Hassan News; ಆಪರೇಷನ್ ಸಿಂಗಾಪುರ್ ಒಂದು ಸುಳ್ಳು ಸುದ್ದಿ, ಮಾಧ್ಯಮಗಳಿಗೆ ಸುದ್ದಿ ಬೇಕು ಅಷ್ಟೇ: ಕೆಎಂ ಶಿವಲಿಂಗೇಗೌಡ

ಅರುಣ್​ ಕುಮಾರ್​ ಬೆಳ್ಳಿ

Updated on: Jul 26, 2023 | 5:19 PM

ಡಿಕೆ ಶಿವಕುಮಾರ್ ವಿಷಯದ ಬಗ್ಗೆ ಮಾತಾಡಿದ್ದಾರಲ್ಲ ಅಂತ ಕೇಳಿದ್ದಕ್ಕೆ ಶಿವಲಿಂಗೇಗೌಡ, ಅವರಿಗೂ ಯಾರೋ ಹಾಗೆ ಹೇಳಿರುತ್ತಾರೆ, ಹಾಗಾಗಿ ಅದರ ಬಗ್ಗೆ ಮಾತಾಡಿರುತ್ತಾರೆ ಎಂದರು

ಹಾಸನ: ಜಿಲ್ಲೆಯ ಡಿಎಂ ಕುರ್ಕೆ ಗ್ರಾಮದಲ್ಲಿ ಮನೆಕುಸಿದು ನಿರ್ವಸತಿಗೊಂಡ ಕುಟುಂಬವೊಂದಕ್ಕೆ ಪರಿಹಾರ ವಿತರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅರಸೀಕರೆ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಆಪರೇಷನ್ ಸಿಂಗಾಪೂರ್ (Operation Singapore) ಒಂದು ಸುಳ್ಳು ವದಂತಿ ಅಂತ ಹೇಳಿದರು. ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅಂಥ ಆಪರೇಷನ್ ಮಾಡಬೇಕಾದರೆ ಸಿಂಗಾಪುರ್ ವರೆಗೆ ಹೋಗಬೇಕು, ಬೆಂಗಳೂರಲ್ಲಿ ಕೂತು ಮಾಡಕ್ಕಾಗಲ್ವಾ? ಅದೆಲ್ಲ ಸುಳ್ಳು ಸುದ್ದಿ, ಮಾಧ್ಯಮದವರಿಗೆ ಸುದ್ದಿ ಬೇಕು ಹಾಗಾಗಿ ಅಂಥದನ್ನೆಲ್ಲ ಸೃಷ್ಟಿ ಮಾಡುತ್ತಾರೆ ಎಂದು ಶಾಸಕರು ಹೇಳಿದರು. ಡಿಕೆ ಶಿವಕುಮಾರ್ ವಿಷಯದ ಬಗ್ಗೆ ಮಾತಾಡಿದ್ದಾರಲ್ಲ ಅಂತ ಕೇಳಿದ್ದಕ್ಕೆ ಶಿವಲಿಂಗೇಗೌಡ, ಅವರಿಗೂ ಯಾರೋ ಹಾಗೆ ಹೇಳಿರುತ್ತಾರೆ, ಹಾಗಾಗಿ ಅದರ ಬಗ್ಗೆ ಮಾತಾಡಿರುತ್ತಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.