ್

Updated on: May 20, 2025 | 4:37 PM

ಸಂಪುಟ ಪುನಾರಚನೆ ತನ್ನ ವ್ಯಾಪ್ತಿಗೆ ಬಾರದ ವಿಷಯವೆಂದ ಲಕ್ಷ್ಮಿ ಹೆಬ್ಬಾಳ್ಕರ್, ಅದೇನಿದ್ದರೂ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರ ಅಂತ ಹೇಳಿದರು. ಗೃಹ ಲಕ್ಷ್ಮಿ ಹಣ ಬಿಡುಗಡೆಗೆ ತಡವಾಗಿರುವುದನ್ನು ಅಂಗೀಕರಿಸಿದ ಅವರು ಏಪ್ರಿಲ್ ತಿಂಗಳ ಬಿಲ್ ತಾನು ಮಾಡುತ್ತಿದ್ದೇನೆ, ಫೆಬ್ರುವರಿ ಮತ್ತು ಮಾರ್ಚ್ ತಿಂಗಳ ಹಣ ಕೆಲ ಸಮಸ್ಯೆಗಳಿಂದಾಗಿ ತಡೆ ಹಿಡಿಯಲಾಗಿತ್ತು ಅಂತ ಹೇಳಿದರು.

ವಿಜಯನಗರ, ಮೇ 20: ಜನರ ಸಮಾಧಿ ಮೇಲೆ ಅಧಿಕಾರ ನಡೆಸುವ ಮತ್ತು ಮೋಜು ಮಸ್ತಿಗಾಗಿ ಸಾಧನಾ ಸಮಾವೇಶ ಆಯೋಜಿಸುವ ಸರ್ಕಾರ ತಮ್ಮದಲ್ಲ, ಅದೇನಿದ್ದರೂ ಬಿಜೆಪಿಯವರಿಗೆ ಅನ್ವಯಿಸುವ ಮಾತು, ಕೋರೋನಾ ಸಮಯದಲ್ಲಿ ಅವರೇನು ಮಾಡಿದರು ಅನ್ನೋದನ್ನು ನೆನಪಿಸಲು ಇಚ್ಛಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದರು. ವಾಗ್ದಾನ ಮಾಡಿದ್ದ ಎಲ್ಲ ಭರವಸೆಗಳನ್ನು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಮುಟ್ಟಿಸಿ ಅವರು ಬದುಕನ್ನು ಹಸನು ಮಾಡಲು ಪ್ರಯತ್ನಿಸಿದ ಸಾರ್ಥಕ ಎರಡು ವರ್ಷಗಳ ಸಾಧನೆಯನ್ನು ಆಚರಿಸುತ್ತಿದ್ದೇವೆ, ಮುಂದಿನ ಮೂರು ವರ್ಷಗಳಲ್ಲಿ ಜನರಿಗೆ ಒದಗಿಸುತ್ತಿರುವ ಸೇವೆಯನ್ನು ಮುಂದುವರಿಸುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಇದನ್ನೂ ಓದಿ:  ಏನು ಸಾಧನೆ ಮಾಡಿದ್ದಾರೆ ಅಂತ ಸಿದ್ದರಾಮಯ್ಯ ಸಾಧನಾ ಸಮಾವೇಶ ಮಾಡುತ್ತಿದ್ದಾರೆ? ಹೆಚ್ ವಿಶ್ವನಾಥ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ