Loading video

ಕೇವಲ ಕುಮಾರಸ್ವಾಮಿ ಹೇಳುವುದನ್ನೇ ಯಾಕೆ ಬರೆಯುತ್ತೀರಿ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

Updated on: Nov 18, 2024 | 12:07 PM

ಗ್ಯಾರಂಟಿ ಯೋಜನೆಗಳ ಮೂಲಕ ಕರ್ನಾಟಕ ಸರ್ಕಾರ ಪ್ರತಿವರ್ಷ ₹ 56,000 ಕೋಟಿಗಳನ್ನು ಬಡವರಿಗೆ ಹಂಚುತ್ತಿದೆ, ಖಜಾನೆ ಖಾಲಿಯಾಗಿದೆ ಎಂದು ಹೇಳುವ ಬಿಜೆಪಿ ನಾಯಕರು ತಮ್ಮ ಆಡಳಿತ ಇರುವ ರಾಜ್ಯಗಳಲ್ಲಿ ಯಾಕೆ ಬಡವರಿಗೆ ಸಹಾಯವಾಗುವ ಯೋಜನೆಗಳನ್ನು ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಬೆಂಗಳೂರು: ಕೇಂದ್ರ ಸರ್ಕಾರ 2023-24 ಬಜೆಟ್​ನಲ್ಲಿ ಭದ್ರಾ ಮೇಲ್ಡಂಡೆ ಯೋಜನೆ ಘೋಷಿಸಿದ ಹಣವನ್ನು ಬಿಡುಗಡೆ ಮಾಡಿಲ್ಲ, ಹಾಗೆಯೇ 15 ನೇ ಹಣಕಾಸು ಆಯೋಗ ರಾಜ್ಯಕ್ಕೆ ₹ 11,595 ಕೋಟಿ ನೀಡಬೇಕೆಂದು ಹೇಳಿದೆ, ಆದರೆ ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ, ಇದೆಲ್ಲ ಮಾಧ್ಯಮಗಳಲ್ಲಿ ಬರಲ್ಲ, ಕೇವಲ ಹೆಚ್ ಡಿ ಕಮಾರಸ್ವಾಮಿ ಹೇಳಿದ್ದನ್ನು ಮಾತ್ರ ಯಾಕೆ ಬರೆಯುತ್ತೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಜೋರಾಯ್ತು ಮುಡಾ ವಾರ್: ಸಿದ್ದರಾಮಯ್ಯರನ್ನೇ ಗಡಿಪಾರು ಮಾಡಲಿ, ಕಾಂಗ್ರೆಸ್ ದೂರಿಗೆ ಸ್ನೇಹಮಯಿ ಕೃಷ್ಣ ತಿರುಗೇಟು