ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳನ್ನು ಕರೆಸಿ ಮಾತಾಡುವ ಅಧಿಕಾರ ಪ್ರಧಾನಿ ಮೋದಿಗೆ ಮಾತ್ರ ಇದೆ, ಅವರ ಮಧ್ಯಸ್ಥಿಕೆ ಕೋರಿದ್ದೇವೆ: ಸಿದ್ದರಾಮಯ್ಯ

|

Updated on: Sep 20, 2023 | 2:08 PM

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ ಒಂದು ಪತ್ರ ಬರೆದು ಅವರ ಮಧ್ಯಸ್ಥಿಕೆ ಕೋರಿರುವುದಾಗಿ ಹೇಳಿದ ಸಿದ್ದರಾಮಯ್ಯ ಎರಡೂ ರಾಜ್ಯಗಳ ನಾಯಕರನ್ನು ಕರೆಸಿ ಮಾತಾಡುವ ಅಧಿಕಾರ ಅವರಿಗೆ ಮಾತ್ರ ಇರುವುದರಿಂದ ಅವರು ಸಭೆ ನಡೆಸಬೇಕೆಂದು ಮನವಿ ಮಾಡಿದ್ದೇವೆ ಎಂದರು. ಪ್ರಾಧಿಕಾರದ ಆದೇಶ ವಿರುದ್ಧ ಮತ್ತೊಮ್ಮೆ ಸುಪ್ರೀಮ್ ಕೋರ್ಟ್ ಮೊರೆ ಹೋಗುವ ಯೋಚನೆಯೂ ತಮ್ಮ ಸರ್ಕಾರಕ್ಕಿದೆ ಎಂದು ಸಿದ್ದರಾಮಯ್ಯ ಹೇಳಿದರು.

ದೆಹಲಿ: ತಮಿಳುನಾಡುಗೆ ಕಾವೇರಿ ನದಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶದಿಂದ ರಾಜ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಷ್ಟ್ರದ ರಾಜಧಾನಿಯ ಖಾಸಗಿ ಹೋಟೆಲೊಂದರಲ್ಲಿ ಕರ್ನಾಟಕ ಸಂಸದರ ಸಭೆಯನ್ನು ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದರು. ಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ವಿವರಿಸಿದ ಸಿದ್ದರಾಮಯ್ಯ, ನಿನ್ನೆ ರಾತ್ರಿ ಶಿವಕುಮಾರ್ ಅವರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜೊತೆ ಮಾತಾಡಿ ಕೇಂದ್ರ ಜಲಸಂಪನ್ಮೂಲ ಸಚಿವರ ಜೊತೆ ಒಂದು ಸಭೆ ಏರ್ಪಡಿಸುವಂತೆ ಮನವಿ ಮಾಡಿದ್ದರು ಮತ್ತು ಜೋಶಿ ಇಂದು ಸಾಯಂಕಾಲ 4.30 ಕ್ಕೆ ಅದರ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ (PM Narendra Modi) ಒಂದು ಪತ್ರ ಬರೆದು ಅವರ ಮಧ್ಯಸ್ಥಿಕೆ ಕೋರಿರುವುದಾಗಿ ಹೇಳಿದ ಸಿದ್ದರಾಮಯ್ಯ ಎರಡೂ ರಾಜ್ಯಗಳ ನಾಯಕರನ್ನು ಕರೆಸಿ ಮಾತಾಡುವ ಅಧಿಕಾರ ಅವರಿಗೆ ಮಾತ್ರ ಇರುವುದರಿಂದ ಅವರು ಸಭೆ ನಡೆಸಬೇಕೆಂದು ಮನವಿ ಮಾಡಿದ್ದೇವೆ ಎಂದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ವಿರುದ್ಧ ಮತ್ತೊಮ್ಮೆ ಸುಪ್ರೀಮ್ ಕೋರ್ಟ್ ಮೊರೆ ಹೋಗುವ ಯೋಚನೆಯೂ ತಮ್ಮ ಸರ್ಕಾರಕ್ಕಿದೆ ಎಂದು ಸಿದ್ದರಾಮಯ್ಯ ಹೇಳಿದರು.
ತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on