ದೆಹಲಿಯಲ್ಲಿ ನಡೆಯುತ್ತಿರುವ ಕಾವೇರಿ ಜಲವಿವಾದ ಸಭೆಗೆ ಆಗಮಿಸಿದ ಪ್ರಲ್ಹಾದ್ ಜೋಶಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಸಿದ್ದರಾಮಯ್ಯ

ದೆಹಲಿಯಲ್ಲಿ ನಡೆಯುತ್ತಿರುವ ಕಾವೇರಿ ಜಲವಿವಾದ ಸಭೆಗೆ ಆಗಮಿಸಿದ ಪ್ರಲ್ಹಾದ್ ಜೋಶಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:Sep 20, 2023 | 12:07 PM

ಸಂಸದರಾದ ಡಿವಿ ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲ್ ಅವರಿಗೆ ವಿಶ್ ಮಾಡುತ್ತಾ ಮುಂದೆ ಬಂದಾಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತ ಸಿದ್ದರಾಮಯ್ಯ ಎದ್ದುನಿಂತು ಅವರನ್ನು ಸ್ವಾಗತಿಸುತ್ತಾರೆ. ಸಿದ್ದರಾಮಯ್ಯ, ಜೋಶಿಯವರ ಕೈಹಿಡಿದು ಆತ್ಮೀಯವಾಗಿ ಮಾತಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ದೆಹಲಿ: ತಮಿಳುನಾಡುಗೆ ಕಾವೇರಿ ನದಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶದಿಂದ ರಾಜ್ಯದಲ್ಲಿ ಉಂಟಾಗಿರುವ ಸಂಕಷ್ಟದ ಸ್ಥಿತಿಯ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ರಾಷ್ಟ್ರದ ರಾಜಧಾನಿಯ ಖಾಸಗಿ ಹೋಟೆಲೊಂದರಲ್ಲಿ ಕರ್ನಾಟಕ ರಾಜ್ಯ ಜನ ಪ್ರತಿನಿಧಿಗಳ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ನೇತೃತ್ವದಲ್ಲಿ ಶುರುವಾಗಿದೆ. ಸಂಸತ್ತಿನ ವಿಶೇಷ ಅಧಿವೇಶನ (special session of Parliament) ಜಾರಿಯಲ್ಲಿರುವುದರಿಂದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸಭೆಗೆ ಕೊಂಚ ತಡವಾಗಿ ಆಗಮಿಸಿದರು. ಮೀಟಿಂಗ್ ಹಾಲ್ ಪ್ರವೇಶಿಸುತ್ತಿದ್ದಂತೆಯೇ ಅವರು ಎಲ್ಲರಿಗೂ ನಮಸ್ಕರಿಸುತ್ತಾ ಕೈ ಕುಲುಕುತ್ತಾ ಮತ್ತು ಯೋಗಕ್ಷೇಮ ವಿಚಾರಿಸುತ್ತಾ ತಮಗಾಗಿ ಮೀಸಲಾಗಿದ್ದ ಆಸನದ ಕಡೆ ಸಾಗುತ್ತಾರೆ. ಸಂಸದರಾದ ಡಿವಿ ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲ್ ಅವರಿಗೆ ವಿಶ್ ಮಾಡುತ್ತಾ ಮುಂದೆ ಬಂದಾಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತ ಸಿದ್ದರಾಮಯ್ಯ ಎದ್ದುನಿಂತು ಅವರನ್ನು ಸ್ವಾಗತಿಸುತ್ತಾರೆ. ಸಿದ್ದರಾಮಯ್ಯ, ಜೋಶಿಯವರ ಕೈಹಿಡಿದು ಆತ್ಮೀಯವಾಗಿ ಮಾತಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 20, 2023 11:42 AM