ಬಿಜೆಪಿ ಸಂಸದರು ಕರ್ನಾಟಕ ಸರ್ಕಾರದ ಜೊತೆಗಿದ್ದಾರೆ, ನಮ್ಮನ್ನು ವಿನಾಕಾರಣ ದೂಷಿಸುವುದು ಬೇಡ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ
ಸೆಪ್ಟೆಂಬರ್ 13 ರಂದು ನಡೆದ ಸಿಡಬ್ಲ್ಯೂಎಂಎ ಸಭೆಯಲ್ಲಿ ಸಿದ್ದರಾಮಯ್ಯ ಸರ್ಕಾರ 2,500 ಕ್ಯೂಸೆಕ್ಸ್ ನೀರು ತಮಿಳುನಾಡುಗೆ ಹರಿಸಲು ಒಪ್ಪಿಕೊಂಡು ಈಗ ಸಭೆ ಕರೆದಿದೆ. ಇದರ ಆರ್ಥವೇನು? ಮಾಡೋದ್ದನ್ನೆಲ್ಲ ಮಾಡಿ ಸಂಸದರನ್ನು ದೂರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ದೆಹಲಿ: ತಮಿಳುನಾಡುಗೆ 5,000 ಕ್ಯೂಸೆಕ್ಸ್ ಕಾವೇರಿ ನದಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿದ ಬಳಿಕ ತಲೆದೋರಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಗರದಲ್ಲಿಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಮಾತಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ (Pralhad Joshi) ಸುಖಾಸುಮ್ಮನೆ ಬಿಜೆಪಿ ಸಂಸದರ ಮೇಲೆ ಗೂಬೆ ಕೂರಿಸುತ್ತಿರುವ ರಾಜ್ಯ ಸರ್ಕಾರವನ್ನು (Karnataka government) ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯ ಸರ್ಕಾರ ಆಗಸ್ಟ್ 12 ರಿಂದ ತಮಿಳುನಾಡುಗೆ ನೀರು ಬಿಡುತ್ತಿದೆ. ಇಂಡಿಯಾ ಮೈತ್ರಿಕೂಟದ ಭಾಗಿಯಾಗುರುವ ಡಿಎಂಕೆಯನ್ನು ಸಂತುಷ್ಟಗೊಳಿಸಲು ಸಿದ್ದರಾಮಯ್ಯ ಸರ್ಕಾರ ನೀರು ಬಿಡುತ್ತಿದೆ. ನೀರು ಬಿಡುವಾಗ ಸರ್ಕಾರಕ್ಕೆ ಬಿಜೆಪಿ ಸಂಸದರ ನೆನಪಾಗಲಿಲ್ಲವೇ ಅಂತ ಜೋಶಿ ಪ್ರಶ್ನಿಸಿದರು. ಸೆಪ್ಟೆಂಬರ್ 13 ರಂದು ನಡೆದ ಸಿಡಬ್ಲ್ಯೂಎಂಎ ಸಭೆಯಲ್ಲಿ ಸಿದ್ದರಾಮಯ್ಯ ಸರ್ಕಾರ 2,500 ಕ್ಯೂಸೆಕ್ಸ್ ನೀರು ತಮಿಳುನಾಡುಗೆ ಹರಿಸಲು ಒಪ್ಪಿಕೊಂಡು ಈಗ ಸಭೆ ಕರೆದಿದೆ. ಇದರ ಆರ್ಥವೇನು? ಮಾಡೋದ್ದನ್ನೆಲ್ಲ ಮಾಡಿ ಸಂಸದರನ್ನು ದೂರುವುದು ಸರಿಯಲ್ಲ. ಬಿಜೆಪಿ ಸಂಸದರು ನಿಸ್ಸಂದೇಹವಾಗಿ ರಾಜ್ಯ ಸರ್ಕಾರದ ಜೊತೆ ಇದ್ದಾರೆ ಎಂದ ಜೋಶಿ, ಕಳೆದ ರಾತ್ರಿ ಡಿಕೆ ಶಿವಕುಮಾರ್ ತಮ್ಮ ಮನೆಗೆ ಬಂದು ಕೇಂದ್ರ ಜಲಸಂಪನ್ಮೂಲ ಸಚಿವರ ಜೊತೆ ಸಭೆಗಾಗಿ ಮನವಿ ಮಾಡಿದ್ದಾರೆ, ಅದನ್ನು ಏರ್ಪಡಿಸುವುದಾಗಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ