ಪಾಕಿಸ್ತಾನವು ಹೆದರಿ ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ: ಪೆಂಟಗನ್ನ ಮಾಜಿ ಅಧಿಕಾರಿ
ಭಾರತವು ವಾಯು ನೆಲೆಯನ್ನು ನಿಷ್ಕ್ರಿಯಗೊಳಿಸಿದ ನಂತರ ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಹೆದರಿ ಓಡಿ ಹೋಗಿದೆ ಎಂದು ಅಮೆರಿಕದ ಪೆಂಟಗನ್ನ ಮಾಜಿ ಉದ್ಯೋಗಿ ರೂಬಿನ್ ಹೇಳಿದ್ದಾರೆ. ಭಾರತವು ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತವು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಿತ್ತು. ಪಾಕಿಸ್ತಾನವು ಪ್ರತಿ ದಾಳಿ ನಡೆಸಿ ಭಾರತದ ಅಮಾಯಕರನ್ನು ಬಲಿಪಡೆದಿತ್ತು. ಅದಕ್ಕೆ ಪ್ರತಿಯಾಗಿ ಭಾರತ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ವಾಯುನೆಲೆಗಳು ಧ್ವಂಸಗೊಂಡಿದ್ದವು.
ವಾಷಿಂಗ್ಟನ್, ಮೇ 15: ಭಾರತ(India)ವು ವಾಯು ನೆಲೆಯನ್ನು ನಿಷ್ಕ್ರಿಯಗೊಳಿಸಿದ ನಂತರ ‘ಪಾಕಿಸ್ತಾನವು ಹೆದರಿ ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ’ ಎಂದು ಅಮೆರಿಕದ ಪೆಂಟಗನ್ನ ಮಾಜಿ ಉದ್ಯೋಗಿ ರುಬಿನ್ ಹೇಳಿದ್ದಾರೆ. ಭಾರತವು ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತವು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಿತ್ತು. ಪಾಕಿಸ್ತಾನವು ಪ್ರತಿ ದಾಳಿ ನಡೆಸಿ ಭಾರತದ ಅಮಾಯಕರನ್ನು ಬಲಿಪಡೆದಿತ್ತು. ಅದಕ್ಕೆ ಪ್ರತಿಯಾಗಿ ಭಾರತ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ವಾಯುನೆಲೆಗಳು ಧ್ವಂಸಗೊಂಡಿದ್ದವು.
ಇದಕ್ಕೆ ಬೆದರಿದ ಪಾಕ್ ಭಾರತವನ್ನು ನೋಡಿ ಹೆದರಿ ಓಡಿ ಹೋಗಿದೆ ಎಂದಿದ್ದಾರೆ. ಪಾಕಿಸ್ತಾನ ಮಿಲಿಟರಿ ಭಾರತದೆದುರು ಸೋತಿದೆ, ಭಾರತವು ವಿಜಯಶಾಲಿಯಾಗಿದೆ. ಭಯೋತ್ಪಾದಕ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನಿ ಅಧಿಕಾರಿಗಳು ಭಾಗವಹಿಸಿದ್ದನ್ನು ನೋಡಿದರೆ, ಭಯೋತ್ಪಾದಕ ಮತ್ತು ಐಎಸ್‌ಐ ಅಥವಾ ಪಾಕಿಸ್ತಾನಿ ಸಶಸ್ತ್ರ ಪಡೆಗಳ ಸದಸ್ಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ತೋರುತ್ತದೆ. ಮೂಲತಃ, ಪಾಕಿಸ್ತಾನವು ತನ್ನದೇ ಆದ ವ್ಯವಸ್ಥೆಯಿಂದ ಕೊಳೆಯನ್ನು ಹೊರತೆಗೆಯಬೇಕೆಂದು ಜಗತ್ತು ಒತ್ತಾಯಿಸುತ್ತೆ ಎಂದಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ